ಕಾನನ ತಂಡ
ಪ್ರಧಾನ ಸಂಪಾದಕರು
ಅಶ್ವಥ ಕೆ. ಎನ್.
ತೇಜಸ್ವಿಯವರ ಪುಸ್ತಕಗಳು ನನ್ನನ್ನು ಅದ್ಯಾವುದೋ ಹೊಸ ಜಗತ್ತಿಗೆ ಕರೆದೊಯ್ದು ಇಂದು ಕೂಡ ಅದರ ಗುಂಗಿಗುಂಗಿನಲ್ಲಿಯೇ ಇರುವಂತೆ ಮಾಡಿವೆ. ಪುಸ್ತಕ, ಬರವಣಿಗೆ, ಸಾಹಿತ್ಯ, ಕಾಡು ಮೇಡು ಸುತ್ತುವುದು ನನ್ನ ಹವ್ಯಾಸಗಳಾಗಿವೆ. ನಾನು ಹುಟ್ಟಿ ಬೆಳೆದದ್ದು ಕಾಡಂಚಿನ ಒಂದು ಪುಟ್ಟ ಹಳ್ಳಿಯಲ್ಲಿ. ಆ ಹಳ್ಳಿ ಕುರಿತ ಕೆಲ ಕಥೆಗಳನ್ನು ಕಾನನದಲ್ಲಿ ಬರೆದಿದ್ದೇನೆ, ಅಲ್ಲಿರುವ ಕೆಲ ಸಜೀವ-ನಿರ್ಜೀವ ಪಾತ್ರಗಳ ಜೊತೆ ನಾನು ಕೂಡ ಬದುಕುತ್ತಿದ್ದೇನೆ. ಕರ್ನಾಟಕದ ಹುಲ್ಲುಗಾವಲುಗಳ ಬಗ್ಗೆ ಸಂಶೋಧನೆ ಮಾಡಿ ಪಿ. ಹೆಚ್ ಡಿ ಪದವಿ ಪಡೆದಿರುವ ನಾನು ಸದ್ಯಕ್ಕೆ ಡಬ್ಲ್ಯೂ ಸಿ ಜಿ ತಂಡದ ಒಂದು ಪ್ರಾಜೆಕ್ಟ್ ನ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದೇನೆ.. ಡಬ್ಲ್ಯೂ.ಸಿ.ಜಿ, ಕಾನನ, ಸಂಶೋಧನೆ ಮತ್ತು ನನ್ನ ಬದುಕನ್ನು ಕೂಡ ನನ್ನ ಕನಸಿನಂತೆ ದೊಡ್ಡದಾಗಿ ಬೆಳೆಸಬೇಕು ಎಂಬ ಹಂಬಲ ಪದೆಪದೆ ನನ್ನನ್ನು ಇನ್ನೂ ಆಸಕ್ತಿದಾಯಕವಾಗಿ ಬದುಕಲು ಪ್ರೇರೇಪಿಸುತ್ತಿವೆ.

