ಮಾಸ ವಿಶೇಷ – ಸಗಡೆ ಮರ

ಮಾಸ ವಿಶೇಷ –  ಸಗಡೆ ಮರ

                         © ನಾಗೇಶ್ ಓ. ಎಸ್. ಸಗಡೆ ಮರ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ

ಸಾಮಾನ್ಯ ಹೆಸರು: Ceylon Oak
ವೈಜ್ಞಾನಿಕ ಹೆಸರು : Schleichera oleosa

ಭಾರತ-ಶ್ರೀಲಂಕಾ ಮೊದಲಾದ ದೇಶಗಳ ಎಲೆ ಉದುರುವ ಕಾಡುಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಸಗಡೆ ಮರವು ಸುಮಾರು ಹತ್ತು ಮೀಟರ್ ಎತ್ತರಕ್ಕೆ ಬೆಳೆಯುತ್ತದೆ. ಮರದ ತೊಗಟೆಯು ತಿಳಿ ಬೂದು ಬಣ್ಣದಿಂದ ಕೂಡಿದ್ದು, ಎಲೆಗಳು ಸಂಯುಕ್ತ ವಿನ್ಯಾಸವನ್ನು ಹೊಂದಿವೆ.  ಚಿಗುರೆಲೆಗಳು ಕಡುಗೆಂಪು ಬಣ್ಣದಲ್ಲಿರುವುದರಿಂದ ಸಗಡೆ ಮರವನ್ನು ಸುಲಭವಾಗಿ ಗುರುತಿಸಬಹುದು. ವರ್ಷದ ಮಾರ್ಚ್-ಏಪ್ರಿಲ್ ತಿಂಗಳುಗಳಲ್ಲಿ ಹಸಿರು ಮಿಶ್ರಿತ ಹಳದಿ ಬಣ್ಣದ ಹೂಗಳನ್ನು ಬಿಡುತ್ತದೆ. ಹೂಗಳು ಗೊಂಚಲುಗಳಲ್ಲಿದ್ದು (infloresence), ಚಿಕ್ಕದಾಗಿ ಸುಮಾರು ಒಂದು ಸೆಂಟಿಮೀಟರ್ ಗಿಂತ ಕಡಿಮೆ ಗಾತ್ರದಲ್ಲಿರುತ್ತವೆ. ಮರದ ಹಣ್ಣುಗಳು ಕಂದು ಬಣ್ಣದ ಹೆಬ್ಬೆರಳು ಗಾತ್ರದಲ್ಲಿದ್ದು, ಹಣ್ಣಿನ ತೊಗಟೆಯ ಮೇಲೆ ಮುಳ್ಳಿನಂತಹ ಆಕಾರವನ್ನು ನೋಡಬಹುದು. ಹಣ್ಣಿನ ಒಳಗೆ ತಿಳಿಹಸಿರು-ಹಳದಿಯ ತಿರುಳು ಇದ್ದು ತಿನ್ನಲು ಹುಳಿ ಮತ್ತು ಒಗರಿನಿಂದ ಕೂಡಿದ್ದು, ಇದರ ಒಳಗೆ ಒಂದು ಅಥವಾ ಎರಡು ಬೀಜಗಳಿರುತ್ತವೆ. ಮರದ ಹಣ್ಣುಗಳನ್ನು ಕೋತಿ, ಜಿಂಕೆ, ಆನೆ ಇನ್ನಿತರ ಪ್ರಾಣಿಗಳು ತಿನ್ನುತ್ತವೆ. ಈ ಮರದ ತೊಗಟೆಯನ್ನು ಆಯುರ್ವೇದ ಔಷಧಿ ತಯಾರಿಸಲು ಬಳಸುತ್ತಾರೆ. ಈ ಮರದ ಬೀಜಗಳಿಂದ ಎಣ್ಣೆಯನ್ನು ತೆಗೆಯುತ್ತಾರೆ.

Print Friendly, PDF & Email
Spread the love
error: Content is protected.