ಮಾಸ ವಿಶೇಷ – ನೇರಳೆ ಮರ

ಮಾಸ ವಿಶೇಷ – ನೇರಳೆ ಮರ

                          ©  ನಾಗೇಶ್ ಓ. ಎಸ್., ನೇರಳೆ ಮರ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ

ಸಾಮಾನ್ಯ ಹೆಸರು: Jamun tree
ವೈಜ್ಞಾನಿಕ ಹೆಸರು : Syzygium Cumimi

ನೇರಳೆ ಮರಗಳ ಮೂಲ ಭಾರತ ಉಪಖಂಡ, ದಕ್ಷಿಣ ಏಷ್ಯಾ ದೇಶದ ಭಾಗಗಳಲ್ಲಿ, ಶ್ರೀಲಂಕಾ ಹಾಗೂ ಅಂಡಮಾನ್ ದ್ವೀಪಗಳ ಉಷ್ಣ ವಲಯ ಪ್ರದೇಶಗಳಲ್ಲಿ ಕಂಡುಬರುತ್ತವೆ. ಸುಮಾರು 30 ಮೀಟರ್ ಗಳಷ್ಟು ಎತ್ತರ ಬೆಳೆಯುವ ಈ ಮರದ ಕಾಂಡವು ಕಡು ಕಂದು ಬಣ್ಣವಿದ್ದು ಒರಟಾಗಿ ಇರುತ್ತದೆ. ಕಾಂಡ ಭಾಗದಿಂದ ಎತ್ತರಕ್ಕೆ ಹೋದಂತೆಲ್ಲಾ ಮರದ ಸಿಪ್ಪೆಯ ಬಣ್ಣವು ತಿಳಿಯಾಗಿ ನುಣುಪಾಗುತ್ತದೆ. ಎಳೆಯ ಚಿಗುರು ಎಲೆಗಳು ಗುಲಾಬಿ ಬಣ್ಣ ಹೊಂದಿದ್ದು,  ದೊಡ್ಡದಾಗುತ್ತಾ ಗಾಢ ಹಸಿರು ಬಣ್ಣಕ್ಕೆ ತಿರುಗುತ್ತವೆ. ಎಲೆಯು ಮಂದವಾಗಿದ್ದು, ಹೊಳಪಿರುತ್ತದೆ. ನೇರಳೆಯ ಹೂಗಳು ಚಿಕ್ಕದಾಗಿದ್ದು, ಪರಿಮಳಯುಕ್ತವಾಗಿರುತ್ತವೆ ಹಾಗೂ ಹಸಿರು ಮಿಶ್ರಿತ ಬಿಳಿ ಬಣ್ಣದಿಂದ ಕೂಡಿರುತ್ತವೆ. ಮಾರ್ಚ್ ನಿಂದ ಏಪ್ರಿಲ್ ತಿಂಗಳಲ್ಲಿ ಹೂ ಬಿಡುತ್ತವೆ ಹಾಗೂ ಇವು ಮೇ ಹಾಗೂ ಜೂನ್ ತಿಂಗಳಲ್ಲಿ ಹಣ್ಣಾಗುತ್ತವೆ. ಹಣ್ಣು ಅಂಡಾಕಾರದಲ್ಲಿದ್ದು, ಎಳೆಯ ಕಾಯಿಗಳು ಹಸಿರು ಬಣ್ಣದಿಂದ ಗುಲಾಬಿ ಬಣ್ಣಕ್ಕೆ ತಿರುಗಿ ನಂತರ ಹಣ್ಣಾದಾಗ ಕಪ್ಪು ಬಣ್ಣಕ್ಕೆ ಬದಲಾಗುತ್ತವೆ. ಅತಿ ಪೌಷ್ಟಿಕಾಂಶವುಳ್ಳ ಹಣ್ಣುಗಳು ಮಧುಮೇಹ ನಿಯಂತ್ರಣದಲ್ಲಿ, ಹೃದಯ ಸಂಬಂಧ ಖಾಯಿಲೆಗೆ ಹಾಗೂ ಉದರ ಸಂಬಂಧ ಕಾಯಿಲೆಯ ನಿಯಂತ್ರಣಕ್ಕೆ ಹೆಚ್ಚು ಉಪಕಾರಿಯಾಗಿದೆ.

Spread the love
error: Content is protected.