ನೀವೂ ಕಾನನಕ್ಕೆ ಬರೆಯಬಹುದು

      

ವಿಶ್ವದಾದ್ಯಂತ ದೇಶಗಳು ಪರ್ವತಗಳಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಜಾಗೃತಿ ಮೂಡಿಸಲು ಡಿಸೆಂಬರ್ 04 ನೇ ತಾರೀಖಿನಂದು ಅಂತರಾಷ್ಟ್ರೀಯ ಪರ್ವತ ದಿನವನ್ನಾಗಿ ಆಚರಿಸುತ್ತವೆ. ಎಷ್ಟೋ ಜನರಿಗೆ ಪರ್ವತಗಳ ವಿಶೇಷತೆ ಏನಿದೆ ಅಂತ, ಅವುಗಳಿಗೆ ಇಡೀ ದಿನವನ್ನು ಏಕೆ ಮೀಸಲಿಡಬೇಕೆಂದು ಗೊಂದಲ ಸೃಷ್ಟಿಯಾಗುತ್ತದೆ. ದೈತ್ಯಕಾರದ ಪರ್ವತಗಳ ಬಗ್ಗೆ ಹೇಳಲು ಬೇಕಾದಷ್ಟು ವಿಷಯಗಳಿವೆ. ಈ ದೈತ್ಯರು ಕೆಲವು ಅದ್ಭುತವಾದ ಭೂದೃಶ್ಯಗಳನ್ನು, ವೈವಿಧ್ಯಮಯ ಪರಿಸರ ವ್ಯವಸ್ಥೆಗಳನ್ನು, ವಿವಿಧ ಜಾತಿಯ ಪ್ರಾಣಿ ಸಂಕುಲಗಳನ್ನು ಹಾಗೂ ಬುಡಕಟ್ಟು ಸಮುದಾಯಗಳನ್ನು ಒಳಗೊಂಡಿದೆ.

ವಿಶ್ವದ ಮೇಲೈಯ ಕಾಲು ಭಾಗಕ್ಕಿಂತಲೂ ಹೆಚ್ಚು ಆವರಿಸಿಕೊಂಡಿದೆ. ಪ್ರಪಂಚದಲ್ಲಿರುವ ಜನಸಂಖ್ಯೆಯ ಶೇಕಡ 12 ರಷ್ಟು ಪರ್ವತಗಳನ್ನು ತಮ್ಮ ಮನೆಯೆಂದು ಕರೆದಿದ್ದಾರೆ. ಇಲ್ಲಿ ವಾಸಿಸುವ ಜನರಿಗೆ ಆಹಾರವನ್ನು ಪೂರೈಸುತ್ತದೆ. ಹಾಗೂ ಪರ್ವತ ಬಳಿ ವಾಸಿಸುವ ಜನರಿಗೆ ಸಿಹಿ ನೀರನ್ನು ಪೂರೈಸುತ್ತದೆ. ಎಷ್ಟೊಂದು ನದಿಗಳ ಉಗಮ ಸ್ಥಾನವು ಹಾಗೂ ಜಾಗತಿಕ ಹವಾಮಾನದ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ. ಇಷ್ಟೊಂದು ಮಾನವ ಹಾಗೂ ಪ್ರಾಣಿ ಸಂಕುಲಕ್ಕೆ ಅನುಕೂವಾಗುವ ಪರ್ವತಗಳನ್ನು ನಾವು ಅಲಕ್ಷ್ಯಸುತ್ತೇವೆ.

ಅತಿಯಾದ ಗಣಿಗಾರಿಕೆಯಿಂದ, ಅರಣ್ಯನಾಶದಿಂದ, ಕೃಷಿ ಭೂಮಿಯಿಂದ ಹಾಗೂ ಅಭಿವೃದ್ಧಿ ಎಂಬ ಹೆಸರಿನಲ್ಲಿ ಮೂಡುತ್ತಿರುವ ಚಟುವಟಿಕೆ ಗಳಿಂದ ಈ ಪರ್ವತಗಳು ಕರಗುತ್ತಿವೆ. ಈ ಪರ್ವತಗಳು ಬಗೆ ಬಗೆಯ ಜೀವ ತಾಣವಾಗಿರುವುದರಿಂದ ಅದನ್ನು ನಾವು ಕಡೆಗಣಿಸಬಾರದು ಈ ಅರಿವನ್ನು ಜನರಿಗೆ ಮೂಡಿಸಲು ಪರ್ವತ ದಿನವೆಂದು ಆಚರಿಸುತ್ತಾರೆ.

ಕಾನನ ಪತ್ರಿಕೆಯ ಇ-ಮೇಲ್ ವಿಳಾಸ: [email protected]
ಅಂಚೆ ವಿಳಾಸ:
Study House,
ಕಾಳೇಶ್ವರಿ ಗ್ರಾಮ,
ಆನೇಕಲ್ ತಾಲ್ಲೂಕು,
ಬೆಂಗಳೂರು ನಗರ ಜಿಲ್ಲೆ,
ಪಿನ್ ಕೋಡ್ :560083. ಗೆ ಕಳಿಸಿಕೊಡಬಹುದು.

Spread the love
error: Content is protected.