ಭೂಮಿ ತಾಯಿ

ಏನು ಈ ಮಿಲನ ಮಾಯೆ
ವಿರಹದ ಬಿಸಿಗೆ, ಕರಿ ಮುಗಿಲ ಛಾಯೆ.
ಬಿಗಿದಪ್ಪಿಹನು ವರುಣ ಇಳೆಯ,
ಹುದುಗಿಹುದು ಧರಣಿಯೆದೆ
ಮೇಘನ ಬಾಹುವಿನಲಿ,
ಸಂಧಿಯ ಉತ್ತುಂಗದಲಿ.
ಮೆಲುದೊಂದು ದನಿ ಹೊಮ್ಮಿ,
ತನ್ನೆಲ್ಲ ಪೌರುಷವ ಹನಿ ಹನಿಯಲಿ ತುಂಬಿ,
ಸೇರಿಹುದು ಗರ್ಭವ ಇನ್ನಿಲ್ಲದ ವೇಗದಲಿ.
ದಣಿದು, ತಣಿದು ಹದವಾದಂದು
ಅಂಕುರಿಸಿತು ಜೀವವು
ವಸುಂಧರೆಯ ಮಡಿಲೊಳು.
ಮತ್ತೆ ತಾಯಾಗಿಹಳು ತಾಯಿ
ಸೌರದೀ ಸಂಸಾರದೊಳು.
– ಶಂತನ್ ಕೆ. ಬಿ.
ಶಿವಮೊಗ್ಗ ಜಿಲ್ಲೆ