ಪ್ರಕೃತಿ ಬಿಂಬ
©ಹಯಾತ್ ಮೊಹಮ್ಮದ್ , ಜೀರುಂಡೆ
ಇತರ ಜೀರುಂಡೆಗಳಂತೆ, ಎಲೆ ಜೀರುಂಡೆಗಳು ಶೆಲ್ ತರಹದ ರೆಕ್ಕೆ ಕವರ್ಗಳನ್ನು ಹೊಂದಿರುತ್ತವೆ. ಎಲೆ ಜೀರುಂಡೆಗಳು ದೊಡ್ಡ ಮತ್ತು ವೈವಿಧ್ಯಮಯ ಜೀವಿಗಳು. ಅವು ಅಂಡಾಕಾರದಲ್ಲಿರುತ್ತವೆ. ಆಂಟೆನಾಗಳು ಸಾಮಾನ್ಯವಾಗಿ ದೇಹದ ಅರ್ಧಕ್ಕಿಂತ ಹೆಚ್ಚು ಉದ್ದವಿರುವುದಿಲ್ಲ. ಇವು ತಮ್ಮ ನಿರ್ದಿಷ್ಟ ಆಹಾರ ಸಸ್ಯಗಳು,ಎಲೆಗಳು, ಕಾಂಡಗಳು, ಹೂಗಳು ಅಥವಾ ಬೇರುಗಳ ನಡುವೆ ಕಂಡುಬರುತ್ತವೆ. ಇವು ಹಾರಬಲ್ಲವು. ಇವು ಗೋಡೆಯ ಬಿರುಕುಗಳ ಮೂಲಕ ಮನೆಗಳನ್ನು ಪ್ರವೇಶಿಸುತ್ತವೆ ಮತ್ತು ಚಳಿಗಾಲದಲ್ಲಿ ಮನೆಗೆ ಅತಿಥಿಗಳಾಗಿರುತ್ತವೆ. ಅನೇಕ ಪ್ರಭೇದಗಳು ಬೆಳೆ ಹಾಳು ಮಾಡಿ ಗಂಭೀರ ಆರ್ಥಿಕ ಹಾನಿಯನ್ನುಂಟುಮಾಡುತ್ತವೆ, ಆದರೆ ಕೆಲವು ಕಳೆಯನ್ನು ತಿಂದು ಬೆಳೆ ಉಳಿಸುವ ಜೀರುಂಡೆಗಳು ಇವೆ ಎಂಬುದನ್ನು ನೆನಪಿನಲ್ಲಿಡಿ.
© ಹಯಾತ್ ಮೊಹಮ್ಮದ್ , ದೋಮೆ ಗುಂಗರೆ
ಚಿರೋನೊಮೈಡೆ ಸೂಕ್ಷ್ಮವಾದ, ದೋಮೆ ಗುಂಗರೆ(gnat) ತರಹದ ನೊಣಗಳ ಕುಟುಂಬಕ್ಕೆ ಸೇರಿವೆ. ಇವುಗಳಲ್ಲಿ ಗಂಡು ಎದ್ದುಕಾಣುವ, ಸ್ಪರ್ಶತಂತುಗಳನ್ನು ಹೊಂದಿರುತ್ತವೆ. ಇವು ನೀರಿನ ಬಳಿ ಸಂಜೆ ಹೊತ್ತಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹಾರುತ್ತಿರುತ್ತವೆ. ಮೊಟ್ಟೆಗಳನ್ನು ಲೋಳೆಯಂತಹ ಜೆಲ್ಲಿಯ ರಿಬ್ಬನ್ನಲ್ಲಿ ಇಡುತ್ತವೆ. ಇವುಗಳ ಲಾರ್ವಾಗಳು ಸಾಮಾನ್ಯವಾಗಿ ನೀರಿನಲ್ಲಿಕಂಡುಬರುತ್ತವೆ. ಮಕರಂದ ಅಥವಾ ಪರಾಗವನ್ನು ತಿನ್ನುವ ಚಿರೋನೊಮೈಡ್ಗಳು ಪರಾಗಸ್ಪರ್ಶಕ್ಕೆ ಸಹಾಯ ಮಾಡುತ್ತವೆ. ತಮ್ಮ ಹಿಕ್ಕೆಗಳಿಂದ ಗೋಡೆಯಬಣ್ಣ, ಇಟ್ಟಿಗೆ ಮತ್ತು ಇತರ ಮೇಲ್ಮೈಗಳನ್ನು ಹಾನಿಗೊಳಿಸಬಹುದು. ಕೆಲವರಿಗೆ ಅಲರ್ಜಿಯು ಕೂಡ ಆಗುತ್ತದೆ. ಕೆಲವು ಸಂದರ್ಭದಲ್ಲಿ, ವಾಹನ ಚಲಾಯಿಸುವಾಗ ಅಡಚಣೆ ಉಂಟು ಮಾಡುತ್ತವೆ. ಅಪಾರದರ್ಶಕ ಲೇಪನವನ್ನು ರಚಿಸಿ ಚಾಲಕನ ದೃಷ್ಟಿಯನ್ನು ಅಸ್ಪಷ್ಟಗೊಳಿಸುತ್ತವೆ.
