ಮಲೆನಾಡಿನ ಮೈಸೊಬಗು

ಮಲೆನಾಡಿನ ಮೈಸೊಬಗು

© ಹೂರ್ ಬಾನು

ಮಲೆನಾಡಿನ ಮಲ್ಲಿಗೆಯ ಘಮ ಘಮ
ನಾಡಿನ ಮೂಲೆಮೂಲೆಗಿದುವೇ ವನಸುಮ
ಮಲೆನಾಡಿನ ಅಧೋ…! ಆ ಹಂಚಿನ ಮನೆ
ಮನಸೆಳೆವ ಕನ್ನಡಗಂಪರವಿದ ಕವಿಮನೆ

ತಣ್ಣನೆ ಸುರಿವ ವರ್ಷಧಾರೆ
ಮೈಮನ ಇಂಪನ ಅಮೃತಧಾರೆ
ಮೈನವಿರೇಳಿಸುವ ರಂಗುರಂಗಿನ ಚಿತ್ತಾರಗಳು
ಚೆಂದುಳ್ಳಿ ಚೆಲುವೆ ಪಾತರಗಿತ್ತಿಯ ಆಟಗಳು

ಹಸಿರಸಿರಿದ್ಯೋತಕ ಮೊಲ ಜಿಂಕೆಗಳು
ಸದ್ದಿಲ್ಲದೆ ಬುಸ್ಸೆನ್ನುವ ಕಾಳಿಂಗ ಸರ್ಪಗಳು
ಹಕ್ಕಿಗಳ ಇನಿದಾದ ಆ ಮಧುರ ಸ್ವರ
ಕಣ್ ಹಾಯಿಸಿದಲ್ಲೆಲ್ಲಾ ನಯನ ಮನೋಹರ

ತಳುಕು ಬಳುಕುವ ತರುಲತೆಬಳ್ಳಿಗಳು
ಹಸುರು ಹೊನ್ನು ಚೆಲ್ಲಿದ ಮರ ಗಿಡಗಳು
ನಡುನಡುವೆ ಅಲ್ಲಲ್ಲಿ ಪರ್ಣಕುಟಿಗಳು
ಏನೇಳಲಿ ವೈಯ್ಯಾರವ! ನನಗಾಯಿತಿವಳಮೇಲೆ ಮೋಹವ

ಗಗನಚುಂಬಿ ಪಚ್ಚಹಸುರ ಸಹ್ಯಾದ್ರಿ ಸಸ್ಯಶ್ಯಾಮಲೆ
ಸುತ್ತುವರೆದ ವನ-ಗಿರಿ-ಶೃಂಗಗಳ ನಿತ್ಯ ಸರಮಾಲೆ
ಮಲೆನಾಡ ಸೊಬಗ ಚೆಲುವೆಯ ಮೈಸಿರಿ,
ಇವಳು ಕರುನಾಡ ಮಡಿಲಿನ ಚೆಲುವೈಸಿರಿ

ರಾಮಲಿಂಗ ಮಾಡಗಿರಿ
           ರಾಯಚೂರು ಜಿಲ್ಲೆ

Spread the love
error: Content is protected.