ಬಾನಾಡಿ ಹಕ್ಕಿ

ಹಸಿರು ತಾನೆ ಉಸಿರನೀವ ಹೊನ್ನು
ಇದ ಉಳಿಸಲು ತೋರದಿರಿ ಬೆನ್ನು
ಹಸಿರು ತಾನೆ ಈ ಜಗದ ಕಣ್ಣು
ಮರೆತರೆ ಖಂಡಿತ ಸೇರುವೆವು ಮಣ್ಣು
ಭುವಿ ದೇವನಿತ್ತ ಸೊಬಗ ಐಸಿರಿ
ಇಲ್ಲಿ ಬರಿಯ ಕೊಳಕ ಹರಡದಿರಿ
ಜೀವದುಸಿರಿಗೆ ತವಕಿಸುವ ಮೊದಲು
ಎಚ್ಚರಗೊಳ್ಳಿ ನಾಳೆಗಳಾಗಲಿ ಬದಲು
ಸಾಸಿರ ಆಸೆಗಳಲಿ ತೇಲುತ ನಾವು
ಮರೆತೆವು ಭುವಿ ಅನುಭವಿಸಿಹ ನೋವು
ಬರಡಾಗದಿರಲಿ ಇಳೆ ಮರುಭೂಮಿಯಂತೆ
ಹಸಿರ ಅರಸಿ ನಾವು ಸಾಗದಂತೆ
ಮನೆಯ ಮುಂದೊಂದು ಮರವಿರಲಿ
ಅದರ ನೆರಳಲಿ ನಮ್ಮ ಬದುಕಿರಲಿ
ಹಸಿರು ನಮ್ಮ ಬದುಕಲಿ ಒಂದಾಗಲು
ಬಾರದು ಕೆಡುಕು ಸಮಯ ಸಾಗಲು.
– ನಿರಂಜನ ಕೇಶವ ನಾಯಕ
ದಕ್ಷಿಣ ಕನ್ನಡ ಜಿಲ್ಲೆ