ಟಪ ಟಪ ಹನಿಯಲಿ

ಮೋಡದಲ್ಲೊಂದು ಹನಿಗಳ ಹಾಡು
ಜಿನು ಜಿನು ಜಿನುಗಿತ್ತು
ಕೇಕೇ ಹಾಕಿ ಹಾರುತ ಕುಣಿದು
ಗಾಳಿಗೆ ತೇಲಿತ್ತು
ಹಾರುತ ಹಾರುತ ಬಾನಿನ ಬಯಲಲಿ
ತೋರಣ ಕಟ್ಟಿತ್ತು
ಕೈ ಕೈ ಹಿಡಿದು ಮಂಟಪವಾಗಲು
ಮೋಡದಿ ಕುಳಿತಿತ್ತು
ಹನಿ ಹನಿ ಸೇರಿ ಮಳೆ ಹನಿಯಾಗಿ
ತೇಲುತಾ ಹೊರಟಿತ್ತು
ಗುಡ್ಡ ಬೆಟ್ಟ ಗಿಡ ಮರ
ಅದನು ತಡೆದಿತ್ತು
ಪ್ರೀತಿಯ ಮಾತು ಒಲವಿನ ಸೇತು
ಎಲ್ಲಾ ಮೋಡವ ಸೇರಿತ್ತು
ಮೋಡದಿ ಕರಗಿ ಮಳೆ ಹನಿಯಾಗಿ
ಹಾಗೆ ಧರೆಗೆ ಇಳಿದಿತ್ತು
ಟಪ ಟಪ ಹನಿಯಲಿ
ಜೀವ ಜೀವಿತದ ನೆಲೆಯ ಉಳಿವಿತ್ತು
ಹನಿ ಹನಿ ಮಳೆಯು
ಹೊಳೆಯಾಗಿ ಹರಿದು ಒಳಿತು ಸಾರಿತ್ತು.
– ನಾಗರಾಜ ಬಿ. ನಾಯ್ಕ., ಕುಮಟಾ., ಉತ್ತರ ಕನ್ನಡ ಜಿಲ್ಲೆ