ನೀವೂ ಕಾನನಕ್ಕೆ ಬರೆಯಬಹುದು

      

ಅಲ್ಲಿದೇ ನಮ್ಮನೆ, ಇಲ್ಲಿ ಬಂದೆ ಸುಮ್ಮನೆ ಎನ್ನುವಂತೆ, ಹಲವು ಹಕ್ಕಿ ಪ್ರಭೇದಗಳು ಋತುಗಳಿಗೆ ಅನುಗುಣವಾಗಿ ತಮ್ಮ ಪ್ರದೇಶದಿಂದ ಬೇರೆ ಪ್ರದೇಶಗಳಿಗೆ ಪ್ರಯಾಣ ಬೆಳೆಸುತ್ತವೆ. ಇದನ್ನು ಹಕ್ಕಿ ವಲಸೆ ಎನ್ನಲಾಗುವುದು. ಆದರೆ ಹಕ್ಕಿಗಳು ಸುಮ್ಮನೆ ಬೇರೆ ಬೇರೆ ಪ್ರದೇಶಗಳಿಗೆ ಭೇಟಿ ನೀಡುವುದಿಲ್ಲ ಬಲವಾದ ಕಾರಣಗಳಿರುತ್ತವೆ. ಆಹಾರ ಲಭ್ಯತೆ, ವಾಸಸ್ಥಾನ, ಹವಮಾನದಲ್ಲಿನ ಬದಲಾವಣೆ ಮತ್ತು ಸಂತಾನ ವೃದ್ಧಿಗೆ ನೆರವಾಗುವಂತಿದ್ದರೆ ಮಾತ್ರ ಬೇರೆ ಬೇರೆ ಪ್ರದೇಶಗಳಿಗೆ ಪಯಣ ಮಾಡುತ್ತವೆ. ಈ ಹಕ್ಕಿಗಳ ವಲಸೆ ಕೇವಲ ಏಕ ಅಂಕಿಯ ದೂರಕ್ಕೆ ಸೀಮಿತವಾಗಿರದೆ, ಸಾವಿರಾರು ಕಿ.ಮೀ ದೂರದಷ್ಟಿದೆ. ಹಾಗಂತ ಎಲ್ಲ ಪಕ್ಷಿಗಳು ವಲಸೆ ಹೋಗುವುದಿಲ್ಲ, ವಲಸೆ ಹೋಗದ ಹಕ್ಕಿಗಳನ್ನು ನಿವಾಸಿ ಅಥವಾ ಒಂದೆ ಪ್ರದೇಶದಲ್ಲಿ ವಾಸಿಸುವ ಹಕ್ಕಿಗಳು ಎನ್ನಲಾಗಿದೆ.


