ನೀವೂ ಕಾನನಕ್ಕೆ ಬರೆಯಬಹುದು
ವಿಶ್ವಭೂಮಿದಿನ
ನೀಲಿ ಗ್ರಹ ಎಂದೇ ಗುರುತಿಸಿಕೊಂಡಿರುವ ನಮ್ಮಭೂಮಿ, ಸೌರಮಂಡಲದಲ್ಲಿ ಜೀವಿಗಳನ್ನು ಹೊಂದಿರುವ ಏಕೈಕ ಗ್ರಹ.
“ಬೆಳಗಾಗಿ ನಾನೆದ್ದು ಯಾರ್ ಯಾರ ನೆನೆಯಲಿ, ಎಳ್ಳು ಜೀರಿಗೆ ಬೆಳೆಯೋಳ, ಭೂಮ್ತಾಯ ಎದ್ದೊಂದು ಘಳಿಗೆ ನೆನೆದೇನು….”
ಎಂಬ ಜಾನಪದ ಗೀತೆಯ ಸ್ವಾರಸ್ಯ ನಮ್ಮೆಲ್ಲರಿಗೂ ಚಿರಪರಿಚಿತ. ಸುಮಾರು 4 .5 ಬಿಲಿಯನ್ ವರ್ಷಗಳ ಇತಿಹಾಸವಿರುವ ನಮ್ಮ ಭೂಮಿಯ ಮೇಲೆ ಜೀವವಿಕಾಸದ ವಿಸ್ಮಯದ ಬಗ್ಗೆ ವಿಜ್ಞಾನಿಗಳಿಗೆ ಕುತೂಹಲ ಹೆಚ್ಚುತ್ತಲೇ ಇದೆ. ಸಂಶೋಧನೆಗಳು ತಿಳಿಸುವಂತೆ ಜೀವಿಗಳು ಜೀವಿಸಲು ಯೋಗ್ಯವಾದ, ಅತ್ಯವಶ್ಯಕವಾದ ಗಾಳಿ, ನೀರು, ಬೆಳಕು ಮತ್ತು ಮಣ್ಣು ಎಲ್ಲವೂ ಸಿಗುವುದು ನಮ್ಮ ಭೂಮಿಯಲ್ಲಿ ಮಾತ್ರ. ಕೋಟ್ಯಂತರ ಜೀವರಾಶಿಗಳಿಗೆ ನೆಲೆಯಾಗಿರುವ ಈ ಭೂಮಿಯಲ್ಲಿ, ಜೀವ ವಿಕಾಸದ ಹಾದಿಯಲ್ಲಿ ನಿಧಾನಗತಿಯಲ್ಲಿ ಪ್ರಗತಿ ಹೊಂದಿದ ಮಾನವ ತೀವ್ರಗತಿಯಲ್ಲಿ, ಈಗ ಮಾಡುತ್ತಿರುವ ಹಾನಿಯಿಂದ ಮುಂದೇನಾಗಬಹುದೆಂಬ ಆತಂಕ ಮೂಡುತ್ತಿದೆ. ಭೂಮಿತಾಯಿಯ ಉದರ ಸೀಳಿದರು ಮುತ್ತುರತ್ನಗಳ ಕೊಳ್ಳೆಹೊಡೆದರು, ಮಾಲಿನ್ಯ ಮಾಡುತ್ತಿದ್ದರೂ ಸಹಿಸಿಕೊಂಡಿದೆ, ಭೂಮಿ. ಆದ್ದರಿಂದ ಸಾಧ್ಯವಾದಷ್ಟು ಪ್ರಕೃತಿ ಸ್ನೇಹಿ ಅಭ್ಯಾಸಗಳನ್ನು ರೂಢಿಸಿಕೊಳ್ಳಬೇಕು. ಇರುವುದೊಂದೇ ಭೂಮಿ, ಇದನ್ನು ಸುರಕ್ಷಿತವಾಗಿ ಕಾಪಾಡಿಕೊಳ್ಳಬೇಕು ಎಂದು ಜಾಗೃತಿ ಮೂಡಿಸಲು ಏಪ್ರಿಲ್ 22 ರಂದು ವಿಶ್ವಭೂಮಿ ದಿನವನ್ನು ಆಚರಿಸಲಾಗುತ್ತದೆ.
ಹಾಗಾಗಿ ನೀವು ಬರೆದ ಪರಿಸರ ಲೇಖನಗಳು ಹಾಗೂ ಕವನಗಳನ್ನ ನಮ್ಮ ಈ ಇ-ಮಾಸಿಕಕ್ಕೆ ಈ ಕೆಳಗಿನ ವಿಳಾಸಕ್ಕೆ ಅಥವಾ ನಮ್ಮ ಇ ಮೇಲ್ ವಿಳಾಸಕ್ಕೆ ಕಳುಹಿಸಿಕೊಡಿ.
ಕಾನನ ಪತ್ರಿಕೆಯ ಇ-ಮೇಲ್ ವಿಳಾಸ: [email protected]
ಅಂಚೆ ವಿಳಾಸ:
Study House,
ಕಾಳೇಶ್ವರಿ ಗ್ರಾಮ,
ಆನೇಕಲ್ ತಾಲ್ಲೂಕು,
ಬೆಂಗಳೂರು ನಗರ ಜಿಲ್ಲೆ,
ಪಿನ್ ಕೋಡ್ :560083. ಗೆ ಕಳಿಸಿಕೊಡಬಹುದು.