ವನ್ಯ ವಿಜ್ಞಾನ ಶಿಬಿರ- ೨೦೨೪

©ಧನರಾಜ್ ಎಮ್.
ಪ್ರತೀ ವರ್ಷದ ಬೇಸಿಗೆಯಂದು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಅಕ್ಕ-ಪಕ್ಕದಲ್ಲಿರುವ ಹಳ್ಳಿಗಳ ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ವನ್ಯ ವಿಜ್ಞಾನ ಶಿಬಿರ ಎಂಬ ಬೇಸಿಗೆ ಶಿಬಿರವನ್ನು ಆಯೋಜಿಸುವುದು WCG ತಂಡದ ಪ್ರತೀತಿಯಾಗಿದೆ.
ಅದೇ ರೀತಿ ಈ ವರ್ಷವೂ ಕೂಡ ಏಪ್ರಿಲ್ 13 ರಿಂದ 15 ನೇ ತಾರೀಕಿನ ವರೆಗೆ ಅಡವಿ ಫೀಲ್ಡ್ ಸ್ಟೇಷನ್ ನಲ್ಲಿ 3 ದಿನದ ಶಿಬಿರವನ್ನು ಆಯೋಜಿಸಲಾಗಿತ್ತು. ಈ ಶಿಬಿರದಲ್ಲಿ ಸುಮಾರು 20 ಮಕ್ಕಳು, ಸ್ವಯಂ ಸೇವಕರು ಮತ್ತು ಡಬ್ಲ್ಯೂ. ಸಿ. ಜಿ. ಯ ಸದಸ್ಯರು ಭಾಗಿಯಾಗಿದ್ದರು. ಮಕ್ಕಳು ಪ್ರಕೃತಿ ನಡಿಗೆ, ಪುಸ್ತಕ ಓದುವುದು, ಆಟ, ಚಟುವಟಿಕೆ, ಸಾಕ್ಷ್ಯಚಿತ್ರ ವೀಕ್ಷಣೆ ಗಳ ಮೂಲಕ ಹಲವಾರು ವಿಚಾರಗಳನ್ನು ತಿಳಿದುಕೊಂಡರು. ಸಂಪನ್ಮೂಲ ವ್ಯಕ್ತಿಗಳಾಗಿ ಕರ್ನಾಟಕ ಅರಣ್ಯ ಇಲಾಖೆಯ ಬನ್ನೇರುಘಟ್ಟದ ವಲಯ ಅರಣ್ಯಾಧಿಕಾರಿಗಳು ಮತ್ತು ತಂಡ ನಮ್ಮೊಂದಿಗೆ ಕೈ ಜೋಡಿಸಿದರು. ಶಿಬಿರಾರ್ಥಿಗಳು ಇಲಾಖೆಯವರ ಜೊತೆ ಸಂವಾದಿಸುವ ಮುಖಾಂತರ ಕಾಡಿನ ಬಗೆಗಿನ ತಮ್ಮಲ್ಲಿನ ಜ್ಞಾನವನ್ನು ಮತ್ತಷ್ಟು ವೃದ್ಧಿಸಿಕೊಂಡರು. ಮಕ್ಕಳ ಕೋರಿಕೆಯ ಮೇರೆಗೆ ಅರಣ್ಯ ಇಲಾಖೆಯ ಸಿಬ್ಬಂದಿಯವರು ಪಕ್ಕದ ಬೆಟ್ಟದಲ್ಲಿನ ಸಣ್ಣ ಚರಣಕ್ಕೂ ನಮ್ಮೊಂದಿಗೆ ಜೊತೆಯಾದದ್ದು ಸ್ಮರಣೀಯ ಕ್ಷಣವಾಗಿತ್ತು.
ಮೂರನೇ ದಿನದ ಚಾರಣ ಬಹಳ ಸುಂದರವಾಗಿತ್ತು. ಚಾರಣದ ನಂತರ ಮಕ್ಕಳಿಗೆ ಓದಲು ಸಂಜಯ್ ಗುಬ್ಬಿ ಸರ್ ರವರು ಕೊಟ್ಟಂತಹ ಪರಿಸರಕ್ಕೆ ಸಂಬಂಧಿಸಿದ ಸಣ್ಣ ಪುಸ್ತಕಗಳನ್ನು ನೀಡಿ ಬೀಳ್ಕೊಡಲಾಯಿತು. ಈ ಶಿಬಿರಕ್ಕೆ ಪರೋಕ್ಷವಾಗಿ, ಪ್ರತ್ಯಕ್ಷವಾಗಿ ಸಹಕರಿಸಿದ ಎಲ್ಲಾ ಡಬ್ಲ್ಯೂ. ಸಿ. ಜಿ. ತಂಡದ ಸದಸ್ಯರಿಗೂ, ಸ್ವಯಂ ಸೇವಕರಿಗೂ, ಸಂಪನ್ಮೂಲ ವ್ಯಕ್ತಿಗಳಿಗೂ ತುಂಬು ಹೃದಯದ ಧನ್ಯವಾದಗಳು.





ಲೇಖನ: ನಾಗೇಶ್ ಒ. ಎಸ್.
ಡಬ್ಲ್ಯೂ. ಸಿ. ಜಿ. ಬೆಂಗಳೂರು ನಗರ ಜಿಲ್ಲೆ