© ಹಯಾತ್ ಮೊಹಮ್ಮದ್ , ಮಿಡತೆ
ಇವು ಮಿಡತೆಗಳ ಗುಂಪಿಗೆ ಸೇರುತ್ತವೆ.ಇವು ಸಾಮಾನ್ಯವಾಗಿ ಆಫ್ರಿಕಾ, ಏಷ್ಯಾ ಮತ್ತು ಆಸ್ಟ್ರೇಲಿಯಾದಲ್ಲಿ ಕಂಡುಬರುತ್ತದೆ. ಇವುಗಳು ಆಹಾರಕ್ಕಾಗಿ ಸಸ್ಯವನ್ನು ಅವಲಂಬಿಸಿರುತ್ತವೆ. ಬೇರೆ ಮಿಡತೆಗಳಂತೆ ಗಂಡು, ಹೆಣ್ಣುಗಿಂತ ಚಿಕ್ಕದಾಗಿರುತ್ತದೆ. ಇವು ಉಭಯಚರಗಳು. ಇವು ತಮ್ಮ ಮಲವನ್ನು ದೊಡ್ಡದಾದ, ಉದ್ದವಾದ ಉಂಡೆಗಳ ರೂಪದಲ್ಲಿ ವಿಸರ್ಜಿಸುತ್ತವೆ. ಪ್ರತಿ ಉಂಡೆಯು ಹೊರ ಬರುತ್ತಿದ್ದಂತೆ,ಅದನ್ನು ತಮ್ಮ ಮೊಣಕಾಲನ್ನು ಬಳಸಿ ಒದೆಯುತ್ತವೆ. ಪರಾವಲಂಬಿಗಳು ಮತ್ತು ಪರಭಕ್ಷಕಗಳ ಗಮನವನ್ನು ತಪ್ಪಿಸುವ ತಂತ್ರ ಇದಾಗಿದೆ. ಇವು ಹಗಲಿನಲ್ಲಿ ಸಕ್ರಿಯವಾಗಿರುತ್ತವೆ ಮತ್ತು ಸಾಮಾನ್ಯವಾಗಿ ನದಿಗಳು ಅಥವಾ ತೊರೆಗಳ ಹತ್ತಿರದಲ್ಲಿರುವ ಹುಲ್ಲಿನಲ್ಲಿ ಕಂಡುಬರುತ್ತವೆ.