ಮುಖ್ಯ ಸಂಪಾದಕರು
ನಾಗೇಶ್ ಒ. ಎಸ್.
ವೃತ್ತಿಯಲ್ಲಿ ಗಣಿತ ಶಿಕ್ಷಕನಾಗಿರುವ ನಾನು ಹುಟ್ಟಿ ಬೆಳೆದದ್ದು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಮಧ್ಯ ಇರುವ ಒಂದು ಸಣ್ಣ ಹಳ್ಳಿಯಲ್ಲಿ. ನಮ್ಮ ಊರಿನ ಸುತ್ತ ಕಾಡಿರುವ ಕಾರಣವೋ ಏನೋ ಚಿಕ್ಕಂದಿನಿಂದಲೂ ಕಾಡು, ವನ್ಯಜೀವಿಗಳ ಬಗ್ಗೆ ವಿಶೇಷ ಆಸಕ್ತಿ . ನನ್ನೀ ಆಸಕ್ತಿಗೆ ಪುಷ್ಠಿ ನೀಡಿದ್ದು ಹಾಗೂ ಪರಿಸರದ ಬಗ್ಗೆ ನನಗೆ ತಿಳಿದದ್ದನ್ನು ಸುತ್ತಲಿನ ಹಳ್ಳಿ ಮಕ್ಕಳಿಗೆ ತಿಳಿಸಿಕೊಡಲು ಅವಕಾಶ ಕಲ್ಪಿಸಿಕೊಟ್ಟಿದ್ದು ಡಬ್ಲ್ಯೂ.ಸಿ.ಜಿ. ಕನ್ನಡ ಸಾಹಿತ್ಯಕ್ಕೆ ನನ್ನನ್ನು ಎಳೆತಂದದ್ದು ಕೆ. ಪಿ. ಪೂರ್ಣಚಂದ್ರ ತೇಜಸ್ವಿ ರವರ ಪುಸ್ತಕಗಳು. ಇವರ ಪುಸ್ತಕಗಳಿಂದ ಪ್ರಭಾವಿತನಾಗಿ ಕನ್ನಡ ಸಾಹಿತ್ಯದ ಕೆಲವು ಶ್ರೇಷ್ಠ ಸಾಹಿತಿಗಳ ಕೃತಿಗಳನ್ನು ಓದಿದ ಮೇಲೆ ಕನ್ನಡ ಭಾಷೆಗೆ, ಕನ್ನಡ ನಾಡಿಗೆ ನನ್ನ ಕೈಲಾದಷ್ಟು ಸೇವೆ ಸಲ್ಲಿಸಬೇಕೆಂಬುದು ನೆಲೆಯೂರಿತು. ಈ ಕನಸು ನನಸಾಗಲು ಅವಕಾಶ ಕಲ್ಪಿಸಿಕೊಟ್ಟಿದ್ದು ಕಾನನ ಇ-ಮಾಸ ಪತ್ರಿಕೆ. ಛಾಯಾಗ್ರಹಣ, ಪಕ್ಷಿ ವೀಕ್ಷಣೆ, ಚಾರಣ , ಪುಸ್ತಕ ಓದುವುದು ನನ್ನ ಕೆಲವು ಹವ್ಯಾಸಗಳು.

ಸಹ ಸಂಪಾದಕರು
ಧನರಾಜ್ ಎಂ.
ಪಕ್ಷಿವೀಕ್ಷಣೆ, ಪರ್ವತಾರೋಹಣ, ನಿಸರ್ಗದ ಸ್ಥಳಗಳಿಗೆ ದೂರದ ಪಯಣ, ಲೇಖನ ಹಾಗು ಕವನಗಳ ರಚನೆ ನನ್ನ ಕೆಲವು ಹವ್ಯಾಸಗಳು. ಇದರೊಟ್ಟಿಗೆ ಪುಸ್ತಕ ಓದುವುದುವಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದೇನೆ ಮತ್ತು ಹೊಸ ವಿಷಯಗಳನ್ನು ಕಲಿಯಲು ಆಸಕ್ತನಾಗಿದ್ದೇನೆ. ಡಬ್ಲ್ಯೂ.ಸಿ.ಜಿ ತಂಡದ ಖಜಾಂಜಿ ಆಗಿರುವ ನಾನು, ಪರಿಸರಕ್ಕೆ ಸಂಬಂಧಿಸಿದ ಹಲವಾರು ಕಾರ್ಯಕ್ರಮಗಳನ್ನು ಡಬ್ಲ್ಯೂ.ಸಿ.ಜಿ ಮುಖಾಂತರ ಆಯೋಜಿಸುತ್ತಿದ್ದೇನೆ ಹಾಗೂ ಸುಮಾರು 7 ವರ್ಷಗಳಿಂದ ಕಾನನ ಮಾಸ ಪತ್ರಿಕೆಯ ವಿನ್ಯಾಸವನ್ನು ಸಹ ಮಾಡುತ್ತಿದ್ದೇನೆ. ಪ್ರಸ್ತುತ ಬನ್ನೇರುಘಟ್ಟದಲ್ಲಿರುವ ಜಂಗಲ್ ಲಾಡ್ಜ್ ಅಂಡ್ ರೆಸಾರ್ಟ್ಸ್ ನ ಘಟಕದಲ್ಲಿ ಲೆಕ್ಕಿಗನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ.

