ನೀವೂ ಕಾನನಕ್ಕೆ ಬರೆಯಬಹುದು

      

ಬೆಟ್ಟಗುಡ್ಡ, ಕಣಿವೆಗಳು, ಮುಗಿಲೆತ್ತರದ ಪರ್ವತಗಳು, ಈ ಭೂಮಿಯ ಸೊಬಗನ್ನು ಹೆಚ್ಚಿಸುವ ಒಡವೆಗಳು. ಪ್ರಕೃತಿಯ ಸೌಂದರ್ಯರಾಶಿಯ ಆಕರಗಳಲ್ಲಿ ಒಂದೊಂದೂ ಒಂದೊಂದು ರೀತಿಯ ವಿಸ್ಮಯ!.
ನಿಸರ್ಗದಲ್ಲಿ ಕಿರೀಟದಂತೆ ಕಂಗೊಳಿಸುವ ಪರ್ವತಗಳು ಪರಿಸರ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಭೂಖಂಡದ ಮೇಲ್ಮೈ ಶೇ 26.5 ಪರ್ವತಗಳಿಂದ ಆವ್ರತವಾಗಿದೆ, ಅಲ್ಲಿರುವ ನೀರು, ಶುದ್ಧಗಾಳಿ, ವೈವಿಧ್ಯತೆ, ದೃಶ್ಯಗಳು ಗಮನ ಸೆಳೆಯುತ್ತವೆ. ಸಿಹಿ ನೀರಿನ ಅಗತ್ಯಗಳನ್ನು ಪೂರೈಸುವ ನೀರಿನ ಗೋಪುರಗಳಾಗಿವೆ.
ಪಟ್ಟು ಪರ್ವತಗಳು (ಮಡಿಸಿದ ಪರ್ವತಗಳು), ಬ್ಲಾಕ್ ಪರ್ವತಗಳು, ಗುಮ್ಮಟ ಪರ್ವತಗಳು, ಜ್ವಾಲಾಮುಖಿ ಪರ್ವತಗಳು ಮತ್ತು ಪ್ರಸ್ಥಭೂಮಿ ಪರ್ವತಗಳು ಇದ್ದು ಅನೇಕ ಪ್ರಭೇದದ ಪ್ರಾಣಿ-ಪಕ್ಷಿಗಳಿಗೆ, ಜೀವಿಗಳಿಗೆ ಆಶ್ರಯವನ್ನು ಒದಗಿಸಿ, ಪರಿಸರ ವ್ಯವಸ್ಥೆಯ ಸಮತೋಲನವನ್ನು ಕಾಪಾಡುತ್ತಿದೆ. ಕಡಿಮೆ ಎತ್ತರದಲ್ಲಿರುವ ಪರ್ವತಗಳು ಅಸಾಧಾರಣ ಜೀವವೈವಿಧ್ಯತೆಯನ್ನು ಬೆಂಬಲಿಸುತ್ತವೆ, ಇತ್ತೀಚೆಗೆ ನಗರೀಕರಣ, ಕೈಗಾರೀಕರಣಗಳು ಪರ್ವತಗಳೆಡೆಗೆ ಮುಖ ಮಾಡುತ್ತಿರುವುದರಿಂದ ನೈಸರ್ಗಿಕ ವರದಾನವಾದ ಪರ್ವತಗಳನ್ನು ಉಳಿಸಿಕೊಳ್ಳುವುದು ಅನಿವಾರ್ಯವಾಗಿದೆ. ಇಂತಹ ಪರ್ವತಗಳ ಪ್ರಾಮುಖ್ಯತೆಯನ್ನು ತಿಳಿಸಲು ಮತ್ತು ಜಾಗೃತಿ ಮೂಡಿಸಲು ಡಿಸೆಂಬರ್ 11 ಅಂತರರಾಷ್ಟ್ರೀಯ ಪರ್ವತ ದಿನವನ್ನಾಗಿ ಆಚರಿಸಲಾಗುತ್ತದೆ.
ಈ ರೀತಿಯ ಪರಿಸರದ ಬಗೆಗಿನ ಮಾಹಿತಿಯನ್ನು ಒದಗಿಸಲು ಇರುವ ಕಾನನ ಇ-ಮಾಸಿಕಕ್ಕೆ ಮುಂದಿನ ತಿಂಗಳ ಪ್ರತಿಗೆ ಲೇಖನಗಳನ್ನು ಆಹ್ವಾನಿಸಲಾಗಿದೆ. ಆಸಕ್ತರು ಪರಿಸರಕ್ಕೆ ಸಂಬಂಧಿಸಿದ ಕಥೆ, ಕವನ, ಛಾಯಾಚಿತ್ರ, ಚಿತ್ರಕಲೆ, ಪ್ರವಾಸ ಕಥನಗಳನ್ನು ಕಾನನ ಮಾಸಿಕದ ಇ-ಮೇಲ್ ವಿಳಾಸಕ್ಕೆ ಕಳುಹಿಸಬಹುದು.

ಕಾನನ ಪತ್ರಿಕೆಯ ಇ-ಮೇಲ್ ವಿಳಾಸ: [email protected]
ಅಂಚೆ ವಿಳಾಸ:
Study House,
ಕಾಳೇಶ್ವರಿ ಗ್ರಾಮ,
ಆನೇಕಲ್ ತಾಲ್ಲೂಕು,
ಬೆಂಗಳೂರು ನಗರ ಜಿಲ್ಲೆ,
ಪಿನ್ ಕೋಡ್ :560083. ಗೆ ಕಳಿಸಿಕೊಡಬಹುದು.

Spread the love
error: Content is protected.