ಪ್ರಕೃತಿ ಬಿಂಬ
©ವಿಪಿನ್ ಬಾಳಿಗಾ, ನಾಗರಹಾವು.
ಪ್ರಾಣಿಗಳ ಗುಂಪಿನಲ್ಲೆ ಅತಿಹೆಚ್ಚು ನಿರ್ಲಕ್ಷಕ್ಕೊಳಗಾದ ಗುಂಪೆಂದರೆ ಹಾವುಗಳದ್ದು. ಈ ಸುಂದರ ಭವ್ಯವಾದ ಜೀವಿಗಳು ಜೈವಿಕವಾಗಿ ಮಹತ್ವವುಳ್ಳವುಗಳಾಗಿವೆ. ಹಾವುಗಳನ್ನು ನಾವು ಮನಬಂದಂತೆ ಕೊಲ್ಲುತ್ತೇವೆ. ಮೂಢ ನಂಬಿಕೆ ,ತಿಳುವಳಿಕೆಯ ಕೊರತೆ ಮತ್ತು ಫ್ಯಾಷನ್ ಲೋಕದಲ್ಲಿ ಹಾವುಗಳಿಂದ ಮಾಡಿದ ಸಾಧನಗಳ ಬೇಡಿಕೆಯೇ ಇವುಗಳ ಕೊಲ್ಲುವಿಕೆಗೆ ಮೂಲಕಾರಣ. ಅಪಾಯಕಾರಿಯಲ್ಲದ ವಿಷವಿಲ್ಲದ ನಿರೂಪದ್ರವಿ ಹಾವುಗಳನ್ನು ಸಹ ಕಂಡೊಡನೆ ಕೋಲಿಂದ ಕೊಂದು ಬಿಸಾಡುತ್ತೇವೆ. ಕಾರಣ ಹಾವುಗಳ ಬಗ್ಗೆ ಇರುವ ಭಯ! ಹಾವುಗಳ ಬಗ್ಗೆ ಸರಿಯಾದ ತಿಳುವಳಿಕೆಯೇ ಹಾವುಗಳ ಬಗ್ಗೆ ಇರುವ ಭಯವನ್ನು ಹೋಗಲಾಡಿಸಲು ಇರುವಸೂಕ್ತ ಮಾರ್ಗ.
– ರಾಲ್ಫ್ ವಾಲ್ಡೋ ಎಮರ್ಸನ್.
© ಕಾರ್ತಿಕ್ .ಎ . ಕೆ, ವೇರಿಯೇಬಲ್ ಘಾಟ್ ಫ್ರಾಗ್
ನಾವು ನಿರ್ಲಕ್ಷಿರುವ ಇನ್ನೊಂದು ಪ್ರಾಣಿಗಳ ಗುಂಪಿಗೆ ಕಪ್ಪೆಗಳು ಕೂಡ ಸೇರುತ್ತವೆ. ತೇವದಿಂದ ಕೂಡಿದ ಜಾರುವ ಅದರ ಚರ್ಮದ ಕಾರಣಕ್ಕೋ ಏನೋ ನಾವು ಇವುಗಳನ್ನು ಕಡೆಗಣಿಸುತ್ತೇವೆ. ಆದರೆ ಈ ಸುಂದರ ಸಣ್ಣ ಜೀವಿಗಳು ನಮಗೆ ತೊಂದರೆ ಕೊಡುವ ಕೀಟಗಳನ್ನು ತಿಂದು ಉಪಕಾರಿಯಾಗಿವೆ. ಕೀಟಗಳ ಸಂಖ್ಯೆಯನ್ನು ನಿಯಂತ್ರಣದಲ್ಲಿ ಇಡುವಲ್ಲಿ ಕಪ್ಪೆಗಳ ಪಾತ್ರ ದೊಡ್ಡದು. ಶುದ್ಧ ಮಾಲಿನ್ಯ ರಹಿತ ವಾತಾವರಣದಲ್ಲಿ ಮಾತ್ರ ಕಪ್ಪೆಗಳು ವಾಸಿಸುತ್ತವೆ. ನಿಮ್ಮ ಮನೆಯ ಸುತ್ತಮುತ್ತ ಕಪ್ಪೆಗಳಿದ್ದರೆ ನೀವೂ ಶುದ್ಧ ವಾತಾವರಣದಲ್ಲಿ ಬದುಕುತ್ತಿದ್ದೀರಿ ಎಂದು ಅರ್ಥ! ಹೆಚ್ಚುತ್ತಿರುವ ಮಾಲಿನ್ಯದಿಂದ ಇವುಗಳ ಆವಾಸಗಳು ಕಲುಷಿತಗೊಳ್ಳುತ್ತಿವೆ. ಅಳಿದುಳಿದ ಶುದ್ಧ ಆವಾಸಗಳನ್ನ ರಕ್ಷಿಸುವ ಹೊಣೆ ನಮ್ಮಮೇಲಿದೆ.
