ಮಾಸ ವಿಶೇಷ – ಈಜಿ ಮರ
©ನಾಗೇಶ್ ಓ. ಎಸ್. ಈಜಿ ಮರ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ
ಸಾಮಾನ್ಯ ಹೆಸರು: Bastard teak
ವೈಜ್ಞಾನಿಕ ಹೆಸರು : Premna tomentosa
ಭಾರತ ಮತ್ತು ಶ್ರೀಲಂಕಾ ದೇಶಗಳ ಬಹುತೇಕ ಕಾಡುಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಮರ, ಸುಮಾರು 15 ಮೀಟರ್ ಎತ್ತರಕ್ಕೆ ಬೆಳೆಯುವ ಮರವಾಗಿದ್ದು, ಮರದ ತೊಗಟೆ ಬೂದು ಮಿಶ್ರಿತ ಕಂದು ಬಣ್ಣದಿಂದ ಕೂಡಿರುತ್ತದೆ. ಎಲೆಗಳು ಸುಮಾರು ಎರಡರಿಂದ ಐದು ಸೆಂಟಿಮೀಟರ್ ಉದ್ದವಿದ್ದು, ಸರಳ ಎಲೆ ವಿನ್ಯಾಸವನ್ನು ಹೊಂದಿವೆ ಹಾಗು ಸುವಾಸನೆಯನ್ನು ಹೊಂದಿರುತ್ತವೆ. ಎಲೆಯ ತಳಭಾಗದಲ್ಲಿ ವೆಲ್ವೆಟ್ ಕೋಟಿಂಗ್ ಕಾಣಬಹುದು. ಸಾಮಾನ್ಯವಾಗಿ ಮಾರ್ಚ್ – ಮೇ ಸಮಯದಲ್ಲಿ ಹಳದಿ ಮಿಶ್ರಿತ ಬಿಳಿ ಬಣ್ಣದ ಹೂಗಳನ್ನು ಬಿಡುತ್ತವೆ. ಜೂನ್ ತಿಂಗಳಲ್ಲಿ ಅಂಡಾಕಾರದ ಕಪ್ಪುಬಣ್ಣದ ಹಣ್ಣುಗಳನ್ನು ಬಿಡುತ್ತವೆ. ಹಣ್ಣಿನ ಮೇಲೆ ಸಣ್ಣ ಸಣ್ಣ ಕೂದಲಿನ ರಚನೆಯನ್ನು ಕಾಣಬಹುದು. ಮರದ ಬಹುತೇಕ ಭಾಗಗಳನ್ನು ಆಯುರ್ವೇದ ಔಷಧಿಗಳಲ್ಲಿ ಉಪಯೋಗಿಸುತ್ತಾರೆ ಮರದ ತೊಗಟೆಯನ್ನು ಅತಿಸಾರಕ್ಕೆ ಔಷಧವಾಗಿ ಬಳಸಲಾಗುತ್ತದೆ.