ಮಹದೇವ ಕೆ. ಸಿ.
ಪ್ರಸ್ತುತ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಪಬ್ಲಿಕ್ ರಿಲೇಷನ್ಶಿಪ್ ಆಫೀಸರ್ (PRO) ಆಗಿ ಕಾರ್ಯನಿರ್ವಹಿಸುತ್ತಿದ್ದೇನೆ. ವನ್ಯಜೀವಿ ಹಾಗೂ ಪರಿಸರ ಸಂರಕ್ಷಣೆಯ ಗೀಳು ನನ್ನಲ್ಲಿ ಮೂಡಲು ಕಾಡಂಚಿನಲ್ಲೇ ನನ್ನೂರು ಕಾರಣ. ಕಳೆದ ಒಂದು ದಶಕಗಳಿಂದ ಕಾಡು-ಮೇಡು ಸುತ್ತುತ್ತಾ ಪಕ್ಷಿವೀಕ್ಷಣೆ ಮೊದಲಾದ ಚಟುವಟಿಕೆಗಳನ್ನ ಮಾಡುತ್ತಾ ಈ ಸುತ್ತಾಟದಲ್ಲಿ ಕಂಡ ಕೆಲ ಆಸಕ್ತಿದಾಯಕ ವಿಷಯಗಳನ್ನ ವೈಜ್ಙಾನಿಕವಾಗಿ ಲೇಖನಗಳ ರೂಪಕ್ಕೆ ತರಲು ಹುರಿದುಂಬಿಸಿದ್ದು ಪೂರ್ಣಚಂದ್ರ ತೇಜಸ್ವಿರವರ ಬರಹಗಳು. ಹೀಗಾಗಿ ಆಗಾಗ ನಾನು ನೋಡಿ ಕಲಿತು ಅಕ್ಷರಕ್ಕಿಳಿಸಿದ್ದನ್ನ ನಮ್ಮ ಕಾನನ ಮಾಸಿಕದಲ್ಲಿ ಪ್ರಕಟಿಸಿತ್ತಿದ್ದೇನೆ.

ಸಂಪಾದಕೀಯ ತಂಡ
ಮುರಳಿ ಎಸ್.
ಬನ್ನೇರುಘಟ್ಟ ಕಾಡಂಚಿನ ಹಳ್ಳಿಯಲ್ಲಿ ವಾಸ. ಕಂಪ್ಯೂಟರ್ ವಿಜ್ಞಾನದಲ್ಲಿ ಎಂಜಿನಿಯರಿಂಗ್ ಪದವಿ ಮತ್ತು ಪರಿಸರ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ. ಸಾಹಿತ್ಯದಲ್ಲಿ ಆಸಕ್ತಿ, ಮಕ್ಕಳಲ್ಲಿ ವಿಜ್ಞಾನ ಮತ್ತು ಪರಿಸರವನ್ನು ತುಂಬುವ ಹಂಬಲ, ಸಧ್ಯಕ್ಕೆ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಸುತ್ತಲ್ಲಿನ ಸರ್ಕಾರಿ ಶಾಲೆಗಳಲ್ಲಿ “ಪ್ರಾಜೆಕ್ಟ್ ಮಾಡೂ” ಯೋಜನೆಯ ಮುಖಾಂತರ ಮಕ್ಕಳಿಗೆ ವಿಜ್ಞಾನದ ಪ್ರಯೋಗಗಳು ಮಾಡಿಸುವುದರ ಜೊತೆಗೆ ಕರ್ನಾಟಕ ಅರಣ್ಯ ಇಲಾಖೆಯ ಮಕ್ಕಳ “ಚಿಣ್ಣರ ವನ ದರ್ಶನ” ಕಾರ್ಯಕ್ರಮದಂತಹ ಪರಿಸರದ ಅರಿವು ಮೂಡಿಸುವ ಕಾರ್ಯ ಮಾಡುತ್ತಿದ್ದು, ಪ್ರಸ್ತುತ ರಾಮಕೃಷ್ಣ ಮಿಷನ್, ಶಿವನಹಳ್ಳಿಯ ಶ್ರೀ ಶಾರದಾ ದೇವಿ ವಿದ್ಯಾ ಕೇಂದ್ರ ಶಾಲೆಯ ನಿರ್ವಾಹಕ (Admin).

