ಕ್ಷಮಯಾಧರಿತ್ರಿ
ಕೆಣಕಿದೆವು ಅಣಕಿಸಿದೆವು ನಾವು
ನಾವೇ ಭೂಮಿ ಆಳುವ ಸಂಕುಲವೆಂದು
ನಾವೇ ಭೂಮಿ ಆಳುವ ಸಂಕುಲವೆಂದು
ಕೆರಳಿದಳು ತಾಯಿ ಮುನಿಸಿ
ಮಾನವತೆಯನ್ನು ಮರೆತು ಕೊಂಡು
ಬೋಳಿಸಿದೆವೆಲ್ಲ ಗುಡ್ಡ ಬೆಟ್ಟಗಳ
ಮುನಿಸು ತೋರಿದಳು ಭೂತಾಯಿ
ಬಿಸಿಯಾಗಿ ಭೂಮಿಯಲ್ಲ ತಳಮಳ
ಕಾಡನ್ನೆಲ್ಲಾ ನಾಡಾಗಿಸಿ
ಸಂಸ್ಕೃತಿ ಮರೆತ ಸುಸಂಸ್ಕೃತರಾದೆವು
ದಂಡಿಸಲು ತಯಾರಾದಳು ತಾಯಿ
ಫಲಿಸದಾಗ ಸಾ..ಮಾ..ಧಾನ ಭೇದವು
ನಮ್ಮ ಆಪೋಷಣೆಗೆ ಬತ್ತಿ ಹೋದವು
ಕೆರೆ ತೊರೆ ಹಳ್ಳಗಳು
ಕಂಡು ಮಾನವನ ನೀಚತನ
ನರಳಿ ತಾಯಿ ನಡುಗಿದಳು
ರಸ್ತೆ ಅಭಿವೃದ್ಧಿ ಮಾಡಲು
ಕಡಿದೆವು ಗಿಡ ಮರ ನೀಡಿ ನೆಪ ಸಾವಿರ
ಜೀವಸಂಕುಲ ವೃಕ್ಷದ ತುದಿಯಲ್ಲೇ ಕುಳಿತು
ಬುಡಕ್ಕೆ ಕೊಡಲಿ ಏಟು ಹಾಕುತ್ತಿರುವ
ವಾಸ್ತವತೆ ಮರೆತು ಅಪರಾಧವನ್ನು
ಅರಿತಳವಳು ಮಹಾತಾಯಿ
ಪ್ರಕೃತಿ ಮತ್ತಿನ್ನೇನು ಸೃಷ್ಟಿಸಲಿಲ್ಲ
ಸೃಷ್ಟಿಸಿ ಮಾನವ ಸಂತತಿ
– ಪ್ರೊ. ಸ್ವಾತಿ ಅಜಿತ್ ಶರ್ಮ
ಬೆಂಗಳೂರು ಜಿಲ್ಲೆ