ಜನನ ಮರಣ
ದಿನಕರನುದಯಿಸುತಂತ್ಯಕೆ ಮುಳುಗುವ
ಜನನದ ಮರಣದ ಗುಟ್ಟಿದುವೆ
ದಿನಗಳನೆಣಿಸುತ ನಡೆಯುತ ನರನಿರೆ
ಮುಳುಗಿದರಂತ್ಯವು ಜೀವನವೆ
ಮೂಡಣದಿಂದಲಿ ಪಡುವಣಕಡಿಯಿಡೆ
ದಿನವೊಂದೋಡಿತು ಸಾವಿನೆಡೆ
ಬಾಡುವುದಿಲ್ಲಿಯೆ ಜೀವನದೆಲ್ಲೆಯು
ಭಾಗ್ಯವು ಬಾರದು ಮನುಜನೆಡೆ
ಒಳಿತಿನೊಳೆಲ್ಲವ ಕಾಪಿಡುತಿದ್ದರೆ
ಜಗದೊಳಗೆಲ್ಲರು ನಿನ್ನವರೆ
ಕಳೆಬರವಾಗದೆ ಕಳೆಬರಿಸುತ್ತಲಿ
ಅಡಿಯಿಡು ನಿನ್ನನು ನೆನೆಯುವರೆ
ನೆರೆಯೊಳು ಬೆರೆಯದೆ ಹೊರೆ ನೀನಾದರೆ
ದುಗುಡವು ನಿನ್ನೊಳು ಜೊತೆಯಲ್ಲೆ
ಕರೆಗಂಟೆಯೊಳು ಕರೆಯುತಲವನಿರೆ
ವಿಧಿಗಾಹುತಿಯೂ ನಾಬಲ್ಲೆ.
– ಚನ್ನಕೇಶವ ಜಿ ಲಾಳನಕಟ್ಟೆ., ತುಮಕೂರು ಜಿಲ್ಲೆ.