ನೀವೂ ಕಾನನಕ್ಕೆ ಬರೆಯಬಹುದು
ಆನೆ, ಇಂದು ಜಗತ್ತಿನಲ್ಲಿಯೇ ನೆಲದ ಮೇಲೆ ವಾಸಿಸುವ ಅತಿ ದೊಡ್ಡ ಸಸ್ತನಿ. ಮೂರು ಪ್ರಭೇದ ಆನೆಗಳು ಭೂಮಿಯ ಮೇಲೆ ಕಂಡು ಬರುತ್ತದೆ. ಅವುಗಳು ಆಫ್ರಿಕಾದ ಪೊದೆಗಳ ಆನೆ, ಆಫ್ರಿಕಾದ ಅರಣ್ಯದ ಆನೆ ಮತ್ತು ಏಷ್ಯಾದ ಆನೆ. ಭಾರತದ ಆನೆ ಆಫ್ರಿಕನ್ ಆನೆಗಿಂತ ಗಾತ್ರದಲ್ಲಿ ಸಣ್ಣದು. ನಮ್ಮಲ್ಲಿ ಗಂಡಾನೆಗಳಿಗೆ ಮಾತ್ರ ದೊಡ್ಡದಾದ ದಂತಗಳು ಇರುತ್ತವೆ. ಆದರೆ ಆಫ್ರಿಕಾದ ಹೆಣ್ಣು ಆನೆಗಳಿಗೂ ದಂತ ಇರುತ್ತವೆ. ಆದರೆ ಇಂದು ಮನುಷ್ಯ ದಂತಕ್ಕೋಸ್ಕರ ದೈತ್ಯಾಕಾರದ ಆನೆಯನ್ನೇ ಸಾಯಿಸುತ್ತಿದ್ದಾನೆ. ಹೆಣ್ಣಾನೆಗಳು ತಮ್ಮ ಸಂಪೂರ್ಣ ಜೀವನವನ್ನು ಗುಂಪಿನಲ್ಲೇ ಕಳೆಯುತ್ತವೆ. ಗುಂಪಿನಲ್ಲಿ ಅತಿ ಹೆಚ್ಚು ವಯಸ್ಸಾದ ಹೆಣ್ಣಾನೆಯು ಗುಂಪಿನ ನಾಯಕಿಯಾಗಿ ಕಾರ್ಯವಹಿಸುತ್ತದೆ. ಆ ಹೆಣ್ಣಾನೆಗೆ ನೀರು, ಆಹಾರ ಎಲ್ಲವೂ ಸಿಗುವ ಮಾಹಿತಿ ಚೆನ್ನಾಗಿ ತಿಳಿದಿರುತ್ತದೆ. ಗಂಡಾನೆಗಳು ಸಾಮಾನ್ಯವಾಗಿ ಒಂಟಿಯಾಗಿಯೇ ಬಾಳುತ್ತವೆ.
ಆಗಸ್ಟ್ 12 ವಿಶ್ವ ಆನೆಗಳ ದಿನ. ನಮ್ಮ ಆನೆಗಳ ಬಗ್ಗೆ ತಿಳಿದುಕೊಳ್ಳುವುದು ಒಳಿತು ಅಲ್ಲವೇ. ನಮ್ಮ ಜನಸಮೂಹಕ್ಕೆ, ಮಕ್ಕಳಿಗೆ ಹೆಚ್ಚಾಗಿ ನಮ್ಮ ಕನ್ನಡಿಗರಿಗೆ ಮತ್ತು ಕಾನನ ಓದುಗರಿಗೆ ಕುತೂಹಲ ಮೂಡಿಸುವ ನಮ್ಮ ಆನೆಗಳ ಬದುಕು, ಅವುಗಳ ಆವಾಸ, ಅವುಗಳಿಗೆ ಆಗುತ್ತಿರುವ ತೊಂದರೆಗಳು ಹೆಚ್ಚಾಗಿ ಆನೆಗಳಿಂದ ಮನುಷ್ಯನಿಗೆ ಆಗುತ್ತಿರುವ ಅನುಕೂಲಗಳು ಮತ್ತು ಅವುಗಳ ನಡವಳಿಕೆ ಈ ರೀತಿಯ ಎಲ್ಲವನ್ನು ಕಾನನ ಪತ್ರಿಕೆಗೆ ಕಳಿಸಿಕೊಡಿ, ಹಾಗೆಯೇ, ಜೀವ ವೈವಿಧ್ಯತೆ ಕುರಿತ, ಕಾಡು, ಕಾಡಿನ ಕತೆಗಳು, ಜೀವ ವಿಜ್ಞಾನ, ವನ್ಯ ವಿಜ್ಞಾನ, ಕೀಟಲೋಕ, ಕೃಷಿ, ವನ್ಯಜೀವಿ ಛಾಯಚಿತ್ರಗಳು, ಕವನ (ಪರಿಸರಕ್ಕೆ ಸಂಬಂಧಿಸಿದ), ವರ್ಣಚಿತ್ರಗಳು ಮತ್ತು ಪ್ರವಾಸ ಕತೆಗಳು, ಪರಿಸರಕ್ಕೆ ಸಂಬಂಧಿಸಿದ ಎಲ್ಲಾ ಲೇಖನಗಳನ್ನು ಕಾನನದ ಸೆಪ್ಟೆಂಬರ್ ಸಂಚಿಕೆಗೆ ಆಹ್ವಾನಿಸಲಾಗಿದೆ. ಆಸಕ್ತರು ಇ-ಮೇಲ್ ಅಥವಾ ಪೋಸ್ಟ್ ಮೂಲಕ ಕಳಿಸಬಹುದು.
ಕಾನನ ಪತ್ರಿಕೆಯ ಇ-ಮೇಲ್ ವಿಳಾಸ: [email protected]
ಅಂಚೆ ವಿಳಾಸ:
Study House,
ಕಾಳೇಶ್ವರಿ ಗ್ರಾಮ,
ಆನೇಕಲ್ ತಾಲ್ಲೂಕು,
ಬೆಂಗಳೂರು ನಗರ ಜಿಲ್ಲೆ,
ಪಿನ್ ಕೋಡ್ :560083. ಗೆ ಕಳಿಸಿಕೊಡಬಹುದು.