ಪ್ರಕೃತಿ ಬಿಂಬ

© ವಿಪಿನ್ ಬಾಳಿಗಾ, ಹಪ್ಪಾಟೆ ಹಾವು
ಜಗತ್ತಿನಲ್ಲಿ ಅತೀ ಹೆಚ್ಚಿನದಾಗಿ, ಅಲ್ಲದೇ ದಯನೀಯ ರೀತಿಯಲ್ಲಿ ಎಂಬಷ್ಟರ ಮಟ್ಟಿಗೆ ತಪ್ಪಾಗಿ ಅರ್ಥೈಸಿಕೊಳ್ಳಲಾಗಿರುವ ಜೀವಿಗಳೆಂದರೆ ನಾವೇ!…

©ವಿಪಿನ್ ಬಾಳಿಗಾ, ನಾಗರಹಾವು
ನಾನು ಹಾಲು ಕುಡಿಯುವ ಜೀವಿಯಲ್ಲ. ಹಾಗೆಯೇ ನನ್ನ ತಲೆಯಲ್ಲಿ ಯಾವುದೇ ರೀತಿಯ ಅತ್ಯಮೂಲ್ಯ ವಜ್ರವೂ ಇಲ್ಲ….

© ವಿಪಿನ್ ಬಾಳಿಗಾ, ಬಿದಿರು ಮಂಡಲ
ನಾನು ನಿಮ್ಮನ್ನಾಗಲಿ ಅಥವಾ ಯಾವುದೇ ಪ್ರಾಣಿಗಳನ್ನಾಗಲಿ ಸಮ್ಮೋಹನಗೊಳಿಸುವುದಿಲ್ಲ, ನನ್ನನ್ನು ಕಂಡ ತಕ್ಷಣ ಕೆಲವು ಜನ ಭಯ ಬೀಳುತ್ತಾರೆ, ಆ ಭಯವೇ ಅವರನ್ನ ಚಲನಹೀನರನ್ನಾಗಿ ಮಾಡುತ್ತದೆ, ಇವರ ಚಲನಹೀನತೆಯನ್ನು ಕಂಡವರು ನಾನೇ ಇವರನ್ನು ಸಮ್ಮೋಹನಗೊಳಿಸಿದೆ ಎಂದುಕೊಳ್ಳುತ್ತಾರೆ.

© ವಿಪಿನ್ ಬಾಳಿಗಾ, ಹಸಿರು ಹಾವು
ನಾನು “ಹತುಲ್ಲಾ” ಜಾತಿಗೆ ಸೇರಿದ ಹಾವು, “ಹತುಲ್ಲಾ ” ಎಂದರೆ ಸಿನ್ನೀಳಿಯರ ಭಾಷೆಯಲ್ಲಿ ಕಣ್ಣು ಕೀಳುವವ ಅಥವಾ ಕಣ್ಣಿಗೆ ಚುಚ್ಚುವವ ಎಂದರ್ಥ, ಆದರೆ ನಿಜದಲ್ಲಿ ನಾನು ಯಾರ ಕಣ್ಣನ್ನು ಕೀಳುವುದೂ ಇಲ್ಲಾ ಅಥವಾ ಕುಕ್ಕುವುದೂ ಇಲ್ಲ. ಎಷ್ಟೊ ಜನ ಈ ಮೂಢನಂಬಿಕೆಯನ್ನು ನಂಬಿ, ನಾನು ಕಣ್ಣು ಕೀಳುತ್ತೇನೆ ಎಂದು ಭಾವಿಸಿ, ನನ್ನ ಪ್ರಾಣವನ್ನೇ ತೆಗೆಯುತ್ತಾರೆ .
ಚಿತ್ರಗಳು: ವಿಪಿನ್ ಬಾಳಿಗಾ
ವಿವರಣೆ: ಶಂಕರಪ್ಪ .ಕೆ .ಪಿ

ಪರಿಸರ ಹಾಗೂ ವನ್ಯಜೀವಿಗಳಲ್ಲಿ ಆಸಕ್ತಿಯುಳ್ಳ ಐ ಟಿ ವೃತ್ತಿಯವ ನಾನು. ಚಾರಣ , ಮಳೆಗಾಲ, ಕೀಟ , ಜೇಡ, ಹಾವು, ಉಭಯಚರಗಳು, ಒಳ್ಳೆಯ ಪುಸ್ತಕ ಓದುವುದು, ಪ್ರಯಾಣ, ವಿಧ-ವಿಧದ ಆಹಾರವೆಂದರೆ ಅಪಾರವಾದ ಪ್ರೀತಿ.