ವನದ ವಿಹಾರ

ಅಡವಿಯಲ್ಲಿ ನಾವು ಆಡುತಿರಲು
ಪಕ್ಷಿಗಳ ಕಲರವ ಕೇಳುತಿರಲು
ಆಹಾ! ಎಂಥಾ ಸುಮಧುರ ಸಂಜೆ
ಎಲ್ಲವನ್ನು ಮೈ ತುಂಬಿಕೊಂಡೆ
ವನದಲ್ಲಿರುವ ಹಣ್ಣನ್ನು ತಿಂದು
ಸರಸರನೆ ಹೋಗುತ್ತಿದ್ದ ಹಾವನ್ನು ಕಂಡು
ಹೂಗಳ ಸುವಾಸನೆ ಸವಿದೆ
ಪಕ್ಷಿಗಳ ಚಿಲಿಪಿಲಿ ಕೇಳಿದೆ
ಜೋರಾಗಿ ಮಳೆ ಬರುತಿರಲು
ಪ್ರಕೃತಿ ಸೌಂದರ್ಯ ತುಂಬಿ ತುಳುಕಿರಲು
ವನದಲ್ಲಿ ನಾವು ಆಟವಾಡುತಿರಲು
ಮನವು ತುಂಬಿ ಬರುತಿರಲು
ಹೇ ತಾಯೇ ನಿನಗೆ ಧನ್ಯವಾದ
ನೀನಿಲ್ಲದೆ ನಮ್ಮ ಜೀವನವೇ ಇಲ್ಲ
– ಗಾಯನಾ ಲಕ್ಷ್ಮಣ ಮೊಗೇರಾ.