©ವಿಪಿನ್ ಬಾಳಿಗಾ, ಟೆರ್ರೆಸ್ಟ್ರಿಯಾಲ್ಏಡಿ.
ಏಡಿಗಳನ್ನು ನಾವು ಆಹಾರದ ರೀತಿ ಮಾತ್ರ ನೋಡುತ್ತೇವೆ. ಇವುಗಳು ಜೈವಿಕ ಪರಿಸರಕ್ಕೆ ಕೊಡವ ಕೊಡಗೆ ನಮ್ಮ ಕಣ್ಣಿಗೆ ಕಾಣಿಸುವುದೇ ಇಲ್ಲ. ಇವು ನೀರಿನ ಜಾಗದಲ್ಲಿ ಜೈವಿಕ ಕಲುಷಿತಗಳನ್ನು ತಿಂದು. ನೀರಿನ ಆವಾಸವನ್ನು ಶುಚಿಯಾಗಿಡಲು ಪ್ರಮುಖ ಪಾತ್ರವಹಿಸುತ್ತವೆ. ಪ್ರಪಂಚದಾದ್ಯಂತ ಕಲುಷಿತಗೊಳ್ಳುತ್ತಿರುವ ಇವುಗಳ ಆವಾಸದಿಂದ ಮತ್ತು ಸಿಕ್ಕಾಪಟ್ಟೆ ಅಂಕೆಯಿಲ್ಲದೆ ಬೇಟೆಮಾಡಿ ತಿಂದು ಮುಗಿಸಿರುವುದರಿಂದ ಇವುಗಳ ಸಂತತಿ ಕಣ್ಮರೆಯಾಗುತ್ತಿವೆ.
©ರವಿಪ್ರಕಾಶ್ .ಎಸ್ .ಎಸ್ , ಲೀಫ್ ಬೀಟಲ್.
ಭೂಮಿಯ ಮೇಲೆ ಅತಿಹೆಚ್ಚು ಬಯೋಮಾಸ್ ಹೊಂದಿರುವ ಜೀವಿಗಳೆಂದರೆ ಕೀಟಗಳು. ಶೇಕಡ 80% ರಷ್ಟು ಸಸ್ಯಗಳು ಪರಾಗಸ್ವರ್ಶಕ್ಕಾಗಿ ಇವುಗಳನ್ನೇ ಅವಲಂಬಿಸಿವೆ. ಶೇಖಡ 60% ಪಕ್ಷಿಗಳ ಪಾತ್ರ ಪ್ರಮುಖವಾದದು. ಇವು ಕಸದ ವಿಘಟನೆ, ಪೋಷಕಾಂಶಗಳ ಮರುಪೂರಣ, ಕೀಟಗಳ ನಿಯಂತ್ರಣದ ಕೆಲಸಗಳನ್ನು ಮಾಡುತ್ತವೆ. ಆದರೆ ನಾವು ಅವುಗಳ ಈ ಕಾರ್ಯಗಳನ್ನಲ್ಲಾ ನಿರ್ಲಕ್ಷಿಸಿ ಮನಬಂದಂತೆ ಕೀಟನಾಶಕ ವಿಷಗಳನ್ನು ಸಿಂಪಡಿಸಿ ಕೊಲ್ಲುತ್ತೇವೆ. ಬೆಳಗ್ಗೆ ಹಾನಿ ಮಾಡುವ ಒಂದು ಕೀಟವನ್ನು ಕೊಲ್ಲಲು ಸಿಂಪಡಿಸುವ ಕೀಟನಾಶಕದಿಂದ ಸಾವಿರ ಇತರ ಉಪಯುಕ್ತ ಕೀಟಗಳು ಸಾಯುತ್ತವೆ. ಇದರ ದೆಸೆಯಿಂದ ವಿಶ್ವದ ಕೀಟಗಳ 75% ಪ್ರಮಾಣ ಕುಸಿತ ಕಂಡಿದೆ. ಈಗ ನಮಗೆ ಇದರ ಪರಿಣಾಮ ಕಾಣದೇ ಇರಬಹುದು. ಮುಂದೆ ಹತ್ತಿರದಲ್ಲೇ ಕಾದಿದೆ ಗಂಡಾಂತರ!