ನೀವೂ ಕಾನನಕ್ಕೆ ಬರೆಯಬಹುದು

      

ಭೂಮಿ ಮೇಲೆ ಇರುವ ಶೇಕಡಾ 36% ಪ್ರಾಣಿಗಳ ಪ್ರಭೇದವು ಅಳಿವಿನ ಅಪಾಯದಲ್ಲಿವೆ. ನಾವು ಮತ್ತು ಪ್ರಾಣಿಗಳು ಹಲವಾರು ವರ್ಷಗಳಿಂದ ಭೂಮಿಯ ಮೇಲೆ ಒಟ್ಟಿಗೆ ಬದುಕುತ್ತಿದ್ದೇವೆ. ಅವುಗಳನ್ನು ಸಂರಕ್ಷಿಸುವುದು ನಮ್ಮ ಹೊಣೆಯಾಗಿದೆ. ಅವುಗಳು ಕೂಡ ಭೂಮಿಯ ಮೇಲೆ ಬದುಕಲು ನಮ್ಮಷ್ಟೇ ಅಧಿಕಾರವನ್ನು ಹೊಂದಿವೆ. ಹಲವಾರು ಪ್ರಾಣಿಗಳು ಮಾನವನ ಬೇಟೆಯಿಂದಾಗಿ, ಅವುಗಳ ಆವಾಸ ಸ್ಥಳಗಳ ಬದಲಾವಣೆಯಿಂದಾಗಿ ನಶಿಸಿ ಹೋಗುತ್ತಿವೆ. ಉದಾಹರಣೆಗೆ ಕಲ್ಲಿನ ಪರ್ವತ ಮಿಡತೆ (Rocky mountain locust), ಡೋಡೋ ಪಕ್ಷಿ, ಸ್ಟೆಲ್ಲರ್ಸ್ ಸಮುದ್ರ ಹಸು (stellar sea cow) ಹಾಗೂ ಇನ್ನೂ ಹಲವಾರು. ಅಕ್ಟೋಬರ್ ನಾಲ್ಕರಂದು ವಿಶ್ವ ಪ್ರಾಣಿಗಳ ದಿನವೆಂದು ಆಚರಿಸಲಾಗುತ್ತದೆ. ಈ ದಿನದಂದು ಪ್ರಾಣಿಗಳ ಸಂರಕ್ಷಣೆ ಹಾಗೂ ಹಕ್ಕುಗಳನ್ನು ಎಲ್ಲರಿಗೂ ತಿಳಿಸಲಾಗುತ್ತದೆ. ಈ ದಿನದಂದು ಮಾತ್ರವಲ್ಲದೆ ಎಲ್ಲಾ ದಿನಗಳಲ್ಲೂ ಈ ವಿಷಯ ಕುರಿತು ನಮ್ಮಲ್ಲಿ ಅರಿವು ಕುತೂಹಲವಿದ್ದರೆ, ನಮ್ಮ ಮುಂದಿನ ಪೀಳಿಗೆಗೂ ನಮ್ಮ ಸುತ್ತಮುತ್ತ ಇರುವ ಪ್ರಾಣಿಗಳನ್ನು ಜೀವಂತವಾಗಿ  ತೋರಿಸಬಹುದು. ಪ್ರಾಣಿಗಳ ಸಂರಕ್ಷಣೆ ಮತ್ತು ಅವುಗಳ ಹಕ್ಕುಗಳ ಕುರಿತು ನೀವು ಸಹ ಕಾನನಕ್ಕೆ ಲೇಖನಗಳನ್ನು ಬರೆಯಬಹುದು.

ಈ ರೀತಿಯ ಪರಿಸರದ ಬಗೆಗಿನ ಮಾಹಿತಿಯನ್ನು ಒದಗಿಸಲು ಇರುವ ಕಾನನ ಇ-ಮಾಸಿಕಕ್ಕೆ ಮುಂದಿನ ತಿಂಗಳ ಪ್ರತಿಗೆ ಲೇಖನಗಳನ್ನು ಆಹ್ವಾನಿಸಲಾಗಿದೆ. ಆಸಕ್ತರು ಪರಿಸರಕ್ಕೆ ಸಂಬಂಧಿಸಿದ ಕಥೆ, ಕವನ, ಛಾಯಾಚಿತ್ರ, ಚಿತ್ರಕಲೆ, ಪ್ರವಾಸ ಕಥನಗಳನ್ನು ಕಾನನ ಮಾಸಿಕದ ಇ-ಮೇಲ್ ವಿಳಾಸಕ್ಕೆ ಕಳುಹಿಸಬಹುದು.

ಕಾನನ ಪತ್ರಿಕೆಯ ಇ-ಮೇಲ್ ವಿಳಾಸ: [email protected]
ಅಂಚೆ ವಿಳಾಸ:
Study House,
ಕಾಳೇಶ್ವರಿ ಗ್ರಾಮ,
ಆನೇಕಲ್ ತಾಲ್ಲೂಕು,
ಬೆಂಗಳೂರು ನಗರ ಜಿಲ್ಲೆ,
ಪಿನ್ ಕೋಡ್ :560083. ಗೆ ಕಳಿಸಿಕೊಡಬಹುದು.

Spread the love
error: Content is protected.