ನೀವೂ ಕಾನನಕ್ಕೆ ಬರೆಯಬಹುದು
ತುಂಬ ಸೂಕ್ಷ್ಮವಾಗಿ ಗಮನಿಸಿದರೆ ಚಿಂಪಾಂಜಿಗಳಲ್ಲಿ ಮನುಷ್ಯರನ್ನು ಹೋಲುವ ಲಕ್ಷಣಗಳು ಬಹಳ ಇವೆ. ಶತ್ರುಗಳನ್ನು ಬೆದರಿಸಲು ಚಿಂಪಾಂಜಿಗಳು ಕಲ್ಲುಗಳನ್ನು ಎಸೆಯುತ್ತವೆ; ಕೋಲು ಹಿಡಿದು ಅಟ್ಟಿಸುತ್ತವೆ. ಗಟ್ಟಿ ಕಾಯಿಗಳೊಳಗಿನ ಬೀಜ ಬಿಡಿಸಲು ಚಿಂಪಾಂಜಿಗಳು ಕಲ್ಲಿನಿಂದ ಕುಟ್ಟುತ್ತವೆ. ಹುತ್ತದೊಳಗಿನ ಗೆದ್ದಲುಗಳಿಗೆ ಉದ್ದದ ಕಡ್ಡಿಯ ಗಾಳ ಹಾಕಿ ಹಿಡಿದು ತಿನ್ನುತ್ತವೆ. ಚಿಂಪಾಂಜಿಗಳು ವಾಸ್ತವವಾಗಿ ಮಿಶ್ರಾಹಾರಿಗಳು. ಆದರೂ ಅವುಗಳು ಮುಖ್ಯವಾಗಿ ಸೊಪ್ಪುಗಳು, ಹೂವುಗಳು, ಕಾಯಿಗಳು, ಹಣ್ಣುಗಳು, ಬೀಜಗಳು ಮುಂತಾದವುಗಳನ್ನು ತಿನ್ನುತ್ತವೆ. ಚಿಂಪಾಂಜಿಗಳು ಅಂದಾಜು ಮುನ್ನೂರು ಬಗೆಗಳ ಸಸ್ಯಾಹಾರಗಳನ್ನು ಸೇವಿಸುತ್ತವೆ. ಚಿಂಪಾಂಜಿಗಳ ಗುಂಪುಗಳಲ್ಲಿ ವಾಸಿಸುತ್ತವೆ. ಪ್ರತಿ ಗುಂಪಿನಲ್ಲಿ 10 ರಿಂದ 15 ಚಿಂಪಾಂಜಿಗಳಿರುತ್ತವೆ. ಅವುಗಳ ನೈಸರ್ಗಿಕ ನೆಲೆಗಳಲ್ಲಿ ಹಿಂದೆ ಭಾರೀ ಸಂಖ್ಯೆಯಲ್ಲಿ ನೆಮ್ಮದಿಯಿಂದ ಜೀವಿಸುತ್ತಿದ್ದವು. ಆದರೆ ಈಗ ಅವುಗಳ ಸಂಖ್ಯೆ ಕಳೆದ ಕೆಲವು ದಶಕಗಳಿಂದ ಕ್ಷಿಪ್ರವಾಗಿ ಕ್ಷೀಣಿಸುತ್ತಿದೆ. ತಜ್ಞರ ಗಣತಿಗಳ ಪ್ರಕಾರ ಚಿಂಪಾಂಜಿಗಳ ಈಗಿನ ಒಟ್ಟು ಸಂಖ್ಯೆ ಮೂರು ಲಕ್ಷದಷ್ಟಿದೆ ಅಷ್ಟೆ. ಹಾಗಾಗಿ ಅವು ಅಳಿವಿನ ಅಪಾಯದಲ್ಲಿರುವ ಪ್ರಾಣಿಗಳ ಪಟ್ಟಿಯಲ್ಲಿವೆ. ಚಿಂಪಾಂಜಿಗಳ ಆವಾಸಸ್ಥಾನಗಳಲ್ಲಿ ನಡೆಯುತ್ತಿರುವ ಅರಣ್ಯ ನಾಶ, ವನ್ಯ ಮಾಂಸಕ್ಕಾಗಿ ವ್ಯಾಪಕವಾಗಿರುವ ಕಳ್ಳ ಬೇಟೆ ಮುಂತಾದ ಮಾನವ ಚಟುವಟಿಕೆಗಳು ಚಿಂಪಾಂಜಿಗಳನ್ನು ವಿನಾಶದ ಅಂಚಿಗೆ ತಂದಿವೆ. ಚಿಂಪಾಂಜಿಗಳ ಬಗ್ಗೆ ಜಾಗೃತಿ ಮೂಡಿಸಲು ಜುಲೈ 14ರಂದು “ವಿಶ್ವ ಚಿಂಪಾಂಜಿ ದಿನ” ವೆಂದು ಆಚರಿಸಲಾಗುತ್ತದೆ.
ಈ ರೀತಿಯ ಪರಿಸರದ ಬಗೆಗಿನ ಮಾಹಿತಿಯನ್ನು ಒದಗಿಸಲು ಇರುವ ಕಾನನ ಇ-ಮಾಸಿಕಕ್ಕೆ ಮುಂದಿನ ತಿಂಗಳ ಪ್ರತಿಗೆ ಲೇಖನಗಳನ್ನು ಆಹ್ವಾನಿಸಲಾಗಿದೆ. ಆಸಕ್ತರು ಪರಿಸರಕ್ಕೆ ಸಂಬಂಧಿಸಿದ ಕಥೆ, ಕವನ, ಛಾಯಾಚಿತ್ರ, ಚಿತ್ರಕಲೆ, ಪ್ರವಾಸ ಕಥನಗಳನ್ನು ಕಾನನ ಮಾಸಿಕದ ಇ-ಮೇಲ್ ವಿಳಾಸಕ್ಕೆ ಕಳುಹಿಸಬಹುದು.
ಕಾನನ ಪತ್ರಿಕೆಯ ಇ-ಮೇಲ್ ವಿಳಾಸ: [email protected]
ಅಂಚೆ ವಿಳಾಸ:
ಅಡವಿ ಫೀಲ್ಡ್ ಸ್ಟೇಷನ್,
ಒಂಟೆಮಾರನ ದೊಡ್ಡಿ ಗ್ರಾಮ ,
ರಾಗಿಹಳ್ಳಿ ಅಂಚೆ,
ಜಿಗಣಿ ಹೋಬಳಿ,
ಆನೇಕಲ್ ತಾಲ್ಲೂಕು ,
ಬೆಂಗಳೂರು ನಗರ ಜಿಲ್ಲೆ
ಪಿನ್ ಕೋಡ್ :560083. ಗೆ ಕಳಿಸಿಕೊಡಬಹುದು.