ತಿಂದು ತೇಗುವ ಮುನ್ನ
ಮೂಕ ಪ್ರಾಣಿಯೂ ಒಂದು
ಅಡವಿಯಲಿ ಅಳುತಿದೆ
ತಿಂದು ತೇಗುವ ಮುನ್ನ
ಉಳಿಸುವರು ಯಾರೆಂದು
ಹೊರಳಿ ನಿಂತರು ದೇವಾ,
ಕೆರಳಿ ನಿಲುವವನಲ್ಲ
ಹಿಂದೆ ಬಿದ್ದವರು ಬಂದು ಕೇಳುವುದಿಲ್ಲ
ಯಾಕಿಟ್ಟೆ ಅಡವಿಯಲಿ
ಬೇಕಾಬಿಟ್ಟಿಯ ಮಾಡಿ
ಯಾವ ಕರ್ಮಕೆ ನನ್ನ
ಇಲ್ಲಿ ಹುಟ್ಟಿಸಿದೆ…
ತಿಂದು ತೇಗುವ ಮುನ್ನ
ಉಳಿಸುವರು ಯಾರೆಂದು
ಮೂಕ ಪ್ರಾಣಿಯೂ ಒಂದು
ಬಾಳಿ ಬದುಕುವ ಭಾಗ್ಯ ಕೇಳಿ ಬರಲಿಲ್ಲ
ತಾಳಿಯದರಿಸುವ ಸಕುತಿ ನಾ ಪಡೆಯಲಿಲ್ಲ
ಕಾಲಿಡಿದು ಬೇಡುತಿಹೆ…
ಕಾಲಿಡಿದು ಬೇಡುತಿಹೆ ಕಾಪಾಡು ತಂದೆ
ಕರುಳ ಬಳ್ಳಿಯ ಕಂಡು
ಕಣ್ಮುಚ್ಚಬೇಕೆಂದು.
– ಲಿಂಗರಾಜ ಎಮ್.
ಗದಗ ಜಿಲ್ಲೆ