ಚಿಣ್ಣರ ವನದ ವಿಹಾರ
ಮಕ್ಕಳಂದು ಬೇಸಿಗೆ ರಜೆಯಲಿ
ಹೊರಟರು ವನದ ವಿಹಾರಕೆ
ನಿಸರ್ಗದ ಮಡಿಲಲಿ ಆಟವಾಡುತ
ಕಳೆಯಲು ಮನದ ಬೇಸರಿಕೆ
ವನದಲಿರುವ ಪ್ರಾಣಿ, ಪಕ್ಷಿಗಳ
ನೋಡಿ ಆನಂದಿಸುವ ತವಕದಲಿ
ವನದ ಹಸಿರ ರಾಶಿಯ ಅಂದದ
ಸೊಬಗನು ಸವಿಯುವ ಕುತೂಹಲದಲಿ
ಹಕ್ಕಿಗಳ ಚಿಲಿಪಿಲಿಯ ಸಂವಾದದ
ಸುಶ್ರಾವ್ಯ ಕಲರವವ ಕೇಳುತಾ
ಹಾರುತಿರುವ ಚಿಟ್ಟೆಗಳ ಹಿಂಬಾಲಿಸಿ
ಆನಂದದ ಭರದಿ ಓಡುತಾ
ಆಹಾ! ಎಂಥಾ ಸೌಂದರ್ಯದ ವನವು
ಎಂದು ಚಿಣ್ಣರು ಕುಣಿದರು
ಕುಣಿದು, ದಣಿದು ಪ್ರಕೃತಿಯ
ಮಡಿಲಿನಲ್ಲಿ ವಿಶ್ರಮಿಸಿಕೊಂಡರು
– ಜನಾರ್ಧನ್ಎಂ.ಎನ್., ಭಟ್ಕಳ,
ಉತ್ತರ ಕನ್ನಡ ಜಿಲ್ಲೆ