ನೀವೂ ಕಾನನಕ್ಕೆ ಬರೆಯಬಹುದು
ಬೆಳಕು, ಈ ಪ್ರಕೃತಿಯ ಸೌಂದರ್ಯವನ್ನು ಕಣ್ತುಂಬಿಸಿಕೊಳ್ಳಲು ಅನುವು ಮಾಡಿರುವುದು ಬಣ್ಣಬಣ್ಣದ ಗಿಡ, ಮರ, ಬಳ್ಳಿಗಳು, ಝರಿ ತೊರೆಗಳು, ಹೂ ಹಣ್ಣುಗಳು, ಪ್ರಾಣಿ ಪಕ್ಷಿಗಳು, ಜೀವವೈವಿಧ್ಯತೆಯ ಸವಿಯನ್ನು ಸವಿಯಲು ಅವಕಾಶ ಮಾಡಿಕೊಟ್ಟಿದೆ. ಭೂಮಿಯ ಮೇಲೆ ಒಂದೊಂದು ಜೀವಿಯು ತನ್ನದೇ ಆದ ವೈಶಿಷ್ಟ್ಯವನ್ನು ಹೊಂದಿದ್ದು ಪ್ರತಿಯೊಂದು ತಮ್ಮದೇ ರೀತಿಯಲ್ಲಿ ಪ್ರಕೃತಿಗೆ ಕೊಡುಗೆ ನೀಡುತ್ತದೆ. ಪಕ್ಷಿಗಳು, ಜಲಚರಗಳು, ಸರಿಸೃಪಗಳು, ಸಸ್ತನಿಗಳು ಹೀಗೆ ಎಲ್ಲವೂ ಅವುಗಳದ್ದೇ ವಿಧದಲ್ಲಿ ಭಿನ್ನವಾಗಿದ್ದು, ಆಕಾರ, ರೂಪ, ಬಣ್ಣ, ತಮ್ಮದೇ ಆದ ಜೀವನಶೈಲಿಗಳನ್ನು ಹೊಂದಿದೆ. ಸಸ್ಯಹಾರಿ ಪ್ರಾಣಿಗಳ ಪೈಕಿ ಆಫ್ರಿಕಾ ಮೂಲದ ಜಿಬ್ರಾ(ಪಟ್ಟೆ ಕುದುರೆ) ಆಕರ್ಷಣೆಯ ಕಪ್ಪು ಬಿಳಿ ಪಟ್ಟಿಯ ಚರ್ಮವನ್ನು ಹೊಂದಿದೆ. ಪರಿಸರದಲ್ಲಿ ಕೀಟಗಳ ನಿಯಂತ್ರಣದಲ್ಲಿ ಪರೋಕ್ಷವಾಗಿ ಸಹಾಯಕವಾಗಿರುವ ಜೀಬ್ರಾಗಳು, ಆಹಾರ ಸರಪಳಿಯಲ್ಲಿ ಮುಖ್ಯ ಪಾತ್ರವನ್ನು ವಹಿಸುತ್ತದೆ. ಆವಾಸ ನಾಶ, ಮಾಂಸ ಮತ್ತು ಚರ್ಮಗಳಿಗಾಗಿ ಇವುಗಳನ್ನು ನಾಶ ಮಾಡಲಾಗುತ್ತಿದೆ. ಇವುಗಳ ಬೇಟೆಯಿಂದಾಗಿ ದಿನೇ ದಿನೇ ಇವುಗಳ ಸಂಖ್ಯೆ ಕ್ಷೀಣಿಸುತ್ತಿದೆ. ಇದರ ಬಗ್ಗೆ ಅರಿವು ಮೂಡಿಸಲು ಜನವರಿ 31 ನ್ನು ಅಂತರಾಷ್ಟ್ರೀಯ ಹೇಸರಗತ್ತೆ ಜೀಬ್ರಾ ದಿನವನ್ನಾಗಿ ಆಚರಿಸಲಾಗುತ್ತದೆ.
ಈ ರೀತಿಯ ಪರಿಸರದ ಬಗೆಗಿನ ಮಾಹಿತಿಯನ್ನು ಒದಗಿಸಲು ಇರುವ ಕಾನನ ಇ-ಮಾಸಿಕಕ್ಕೆ ಮುಂದಿನ ತಿಂಗಳ ಪ್ರತಿಗೆ ಲೇಖನಗಳನ್ನು ಆಹ್ವಾನಿಸಲಾಗಿದೆ. ಆಸಕ್ತರು ಪರಿಸರಕ್ಕೆ ಸಂಬಂಧಿಸಿದ ಕಥೆ, ಕವನ, ಛಾಯಾಚಿತ್ರ, ಚಿತ್ರಕಲೆ, ಪ್ರವಾಸ ಕಥನಗಳನ್ನು ಕಾನನ ಮಾಸಿಕದ ಇ-ಮೇಲ್ ವಿಳಾಸಕ್ಕೆ ಕಳುಹಿಸಬಹುದು.
ಕಾನನ ಪತ್ರಿಕೆಯ ಇ-ಮೇಲ್ ವಿಳಾಸ: [email protected]
ಅಂಚೆ ವಿಳಾಸ:
Study House,
ಕಾಳೇಶ್ವರಿ ಗ್ರಾಮ,
ಆನೇಕಲ್ ತಾಲ್ಲೂಕು,
ಬೆಂಗಳೂರು ನಗರ ಜಿಲ್ಲೆ,
ಪಿನ್ ಕೋಡ್ :560083. ಗೆ ಕಳಿಸಿಕೊಡಬಹುದು.