ನೀವೂ ಕಾನನಕ್ಕೆ ಬರೆಯಬಹುದು

      

ಆನೆಗಳು ಬುದ್ಧಿವಂತ, ಕುಟುಂಬ ಆಧಾರಿತ, ಉತ್ತಮ ನೆನಪು ಮತ್ತು ಆಳವಾದ ಭಾವನೆಗಳನ್ನು ಹೊಂದಿರುವ ಪ್ರಾಣಿಗಳಾಗಿವೆ. ದುರದೃಷ್ಟವಶಾತ್, ಈ ಜೀವಿಗಳು ತಮ್ಮ ಉಳಿವಿಗಾಗಿ ಅನೇಕ ತೊಡರುಗಳನ್ನು ಎದುರಿಸುತ್ತಿವೆ. ಆನೆಗಳನ್ನು ದಂತದ ದುರಾಸೆಯಿಂದ ಬೇಟೆಗಾರರು ಪ್ರತಿ ವರ್ಷ ಕ್ರೂರವಾಗಿ ಕೊಲ್ಲುತ್ತಿದ್ದಾರೆ. ಆವಾಸಸ್ಥಾನವು ಕಡಿಮೆಯಾಗುತ್ತಿರುವುದು ಆನೆಗಳಿಗೆ ಅಪಾಯವಾಗಿ ಪರಿಣಮಿಸುತ್ತಿದೆ. ಆವಾಸಸ್ಥಾನ ಕಡಿಮೆಯಾಗುವುದರಿಂದ ಆನೆಗಳಿಗೆ ಸರಿಯಾಗಿ ಆಹಾರ ಸಿಗುವುದಿಲ್ಲ ಕಾರಣ ಆನೆಗಳಿಗೆ ದಿನಕ್ಕೆ ನೂರಾರು ಪೌಂಡ್ ಆಹಾರದ ಅವಶ್ಯಕತೆ ಇದೆ. ಆಹಾರ ಸಿಗದ ಆನೆಗಳು ಊರಿನ ಕಡೆ ನುಗ್ಗಿ ಮಾನವ-ಆನೆ ಸಂಘರ್ಷಕ್ಕೆ ಎಡೆಮಾಡಿಕೊಡುತ್ತವೆ. ಇದರಿಂದ ರೈತರ ಬೆಳೆ, ಜೀವನದ ಶ್ರಮ ಕೆಲವೊಮ್ಮೆ ರೈತನ ಜೀವವೂ ನಷ್ಟವಾಗಬಹುದು. ಆನೆಯು ದೇಹದಲ್ಲಿ ದಪ್ಪವಾಗಿರುವ ಕಾರಣ ಅದನ್ನೇ ಅಪರಾಧಿ ಎನ್ನಾಗಿಸಿ ಬಂಧಿಸಲಾಗಿತ್ತದೆ.  ತನ್ನದಲ್ಲದ ತಪ್ಪಿಗೆ ಆ ಜೀವಿಯು ತನ್ನ ಇಡೀ ಜೀವನವನ್ನು ಸೆರೆಯಲ್ಲೇ ಕಳೆಯುವಂತಾಗುತ್ತದೆ. ಈ ಅದ್ಭುತ ಪ್ರಾಣಿಗಳ ಬಗ್ಗೆ ಮತ್ತು ಅವುಗಳನ್ನು ಸಂರಕ್ಷಿಸಲು ಏನು ಮಾಡಬೇಕು ಎಂಬ ಅರಿವನ್ನು ಸಾಮಾನ್ಯ ಜನರಲ್ಲಿ ಮೂಡಿಸಲು ಪ್ರತಿ ವರ್ಷ ಆಗಸ್ಟ್ 12 ರನ್ನು ಪ್ರಪಂಚದಾದ್ಯಂತ ವಿಶ್ವ ಆನೆ ದಿನವೆಂದು ಆಚರಿಸಲಾಗುತ್ತದೆ. ನೀವು ಈ ವಿಶ್ವ ಆನೆ ದಿನದಲ್ಲಿ ನಡೆಯುವ ಹಲವು ಕಾರ್ಯಕ್ರಮದಲ್ಲಿ ಭಾಗಿಯಾಗಬಹುದು, ಭಾಗಿಯಾಗಿ ಅದರ ಅನುಭವವನ್ನು ಕಾನನ ಓದುಗರ ಜೊತೆ ಹಂಚಿಕೊಳ್ಳಿ.

ಈ ರೀತಿಯ ಪರಿಸರದ ಬಗೆಗಿನ ಮಾಹಿತಿಯನ್ನು ಒದಗಿಸಲು ಇರುವ ಕಾನನ ಇ-ಮಾಸಿಕಕ್ಕೆ ಮುಂದಿನ ತಿಂಗಳ ಪ್ರತಿಗೆ ಲೇಖನಗಳನ್ನು ಆಹ್ವಾನಿಸಲಾಗಿದೆ. ಆಸಕ್ತರು ಪರಿಸರಕ್ಕೆ ಸಂಬಂಧಿಸಿದ ಕಥೆ, ಕವನ, ಛಾಯಾಚಿತ್ರ, ಚಿತ್ರಕಲೆ, ಪ್ರವಾಸ ಕಥನಗಳನ್ನು ಕಾನನ ಮಾಸಿಕದ ಇ-ಮೇಲ್ ವಿಳಾಸಕ್ಕೆ ಕಳುಹಿಸಬಹುದು.

ಕಾನನ ಪತ್ರಿಕೆಯ ಇ-ಮೇಲ್ ವಿಳಾಸ: [email protected]
ಅಂಚೆ ವಿಳಾಸ:
Study House,
ಕಾಳೇಶ್ವರಿ ಗ್ರಾಮ,
ಆನೇಕಲ್ ತಾಲ್ಲೂಕು,
ಬೆಂಗಳೂರು ನಗರ ಜಿಲ್ಲೆ,
ಪಿನ್ ಕೋಡ್ :560083. ಗೆ ಕಳುಹಿಸಿ ಕೊಡಬಹುದು

Spread the love
error: Content is protected.