Author: ವೃಜುಲಾಲ್ ಎಂ ವಿ (ವೃಜು)
ಸಂಶೋಧಕ ಮತ್ತು ಪರಿಸರ ಶಿಕ್ಷಕ. ಇವರು ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಎನ್ವಿರಾನ್ಮೆಂಟ್ ಮ್ಯಾನೇಜ್ಮೆಂಟ್ ಮತ್ತು ನ್ಯಾಷನಲ್ ಜಿಯೋಗ್ರಾಫಿಕ್ ಸೊಸೈಟಿ ನಡೆಸುವ ಕನ್ಸರ್ವೇಷನ್ ಬೇಸಿಕ್ಸ್ ಎಂಬ ತರಬೇತಿಗಳನ್ನು ಪಡೆದಿದ್ದಾರೆ. ಪಕ್ಷಿಗಳು, ಸಿಹಿನೀರಿನ ಮೀನುಗಳು, ವನ್ಯಜೀವಿ ಸಂರಕ್ಷಣೆ, ಪರಿಸರ ವಿಜ್ಞಾನ ಇವರ ಪ್ರಮುಖ ಸಂಶೋಧನಾ ವಿಷಯಗಳಾಗಿವೆ. ಇವರು ಆನಂದವನದ ಜೀವವೈವಿಧ್ಯತೆ ಮತ್ತು ಶೋಭಾವನದ ಪಕ್ಷಿಗಳು ಎಂಬ ಎರಡು ಪುಸ್ತಕಗಳ ಸಹ ಲೇಖಕರಾಗಿದ್ದಾರೆ . ವೆಟ್ ಲ್ಯಾಂಡ್ ಬರ್ಡ್ಸ್ ಆಫ್ ಬೆಂಗಳೂರು ಎಂಬ ಪುಸ್ತಕವನ್ನು ಸಹ ಬರೆದಿದ್ದಾರೆ. 2018ರಲ್ಲಿ ನಡೆದ ಕೆರೆ ಸಮ್ಮೇಳನದಲ್ಲಿ ಇವರಿಗೆ ಸಹ್ಯಾದ್ರಿ ಇಕಾಲಜಿಸ್ಟ್ ಎಂಬ ಬಿರುದು ಕೊಟ್ಟಿರುತ್ತಾರೆ. ಅಲ್ಲದೆ ಹಲವು ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಮೀನುಗಳು ಮತ್ತು ಪಕ್ಷಿಗಳ ಬಗ್ಗೆ ಅರಿವು ಮೂಡಿಸಿರುತ್ತಾರೆ. ಹಾಗೂ ವಿದ್ಯಾರ್ಥಿಗಳು ಕೈಗೊಳ್ಳುವ ಹಲವು ಸಂಶೋಧನಾ ಯೋಜನೆಗಳಿಗೆ ಮಾರ್ಗದರ್ಶನ ಮಾಡಿದ್ದಾರೆ.