ಕಾನನ

ನಿಸರ್ಗದೆಡೆಗೆ ಪಯಣ — 2011ರಿಂದ ಕನ್ನಡದಲ್ಲಿ ವನ್ಯವಿಜ್ಞಾನ, ಉಚಿತವಾಗಿ

ವಸುಂಧರಿ

ನೀಲಾಂಭರಿ
ನಯನ ಮನೋಹರಿ
ಸೌರ ಮಂಡಲ ವಾಸಿನಿ
ಜೀವ ಜನನಿ ವಸುಂಧರಿ

ಅಗ್ನಿ ಗರ್ಭಧಾರಣಿ
ಶಾಂತ ಕಪಲ ರೂಪಿಣಿ
ಚಂದ್ರಕಾಯ ಭೂಷಿಣಿ
ಕಾಂತರೂಪಿ, ವಸುಂಧರಿ…!

ಸಕಲ ಚರಾಚರ ಪೋಷಿಣಿ
ವಿಶ್ವರೂಪ ಸೌಮ್ಯಿಣಿ
ಅನಂತ ವಿಸ್ಮಯ ಕಾರಿಣಿ
ಮಹಾಶಕ್ತಿ ರೂಪಿಣಿ, ವಸುಂಧರಿ…!

ಗ್ರಹಣ ಗ್ರಹಣಿ
ಮನುಕುಲ ಪ್ರೇರಿಣಿ
ಅಗಣಿತ ರೂಪಧಾರಿಣಿ
ಪ್ರಕೃತಿ ಪಾಲಿನಿ, ವಸುಂಧರಿ…!

  ಕೃಷ್ಣನಾಯಕ್.
ರಾಮನಗರ ಜಿಲ್ಲೆ

ಕಾನನದ ದನಿ ಹರಡಿ
error: Content is protected.