ಅಣಬೆ
ಎನಿತು ಅಂದ ನಿನ್ನ ಶರೀರ
ಬಲಿತು ಬರಲು ಕೊಡೆಯಾಕಾರ
ಬಣ್ಣಿಸಲಾಗದು ನಿನ್ನಲಂಕಾರ
ನೋಡಲು ನಿನ್ನ, ಈ ಕಣ್ಣುಗಳೆರಡು ಸಾಕಾರ.
ನಾಮ ಹಲವು, ಇಲ್ಲ ರೆಂಬೆ, ಕೊಂಬೆ
ಅಕ್ಕಿ ಅಣಬೆ, ಅತ್ತಿ ಅಣಬೆ
ಮೊಟ್ಟೆ ಅಣಬೆ, ಹಾವಣಬೆ
ಇನ್ನೂ ಬೇಕೆ, ಕಲ್ಲಣಬೆ, ಸುರಳಿ ಅಣಬೆ.
ಸಸ್ಯವಲ್ಲ, ಶಿಲೆಯ ಮೇಲು ಸತ್ವವುಂಟು
ಪ್ರಾಣಿಯಲ್ಲ ಪ್ರಾಣವುಂಟು
ನೂರಕ್ಕೂ ಮಿಗಿಲಾದ ಜಾತಿಯುಂಟು
ನಿನಗೆ ಶಿಲೀಂದ್ರವೆಂಬ ಹೆಸರುಂಟು.
ಗ್ಲೈಸಿನ್, ಲೈಸಿನ್ ಗಳಂತಹ ಅತ್ಯವಶ್ಯಕ ಪ್ರೋಟೀನುಗಳುಂಟು
ನಿಯಾಸಿನ್, ಥೈಯಾಮಿನ್ ಗಳಂತಹ ಜೀವಸತ್ವಗಳುಂಟು
ಕ್ಯಾಲ್ಸಿಯಂ, ರಂಜಕ, ಕಬ್ಬಿಣಗಳಂತಹ ಖನಿಜಾಂಶಗಳುಂಟು
ಸೌಂದರ್ಯ ವರ್ಣನೆಗೆ ಚಿತ್ರಕಾರರ ನಂಟು ಉಂಟು.
ಜಿಟಿ ಜಿಟಿ ಮಳೆಗೆ ಬಂತು ನಿನ್ನ ಬೇರು
ರುಚಿಗೆ ಸಾಟಿ ಇಲ್ಲ ಅಣಬೆ ಸಾರು
ಘಮ-ಘಮ ನಿನ್ನ ತರ-ತರ ಗ್ರೇವಿ
ತಿಂದವನೆ ಬಲ್ಲ ಅಣಬೆಯ ಸವಿ.
– ಡಾ. ಆರ್. ಎಸ್. ರವೀಂದ್ರ (ರಾಸರ)
ಬೆಂಗಳೂರು ಜಿಲ್ಲೆ
Super sir . ಅಣಬೆಗಳ ವರ್ಣನೆ. ಚೆನ್ನಾಗಿ ಮೂಡಿ ಬಂದಿದೆ.