ಪರಿಸರ ಉಳಿಸಿ

ಪರಿಸರ ಉಳಿಸಿ

ಸ್ವಚ್ಛಂದದ ಗಾಳಿಬೀಸಿ
ಸುವಾಸನೆಯ ಹೂವ ಹಾಸಿ
ಹಕ್ಕಿಗಳ ಇಂಚರದ ರಾಗ ಸೂಸಿ
ಅನುದಿನ ಸಾಗುತ್ತಿತ್ತು ಆರೋಗ್ಯದ ಭವ್ಯಜ್ಯೋತಿ

ಸ್ವಚ್ಛ ಗಾಳಿಯಿಲ್ಲ, ಹಕ್ಕಿಗಳ ಕಲರವವಿಲ್ಲ
ಸುವಾಸನೆಯ ಪರಿಮಳವಿಲ್ಲ
ಮಣ್ಣಲ್ಲಾಡುವ ಕಂದಮ್ಮಗಳ ನಗೆಯ ಶಬ್ಧ ಕೇಳುತ್ತಿಲ್ಲ
ಪರಿಸರವೆಲ್ಲ ನಾಶ ಮಾಡಿ ಮಾಲಿನ್ಯವ ಕೇಳೋರಿಲ್ಲ

ಕಾಂಕ್ರೀಟ್ ಜಂಗಲ್ ನ ನಿರ್ಮಾಣ ಮಾಡಿ
ಚರಂಡಿಯ ಗಬ್ಬುನಾಥ ಹರಡಿ
ನೀರಿನ ಇಂಗು ಆಗುತ್ತಿಲ್ಲ
ಮಣ್ಣಿನ ಫಲವು ಹೆಚ್ಚುತ್ತಿಲ್ಲ

ಎಲ್ಲೆಂದರಲ್ಲಿ ಹೊಲಸು ತುಂಬಿಸಿ
ಸದ್ದಿಲ್ಲದೆ ಪ್ಲಾಸ್ಟಿಕ್ ಬಳಸಿ
ಹಚ್ಚ ಹಸುರಿಗೆ ಕೊಡಲಿ ಹೊಡೆಸಿ
ನರವಿಲ್ಲದ ಜೀವನದಿ ಬಾಳುವೆವು ನಳನಳಿಸಿ

ಪರಿಸರದ ನಿಯಮ ಪಾಲಿಸಿ
ನಿಸರ್ಗದುಳಿವಿಗೆ ಗಮನವಹಿಸಿ
ಮಾಲಿನ್ಯಕಾರಕ ಬಳಕೆ ತಗ್ಗಿಸಿ
ಒಕ್ಕೊರಲಿ ಹೇಳೋಣ ಪರಿಸರ ಉಳಿಸಿ ಪರಿಸರ ಉಳಿಸಿ.

– ರಾಮಲಿಂಗ ಮಾಡಗಿರಿ
           ರಾಯಚೂರು ಜಿಲ್ಲೆ

Spread the love
error: Content is protected.