ನೀವೂ ಕಾನನಕ್ಕೆ ಬರೆಯಬಹುದು
ವಿಶ್ವ ಜೀವವೈವಿಧ್ಯ ದಿನ ಮೇ 22
ಜೀವಿ ಎಂದಾಕ್ಷಣ ನೆನಪಿಗೆ ಬರುವುದು ಭೂಮಿ. ಸೌರಮಂಡಲದಲ್ಲಿ ಇದೊಂದು ಗ್ರಹದಲ್ಲಿ ಮಾತ್ರ ಜೀವಿಗಳು ಕಾಣಸಿಗುವುದು. ಹಾಗಾದರೆ ಭೂಮಿಯ ಮೇಲೆ ಒಟ್ಟು ಎಷ್ಟು ಜೀವಿಗಳು ಇರಬಹುದು ಎಂಬ ಪ್ರಶ್ನೆಯ ಬೆನ್ನತ್ತಿ ವಿಜ್ಞಾನಿಗಳು ಶತಮಾನದಿಂದಲೂ ಅಧ್ಯಯನ ನಡೆಸುತ್ತಲೇ ಇದ್ದು, ಇರುವೆ ಗಾತ್ರದ ಜೀವಿಯಿಂದ ಹಿಡಿದು ಡೈನೋಸಾರ್ ಗಳಂತಹ ದೈತ್ಯಜೀವಿಗಳ ಜೀವವಿಕಾಸದ ಬಗೆಗಿನ ಕೌತುಕಗಳ ಬಗ್ಗೆ ಬೆರಗಾಗುತ್ತಾ, ತಿಳಿಯುತ್ತ, ತಿಳಿಸುತ್ತಾ ಬಂದಿದ್ದಾರೆ. ಅಗೆದಷ್ಟು ಸಿಗುವಂತೆ ಜೀವಿಗಳ ಬಗೆಗಿನ ಸತ್ಯಗಳು ದಿನೇದಿನೇ ಹೊರಬೀಳುತ್ತಿದ್ದು, ಸಸ್ಯಗಳು, ಪ್ರಾಣಿಗಳು, ಸೂಕ್ಷ್ಮಜೀವಿಗಳು, ಬೇರೆಬೇರೆ ಆವಾಸಗಳಲ್ಲಿ ಬೇರೆಬೇರೆ ಪ್ರಭೇದಗಳ ರೂಪದಲ್ಲಿ ಕಾಣಸಿಗುವುದನ್ನು ಜೀವವೈವಿಧ್ಯ ಎನ್ನುತ್ತಾರೆ.
ಹೀಗೆ ನಾನಾ ರೀತಿಯ ಜೀವವೈವಿಧ್ಯತೆಗಳು ಊಹೆಗೂ ನಿಲುಕದಷ್ಟು ಹೇರಳವಾಗಿವೆ. ಉಳಿವಿಗಾಗಿ ಹೋರಾಟ ನಡೆಸಿ, ಅಸ್ತಿತ್ವ ಹೊಂದಿ, ಬದುಕಿಗಾಗಿ ಪರಸ್ಪರಾವಲಂಬನೆ ಹೊಂದಿರುವ ಇಡೀ ಜೀವವ್ಯವಸ್ಥೆ, ಒಂದಲ್ಲ ಒಂದು ರೀತಿ ಪ್ರತಿಯೊಂದು ಜೀವಿಗೂ ಕೊಂಡಿಯಂತೆ ಬೆಸೆದುಕೊಂಡಿದೆ. ಈ ಕೊಂಡಿಯಲ್ಲಿ ಒಂದೇಒಂದು ಚಿಕ್ಕಜೀವಿ ಅಳಿದರೂ ಇತರ ಎಲ್ಲ ಜೀವಿಗಳು ನಾಶವಾಗುತ್ತವೆ. ಇಂತಹ ಜೀವವೈವಿಧ್ಯವು ಬೇರೆಬೇರೆ ಕಾರಣಗಳಿಂದ ಕಡಿಮೆಯಾಗುತ್ತಿದ್ದು, ಜೀವವೈವಿಧ್ಯದ ಬಗೆಗಿನ ಮಹತ್ವ ಮತ್ತು ಸಂರಕ್ಷಣೆಯ ಬಗ್ಗೆ ಅರಿವು ಮೂಡಿಸಲು ಮೇ 22ರಂದು ವಿಶ್ವ ಜೀವವೈವಿಧ್ಯ ದಿನವನ್ನು ಆಚರಿಸಲಾಗುತ್ತದೆ.
ಹಾಗಾಗಿ ನೀವು ಬರೆದ ಪರಿಸರ ಲೇಖನಗಳು ಹಾಗೂ ಕವನಗಳನ್ನ ನಮ್ಮ ಈ ಇ-ಮಾಸಿಕಕ್ಕೆ ಈ ಕೆಳಗಿನ ವಿಳಾಸಕ್ಕೆ ಅಥವಾ ನಮ್ಮ ಇ ಮೇಲ್ ವಿಳಾಸಕ್ಕೆ ಕಳುಹಿಸಿಕೊಡಿ.
ಕಾನನ ಪತ್ರಿಕೆಯ ಇ-ಮೇಲ್ ವಿಳಾಸ: [email protected]
ಅಂಚೆ ವಿಳಾಸ:
Study House,
ಕಾಳೇಶ್ವರಿ ಗ್ರಾಮ,
ಆನೇಕಲ್ ತಾಲ್ಲೂಕು,
ಬೆಂಗಳೂರು ನಗರ ಜಿಲ್ಲೆ,
ಪಿನ್ ಕೋಡ್ :560083. ಗೆ ಕಳಿಸಿಕೊಡಬಹುದು.