ಚೂಟಿ ಜಂಪು ಜೇಡ
ಚೂಟಿ ಹಾರು ಜೇಡವೇ,
ಜಿಗಿದು ಎಲ್ಲಿ ಹೊರಟಿಹೆ?
ಅತ್ತ ಇತ್ತ ಇಣುಕುತ,
ಮೇಲೆ ಕೆಳಗೆ ನೆಗೆಯುತ,
ಹಿಂದೆ ಮುಂದೆ ಅಲೆದು
ಏನು ಹೊಂಚು ಹಾಕಿಹೆ!?
ಚುರುಕು ಹಾರುಜೇಡವೇ
ಅದೇನು ಮಾಟ ನಿನ್ನ ನೋಟ,
ದೃಷ್ಟಿಯಲ್ಲಿ ಜಗಕೇ ಮುಕುಟ,
ಅಷ್ಟದಿಕ್ಕೂ ಗೆದ್ದ ನೀನು
ಬೆರಗುಗಣ್ಣಲೇನು ನೋಡುವೆ!?
ಜಾಣ ಅಷ್ಟ ನೇತ್ರನೇ
ಹೂವ ಮುತ್ತಿ ಮಧುವ ಹೀರಿ,
ತುಡುಗು ಕೀಟವೆಲ್ಲ ಹಿಡಿದು,
ಸೊಕ್ಕಿನಲ್ಲಿ ಮೆರೆವ ಜೇಡವನ್ನ
ಹಿಡಿದು ಬುದ್ಧಿ ಕಲಿಸುವೆ!
ನಿಸರ್ಗ ಮಿತ್ರ ಶೂರನೇ
ಚೂಟಿ ಹಾರು ಜೇಡವೇ,
ಜಿಗಿದು ಎಲ್ಲಿ ಹೊರಟಿಹೆ!?
– ಸಚಿನ್ ಬಿ. ಎಸ್.
ಶಿವಮೊಗ್ಗ ಜಿಲ್ಲೆ