ವಸುಂಧರೆ
ಹಸಿರ ಸೀರೆಯುಟ್ಟು
ಉಸಿರ ಕಾಯ್ವಳು ವಸುಂಧರೆ
ಎಲ್ಲರಿಗೂ ಆಸರೆಯಾಗಿ
ನೆಮ್ಮದಿಯ ನೆಲೆಯಾಗಿಹ ಧರೆ
ಸಕಲ ಜೀವರಾಶಿಗಳಿಗೂ
ನೀನು ಪೊರೆವ ಜನನಿ
ಸಕಲ ಜೀವಸಂಕುಲಗಳಿಗೂ
ತಾಯಿಯಾದಳು ಅವನಿ
ಅದ್ಭುತ ಸೌಂದರ್ಯದ
ರಮಣೀಯ ಧರಣಿ
ಅಗಣಿತ ನಿಧಿ ನಿಕ್ಷೇಪವ
ತುಂಬಿಕೊಂಡಿಹ ಗಣಿ
ವರ್ಷಧಾರೆಯ ಆಗಮನದಿ
ಶೃಂಗಾರಗೊಂಡ ತರುಣಿ
ವಾತ್ಸಲ್ಯಮಯಿಯ ಕರುಣೆಗೆ
ನಾವೆಲ್ಲರೂ ಚಿರ ಋಣಿ
– ಜನಾರ್ಧನ್ ಎಂ ಎನ್
ಭಟ್ಕಳ, ಉತ್ತರ ಕನ್ನಡ ಜಿಲ್ಲೆ