© ಹಯಾತ್ ಮೊಹಮ್ಮದ್ , ಕಣಜ
ಕ್ಯಾಂಪೊಪ್ಲೆಜಿನೇ ಕಣಜಗಳು ಸಣ್ಣ, ತೆಳ್ಳಗಿನ, ಕಪ್ಪು ಮತ್ತು ಕಂದು ಬಣ್ಣದ ಕೀಟಗಳಾಗಿವೆ. ಅನೇಕ ಕಣಜಗಳು ಪರಾವಲಂಬಿಗಳು. ಕೆಲವು ಮೊದಲು ಪರಾವಲಂಬಿಗಳಾಗಿರುತ್ತವೆ, ಆದರೆ ನಂತರ ಸಸ್ಯದ ಕೆಲವು ಭಾಗಗಳನ್ನು ತಿಂದು ಬದುಕುತ್ತವೆ. ಇತರ ಪ್ರಭೇದಗಳಲ್ಲಿ, ಮೊಟ್ಟೆಗಳನ್ನು ನೇರವಾಗಿ ಗಿಡದ ಮೇಲೆ ಇಟ್ಟು ಗಾಲ್ ಎಂಬುದನ್ನು ರೂಪಿಸುತ್ತವೆ, ಇದು ಲಾರ್ವಾಗಳನ್ನು ಪರಭಕ್ಷಕಗಳಿಂದ ರಕ್ಷಿಸುತ್ತದೆ. ಕೆಲವು ಪ್ರಭೇದಗಳಲ್ಲಿ, ಲಾರ್ವಾಗಳು ಸ್ವತಃ ಪರಭಕ್ಷಕಗಳಾಗಿರುತ್ತವೆ. ಕಣಜಗಳು ತಮ್ಮ ಮೊಟ್ಟೆಗಳನ್ನು ಇತರ ಕೀಟಗಳ ಮೊಟ್ಟೆಗಳ ಜೊತೆ ಇಡುತ್ತವೆ.ಆ ಮೊಟ್ಟೆಗಳು ಬೇರೆ ಕೀಟಗಳ ಮೊಟ್ಟೆಗಳ ಜೊತೆ ಬೆಳೆಯುತ್ತವೆ. ಲಾರ್ವಾ ಹಂತದಲ್ಲಿ ಆಹಾರವನ್ನು ನೀಡುವುದರ ಹೊರತಾಗಿ ಯಾವುದೇ ತಾಯಿಯ ಆರೈಕೆಯು ಮೊಟ್ಟೆಗಳಿಗೆ ಸಿಗುವುದಿಲ್ಲ. ಕಣಜಗಳು ಮಕರಂದವನ್ನು ಹೀರುತ್ತವೆ ಅದಕ್ಕೂ ಹೆಚ್ಚಾಗಿ ಕೀಟಗಳು ಅಥವಾ ಜೇಡಗಳನ್ನೂ ತಿಂದು ಬದುಕುತ್ತವೆ.
ಚಿತ್ರಗಳು: ಹಯಾತ್ ಮೊಹಮ್ಮದ್
ವಿವರಣೆ: ವಿವೇಕ್ ಜಿ.ಎಸ್
ಹಯಾತ್ ಮೊಹಮ್ಮದ್ ರವರು ಒಬ್ಬ ಐಟಿ ಉದ್ಯೋಗಿ . ಪ್ರಕೃತಿಯ ನಡುವೆ ತಮ್ಮ ಬಿಡುವಿನ ಸಮಯವನ್ನು ಕಳೆಯುತ್ತಾ, ಪ್ರಕೃತಿಯನ್ನೇ ತಮ್ಮ ವಿವೇಕವನ್ನು ವೃದ್ಧಿಸಿಕೊಳ್ಳುವ ಸಾಧನವನ್ನಾಗಿಸಿಕೊಂಡಿದ್ದಾರೆ. ಇವರು ಹುಟ್ಟಿ ಬೆಳೆದದ್ದು ಬೆಂಗಳೂರಿನಲ್ಲಿ. ಬೆಳೆಯುತ್ತಿರುವ ಈ ಮಹಾನಗರಿಯ ಉದ್ಯಾನಗಳಲ್ಲಿ ಹಾಗೂ ಖಾಲಿ ಜಾಗಗಳಲ್ಲಿ ಕಾಣಸಿಕ್ಕ ಚಿಟ್ಟೆಗಳು ಮತ್ತು ಕೀಟಗಳು ಇವರ ಆಸಕ್ತಿಯನ್ನು ಕೆರಳಿಸಿದವು. ಇವರು ಮ್ಯಾಕ್ರೋ ಫೋಟೋಗ್ರಫಿ ವಿಧಾನವನ್ನ ಬಳಸಿ ಕೀಟ ಲೋಕದ ವಿಸ್ಮಯಗಳನ್ನು ಸೆರೆಹಿಡಿದು ಮಾನವ ಜಗತ್ತಿಗೆ ತೋರಿಸುತ್ತಿದ್ದಾರೆ.