ಡಾ. ಮಧುಸೂಧನ ಹೆಚ್. ಸಿ.
ಬೋಧನೆಯ ಜೊತೆ ಬರಹಗಾರನಾಗುವ ಹಂಬಲ..ಸಾಮಾಜಿಕ ಕಾಳಜಿಯ ಜೊತೆ ಸಾಧಕನಾಗುವ ಹಂಬಲ..ಪ್ರಕೃತಿಯ ಮಡಿಲಲ್ಲಿ ಕಳೆದುಹೋಗುವ ಹಂಬಲ. ತಾಂತ್ರಿಕ ಕಾಲೇಜಿನ ಉಪನ್ಯಾಸಕನಾಗಿರುವ ನನಗೆ ಕನ್ನಡ ಬರವಣಿಗೆ ಮೋಹ ಹೊಸತೇನಲ್ಲ..ಹವ್ಯಾಸಿ ಬರಹಗಾರ..ವೃತ್ತಿಯಲ್ಲಿ ಭೌತಶಾಸ್ತ್ರ ಉಪನ್ಯಾಸಕ ಹಾಗೂ ಸಂಶೋಧಕ.

ಮೌನೇಶ್ ಕನಸುಗಾರ
ನಾನು ಮೂಲತಃ ಕಲ್ಬುರ್ಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ವಸ್ತಾರಿಯವನು. ಸದ್ಯ ಬೆಂಗಳೂರಿನಲ್ಲಿ ವಾಸವಿದ್ದು ಗ್ರಾಫಿಕ್ ಡಿಸೈನರ್ ಆಗಿ ಕಾರ್ಯನಿರ್ವಹಿಸುತ್ತಿದ್ದೇನೆ. ವೃತ್ತಿಯ ಜೊತೆಯಲ್ಲೇ ಪ್ರವೃತ್ತಿಯಾದ ಚಾರಣ ಮತ್ತು ಪ್ರವಾಸಗಳನ್ನು ಕೈಗೊಳ್ಳುವ ಮೂಲಕ Incredible Karnataka Team ನಲ್ಲಿ coordinator ಆಗಿ ಕೆಲಸ ಮಾಡುತ್ತಿದ್ದೇನೆ. ಸಾಹಿತ್ಯ ಮತ್ತು ಫೋಟೋಗ್ರಫಿ ಕಡೆ ತುಂಬಾ ಒಲವಿದ್ದು ತಮ್ಮ ಚಾರಣದ ಅನುಭವವನ್ನು ಬರಹಗಳ ಮೂಲಕ ಡಿಜಿಟಲ್ ಮಿಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತೇನೆ.

