ಮರ ಬಳಗ
ಬಗೆ ಬಗೆಯ ನನ್ನ ಬಳಗ
ಎಲೆ ಉದುರುವ, ಹರಿದ್ವರ್ಣ, ನಿತ್ಯ ಹರಿದ್ವರ್ಣ, ಕುರುಚಲು, ಶೋಲ ನನ್ನ ಬಳಗ…
ಹೆಣ್ಣಿಗೆ ಸೌಂದರ್ಯ ಅವಳ ಆಭರಣ,
ಭೂಮಿಗೆ ಸೌಂದರ್ಯ ನನ್ನ ಹರಿದ್ವರ್ಣ…
ತಾಣವಾಯಿತು ನನ್ನ ಬಳಗ ಪ್ರಾಣಿ ಸಂಕುಲಕೆ…
ಆಸರೆಯಾಯಿತು ನನ್ನ ಬಳಗ ಪಕ್ಷಿ ಸಂಕುಲಕೆ…
ನವಿಲ ನರ್ತನ, ಸಿಂಹ ಘರ್ಜನೆ,
ಆನೆ ನಡಿಗೆ, ನದಿಯ ಹುಟ್ಟು, ಜೇನು ತಟ್ಟು, ಹಕ್ಕಿಯ ಚಿಲಪಿಲಿ, ಕಪ್ಪೆಯ ಕರ ಕರ, ಜಿಂಕೆಯ ಓಟ, ಕೋತಿಯ ಜಿಗಿತ, ಜಿಗಣೆಯ ಕಡಿತ, ಅರಳುವ ಹೂವು, ಬಳ್ಳಿಯ ಬಳಕು, ಹಾವಿನ ಭುಸು ಭುಸು, ಹುಲಿಯ ಹೆಜ್ಜೆ, ಕೊಳಲಿನ ಬಿದಿರು, ಚಕ್ಕೆಯ ಘಮ ಘಮ, ಕರಡಿಯ ಕುಣಿತ, ಮನಸಿನ ತುಡಿತ, ಎಲ್ಲವು ನನ್ನ ಬಳಗದಲೆ…
ಬಾ ಬಾ ಎಂದು ಕರೆಯುವರು ಮಳೆಯನ್ನ…
ಬೇಕು ಸುರಿಯಲು, ಸುರಿಯುವುದು ಮಳೆಯು ಹೆಚ್ಚಿರುವಲ್ಲಿ ನನ್ನ ಬಳಗ…
ಬೇಕೆಂದಾಗ ಪಡೆಯುವರು ನನ್ನ ಆಸರೆ, ಬೇಸಿಗೆ ಮಳೆಗಾಲದಲ್ಲಿ…
ಹೆಚ್ಚಿಸುವರೆ ನನ್ನ ಬಳಗ ಅದೆ ಮಳೆಗಾಲದಲ್ಲಿ…?
ತಿಳಿಯಲಿ ಎಲ್ಲರಿಗೂ ನನ್ನ ಬಳಗ
ಬರಲಿ ಎಲ್ಲರು ಅಪ್ಪಿಕೊಳ್ಳಲು ನನ್ನ ಬಳಗ…
ಅಂದೆ ಉಳಿಯುವುದು ಮಾನವನ ಬಳಗ…
ಯತೀಶ್
ಹಾವೇರಿ ಜಿಲ್ಲೆ