ವನಬಂಧ-12

ವನಬಂಧ-12

ಎಡದಿಂದ ಬಲಕ್ಕೆ:

  1. ಚಂಡ ಪ್ರಚಂಡ ಅಲ್ಲದಿದ್ದರೂ ಸಹ ಈ ಗಾಳಿಗೆ ಭಯಾನಕ ಸ್ವರೂಪವಿರುವುದು ಸತ್ಯ (5) 
  2. ಹೆಚ್ಚಿನದಾಗಿ ಕತ್ತೆಯ ಹೆಸರಿನೊಡನೆ ಕಾಣುವ ಈ ಪ್ರಾಣಿ ವಿಚಿತ್ರವಾಗಿ ನಗುತ್ತದೆ (3)
  3. ಕಾಡಿನಲ್ಲಿ ಕಡ ಕೇಳುವವರು ಇವರನ್ನು ಸಂಪರ್ಕಿಸಿ (3)
  4. ಹೀಗೂ ಇದ್ದಿರಬಹುದೇ ಇಂಗಾಲದ ಒಂದು ರೂಪ (3)
  5. ಕೆಂಪಿರುವೆಯ ಕುಟುಂಬವೊಂದು ಇಲ್ಲಿ ಸುಮ್ಮನೆ ಸಾಗುತಿದೆ (3)
  6. ಈ ಕುರಿ ಕಾಡಿನಲ್ಲಿ ಮಾತ್ರ ಕಾಣಸಿಗುವುದು (4)
  7. ಕುದುರೆ ಗಾಡಿ ಹಾಗು ಎತ್ತಿನಗಾಡಿ ಓಡಿಸುವವರು ಬಳಸುವ ಈ ವಸ್ತು ಚಾವಡಿಯಲ್ಲೂ ಲಭ್ಯವಿದೆ (3) 
  8. ಕರಕುಶಲ ವಸ್ತುಗಳ ತಯಾರಿಕೆಯಲ್ಲಿ ಕೂಡ ಈ ತೆಂಗಿನ ಚಿಪ್ಪು ಬಳಕೆಯಾಗುತ್ತದೆ (3)

ಮೇಲಿನಿಂದ ಕೆಳಕ್ಕೆ:

  1. ಹೆಸರಾಂತ ಸಕಲೇಶಪುರ ಮಂಗಳೂರು ರೈಲು ಹಾದಿಯಲ್ಲಿ ದಟ್ಟ ಕಾಡಿನ ನಡುವೆ ಕಂಡುಬರುವ ಈ ನಿಲ್ದಾಣದ ಎಡಗಡೆ ಕಮರಿ ಮಾತ್ರ ಕಾಣುವುದಿಲ್ಲ (5)
  2. ಕಿರುಚಾಡದೇ ಬೇಟೆ ಆಡುವವನು (4)
  3. ಈ ಪಕ್ಷಿಯ ಹೆಸರಿನಲ್ಲಿ ಬಕಾಸುರ ಅಡಗಿದ್ದರೂ ಸಹ ವಾಸ್ತವದಲ್ಲಿ ಬಲು ಸಾಧು ಜೀವಿ (4)
  4. ಹೆಸರಿನಲ್ಲೇ ತನ್ನ ಇರುವಿಕೆಯನ್ನು ಸಾರುವ ಈ ಪುಟ್ಟ ಕೀಟ ಆಹಾರ ಸರಪಳಿಯ ಭಾಗವೂ ಹೌದು (3)
  5. ಕೆಂಪನೆಯ ಈ ಅಳಿಲು ಕಾಡಿನ ಮರ ಒಂದರಲ್ಲಿ ತಲೆಕೆಳಗಾಗಿದೆ. (4)
  6. ಕಾಡಿನಲ್ಲಿ ಯಾವಾಗಲೂ ಮೇಯುವ ಈ ಪ್ರಾಣಿ ಯಾರಿಗೂ ಕಾಟ ಕೊಡುವುದಿಲ್ಲ (2)
  7. ಈ ಹಕ್ಕಿಗೆ ಕಾಯುವುದು ಎಂದರೆ ಬಲು ಪ್ರೀತಿ (3)
  8. ಓಡುವ ವ್ಯವಹಾರ ಕುದುರಿಸುವುದು ಇವರಿಗೆ ಬಲು ಸುಲಭ (3)

ವನಬಂಧ – 10ರ ಉತ್ತರಗಳು
ಎಡದಿಂದ ಬಲಕ್ಕೆ

1. ಚಂಡಮಾರುತ 2. ಕಿರುಬ 3. ಕಡವೆ 4. ಇದ್ದಿಲು 5. ಕೆಂಜಿಗ 6. ಕಾಡುಕುರಿ 7. ಚಾವಟಿ 8. ಕರಟ

ಮೇಲಿನಿಂದ ಕೆಳಕ್ಕೆ

1. ಯಡಕುಮರಿ 2. ಕಿರಾತಕ 3. ಬಕಪಕ್ಷಿ 4. ಇರುವೆ 5. ಕೆಂದಳಿಲು 6. ಕಾಟಿ 7. ಚಾತಕ 8. ಕುದುರೆ

“ಈ ಮೇಲಿನ ವನಬಂಧವನ್ನು ಉತ್ತರಿಸಿ ನಮ್ಮ ವಿಳಾಸಕ್ಕೆ ಇದೇ ತಿಂಗಳ ದಿನಾಂಕ 30ರ ಒಳಗೆ ಕಳುಹಿಸಿ ಕೊಟ್ಟವರಿಗೆ ಪುಟ್ಟ ಬಹುಮಾನ ನೀಡಲಾಗುವುದು. (ವಿಳಾಸಕ್ಕಾಗಿ ನೀವೂ ಕಾನನಕ್ಕೆ ಬರೆಯಬಹುದು ಅಂಕಣವನ್ನು ಓದಿ)”

ಸುಬ್ಬು ಬಾದಲ್
         ಬೆಂಗಳೂರು ಜಿಲ್ಲೆ

Spread the love

Leave a Reply

Your email address will not be published. Required fields are marked *

error: Content is protected.