ಹುಸೇನ್ ನೇಣಿಕೆ
ನಾನು ಮೂಲತಃ ಆಂಧ್ರಪ್ರದೇಶದ ಕರ್ನೂಲು ಜಿಲ್ಲೆಯವನಾಗಿದ್ದು, ಬೆಳೆದದ್ದು ಕರ್ನಾಟಕದಲ್ಲಿ. ನನ್ನ ಪ್ರಾಥಮಿಕ ಶಿಕ್ಷಣವನ್ನು ಬಳ್ಳಾರಿ ಜಿಲ್ಲೆಯಲ್ಲಿ ಮುಗಿಸಿ ಪ್ರೌಢ ಮತ್ತು ಪದವಿ ಶಿಕ್ಷಣವನ್ನು ಶ್ರೀ ಸಿದ್ದಗಂಗಾ ಮಠ, ತುಮಕೂರು ನಲ್ಲಿ ಮುಗಿಸಿರುತ್ತೇನೆ. ತುಮಕೂರು ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರ ವಿಭಾಗದ ಸ್ನಾತಕೋತ್ತರ ಪದವಿ ಪಡೆದು ಪ್ರಸ್ತುತ ರಾಮಕೃಷ್ಣ ಮಿಷನ್, ಶಿವನಹಳ್ಳಿ ಆಯೋಜಿತ “ಮಾಡೂ ಯೋಜನೆ” ಅಡಿಯಲ್ಲಿ ಸರ್ಕಾರಿ ಪ್ರೌಢಶಾಲಾ ಮಕ್ಕಳಿಗೆ ಚಟುವಟಿಕೆಯಾಧಾರಿತ ಬೋಧನೆ ಮಾಡುತ್ತಿದ್ದೇನೆ. ಚಿಕ್ಕಂದಿನಿಂದಲೂ ಕನ್ನಡದ ಬಗ್ಗೆ ಮೂಡಿದ ಒಲವು ಇಂದು ಕಾನನ ಇ – ಮಾಸಪತ್ರಿಕೆಯ ವರೆಗೂ ನನ್ನನ್ನು ಕರೆದುಕೊಂಡು ಬಂದಿದೆ. ಕಾಡು ಮೇಡು ಸುತ್ತಿಕೊಂಡು ಅಲ್ಲಿ ಕಂಡಂತಹ ಗಿಡ, ಮರ, ಹೂವು, ಬಳ್ಳಿ, ಪ್ರಾಣಿ, ಪಕ್ಷಿಗಳ ಜೊತೆಗೆ ಸುತ್ತಲಿನ ಪರಿಸರದ ಬಗ್ಗೆ ಕನ್ನಡದ ಕಿರು ಕವನಗಳನ್ನು ಬರೆಯುವ ಹವ್ಯಾಸ.
ಉದ್ಯೋಗ:- ಶಿಕ್ಷಕ, ಮಾಡೂ ಯೋಜನೆ.

ಆನಂದ್ ಎಸ್.
ಊರು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಅನೆ ಕಾರಿಡಾರ್ ಪಕ್ಕದ ಜೈಪುರದೊಡ್ಡಿ. ಕಂಪ್ಯೂಟರ್ ವಿಜ್ಞಾನದಲ್ಲಿ ಎಂಜಿನಿಯರಿಂಗ್ ಪದವಿ, ವೃತ್ತಿ ಸಾಫ್ಟ್ವೇರ್ ಇಂಜಿನಿಯರ್, ಪಕ್ಷಿ ವೀಕ್ಷಣೆ, ಟ್ರೆಕ್ಕಿಂಗ್ ಮತ್ತು ಪ್ರವಾಸ ಮುಂತಾದವುಗಳಲ್ಲಿ ಆಸಕ್ತಿ, ಡಬ್ಲ್ಯೂ.ಸಿ.ಜಿಯ ಕೆಲಸಗಳಲ್ಲಿ ಸ್ವಯಂ ಸೇವಕ ಮತ್ತು ಕಾನನ ಇ-ಮಾಸಿಕಕ್ಕೆ ತಾಂತ್ರಿಕವಾಗಿ ಸಹಾಯ ಮಾಡುತ್ತಿದ್ದೇನೆ.

ವಿಪಿನ್ ಬಾಳಿಗಾ ಬಿ. ಎಸ್.
ಪರಿಸರ ಹಾಗೂ ವನ್ಯಜೀವಿಗಳಲ್ಲಿ ಆಸಕ್ತಿಯುಳ್ಳ ಐ ಟಿ ವೃತ್ತಿಯವ ನಾನು. ಚಾರಣ , ಮಳೆಗಾಲ, ಕೀಟ , ಜೇಡ, ಹಾವು, ಉಭಯಚರಗಳು, ಒಳ್ಳೆಯ ಪುಸ್ತಕ ಓದುವುದು, ಪ್ರಯಾಣ, ವಿಧ-ವಿಧದ ಆಹಾರವೆಂದರೆ ಅಪಾರವಾದ ಪ್ರೀತಿ.