 ಸಾಮಾನ್ಯವಾಗಿ ವಸಂತ ಋತುವಿನಲ್ಲಿ ಹಕ್ಕಿಗಳು ಸಮಶೀತೋಷ್ಣವಲಯದಿಂದ ಉತ್ತರದಿಕ್ಕಿನತ್ತ ಸಂತಾನಾಭಿವೃದ್ಧಿಗೆ ವಲಸೆ ಹೋಗುತ್ತವೆ.. ಶರತ್ಕಾಲದಲ್ಲಿ ಪುನಃ ಉಷ್ಣಾಂಶವುಳ್ಳ ದಕ್ಷಿಣ ದಿಕ್ಕಿನತ್ತ ವಾಪಸಾಗುತ್ತವೆ. ಉತ್ತರದ ದೀರ್ಘಾವಧಿಯ ಹಗಲು,  ಸಂತಾನಭಿವೃದ್ಧಿ ಮಾಡುತ್ತಿರುವ ಹಕ್ಕಿಗಳಿಗೆ ತಮ್ಮ ಮರಿಗಳಿಗೆ ಆಹಾರ ನೀಡಲು ಹೆಚ್ಚಿನ ಅವಕಾಶಗಳನ್ನು ಒದಗಿಸುತ್ತವೆ. ಶರತ್ಕಾಲದಲ್ಲಿ ಹಗಲಿನ ಅವಧಿ ಕಡಿಮೆಯಾಗುತ್ತಾ ಹೋಗಿ, ಋತು ಬದಲಾವಣೆಗಳ ಯಾವುದೇ ಪ್ರಭಾವಕ್ಕೆ ಒಳಗಾಗದೆ ಆಹಾರ ಪೂರೈಕೆಯಲ್ಲಿ ವ್ಯತ್ಯಾಸವಾದಾಗ ಬೆಚ್ಚನೆಯ ವಲಯಗಳಿಗೆ ಹಕ್ಕಿಗಳು ವಾಪಸಾಗುತ್ತವೆ. ವಲಸೆಯ ಸಮಯದಲ್ಲಿ ಬೇಟೆಯಾಗುವ ಸಾಧ್ಯತೆ ಹೆಚ್ಚಿದ್ದು, ವಲಸೆಯ ಪಕ್ಷಿಗಳ ಸಂಖ್ಯೆಯು ಕ್ಷೀಣಿಸಬಹುದು. ನಮಗೆ ತುಂಬಾ ಆಶ್ಚರ್ಯವನ್ನುಂಟುಮಾಡುವ ಸಂಗತಿಯೆಂದರೆ ಹೇಗೆ ಪಕ್ಷಿಗಳು ಯಾವ ತಂತ್ರಜ್ಞಾನವನ್ನು ಉಪಯೋಗಿಸದೇ, ಸಾವಿರಾರು ಕಿಮೀ. ದೂರದಲ್ಲಿರುವ ಸ್ಥಳಗಳನ್ನು ನಿಖರವಾಗಿ ತಲುಪುತ್ತವೆ? ಹಾಗೂ ಪಯಣ ಸಾಗುವ ದಾರಿಯನ್ನು ಹೇಗೆ ನೆನಪಿನಲ್ಲಿಟ್ಟಿಕೊಂಡಿರುತ್ತವೆ? ಹಾಗೂ ಅಷ್ಟು ದೂರ ಚಲಿಸಲು ಅವುಗಳ ದೇಹದ ರಚನೆ ಯಾವ ರೀತಿ ಮಾರ್ಪಾಡಾಗಿರುತ್ತವೆ?

ಈ ನವಂಬರ್ ತಿಂಗಳ ಸಂಚಿಕೆಗೆ ಜೀವ ವೈವಿದ್ಯತೆ  ಕುರಿತ, ಕಾಡು, ಕಾಡಿನ ಕತೆಗಳು, ಜೀವ ವಿಜ್ಞಾನ, ವನ್ಯ ವಿಜ್ಞಾನ, ಕೀಟಲೋಕ, ಕೃಷಿ, ವನ್ಯಜೀವಿ ಛಾಯಚಿತ್ರಗಳು, ಕವನ (ಪರಿಸರಕ್ಕೆ ಸಂಬಂಧಿಸಿದ), ವರ್ಣಚಿತ್ರಗಳು ಮತ್ತು ಪ್ರವಾಸ ಕತೆಗಳು, ಪರಿಸರಕ್ಕೆ ಸಂಬಂಧ ಪಟ್ಟ ಎಲ್ಲಾ ಲೇಖನಗಳನ್ನು ಆಹ್ವಾನಿಸಲಾಗಿದೆ. ಇ-ಮೇಲ್ ಅಥವಾ ಪೋಸ್ಟ್ ಮೂಲಕ ಕಳಿಸಬಹುದು.

ಕಾನನ ಪತ್ರಿಕೆಯ ಇ-ಮೇಲ್ ವಿಳಾಸ: [email protected]
ಅಂಚೆ ವಿಳಾಸ:
Study House,
ಕಾಳೇಶ್ವರಿ ಗ್ರಾಮ,
ಆನೇಕಲ್ ತಾಲ್ಲೂಕು,
ಬೆಂಗಳೂರು ನಗರ ಜಿಲ್ಲೆ,
ಪಿನ್ ಕೋಡ್ :560083. ಗೆ ಕಳಿಸಿಕೊಡಬಹುದು.

Print Friendly, PDF & Email
Spread the love
error: Content is protected.