ಮಾಸ ವಿಶೇಷ – ಬಲಮುರಿ

ಮಾಸ ವಿಶೇಷ – ಬಲಮುರಿ

                          ©  ದೀಪಕ್ ಜಿ. ಎನ್., ಬಲಮುರಿ , ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ

ಸಾಮಾನ್ಯ ಹೆಸರು: East india screw Tree
ವೈಜ್ಞಾನಿಕ ಹೆಸರು : Helictreas isora

ಬಲಮುರಿ ಎಡಮುರಿ ಎಂದು ಸಾಮಾನ್ಯವಾಗಿ ಕರೆಯಲ್ಪಡುವ  ಐದರಿಂದ ಎಂಟು ಮೀಟರ್ ಎತ್ತರಕ್ಕೆ ಬೆಳೆಯುವ ಈ ಗಿಡವು ಭಾರತ,ಪಾಕಿಸ್ತಾನ ,ನೇಪಾಳ ಮತ್ತು ಶ್ರೀಲಂಕಾ ದೇಶಗಳಲ್ಲಿ ಕಾಣಸಿಗುತ್ತದೆ. ತೊಗಟೆಯು ಬೂದು ಬಣ್ಣದಲ್ಲಿದ್ದು, ಎಲೆಗಳು ಸರಳ  ವಿನ್ಯಾಸವನ್ನು ಹೊಂದಿರುತ್ತದೆ. ಹೂವುಗಳು ಗೊಂಚಲು ಗೊಂಚಲಾಗಿರುತ್ತವೆ ಅಥವಾ ಒಂದೊಂದು ಹೂವನ್ನು ಹೊಂದಿರುತ್ತದೆ ಹಣ್ಣುಗಳು ಹಸಿರು ಬಣ್ಣದಲ್ಲಿದ್ದು, ಸುರುಳಿಯಂತೆ ಸುತ್ತಿಕೊಂಡಿರುತ್ತದೆ. ಈ ಮರದ  ಭಾಗಗಳಾದ ಬೇರು, ಕಾಂಡ ತೊಗಟೆಗಳನ್ನು ಆಯುರ್ವೇದ ಔಷಧಿ ತಯಾರಿಕೆಯಲ್ಲಿ ಬಳಸುತ್ತಾರೆ.  ಈ ಮರದ ತೊಗಟೆಯನ್ನು ಮಕ್ಕಳಿಗೆ ಜಂತುಹುಳ ನಿವಾರಕವಾಗಿ ಹಾಗೂ ಬೇರಿನಿಂದ ತೆಗೆದ ರಸವನ್ನು ಅತಿಸಾರ ನಿವಾರಕವಾಗಿ ಕೂಡ ಬಳಸುತ್ತಾರೆ.

Spread the love
error: Content is protected.