ನೀವೂ ಕಾನನಕ್ಕೆ ಬರೆಯಬಹುದು
ಹಿಮಕರಡಿ ಎಂದಾಕ್ಷಣ ನಮ್ಮ ಮನಸ್ಸಿನಲ್ಲಿ ಮೂಡುವ ಚಿತ್ರಣ, ಹಿಮಕರಡಿ ತನ್ನ ಮರಿಯೊಂದಿಗೆ ಕರಗುತ್ತಿರುವ ಸಮುದ್ರ ಹಿಮದ ಮೇಲೆ ನೆಲೆಯನ್ನು ಹುಡುಕುತ್ತಾ ನಿಂತಿರುವ ದೃಶ್ಯ. ಹೌದು, ಜಾಗತಿಕ ತಾಪಮಾನ ಏರಿಕೆಯಿಂದ ಆರ್ಕ್ಟಿಕ್ ಪ್ರದೇಶದ ಸಮುದ್ರ ಹಿಮ ವೇಗವಾಗಿ ಕರಗುತ್ತಿದ್ದು, ಹಿಮಕರಡಿಗಳ ಆವಾಸಕ್ಕೆ ಗಂಭೀರ ಸಂಕಷ್ಟ ಎದುರಾಗುತ್ತಿದೆ. ಹಿಮಕರಡಿ ವಿಶ್ವದಲ್ಲೇ ಅತಿ ದೊಡ್ಡ ಗಾತ್ರದ ನೆಲವಾಸಿ ಮಾಂಸಾಹಾರಿ ಪ್ರಾಣಿಯಾಗಿದ್ದು, ಆರ್ಕ್ಟಿಕ್ ವೃತ್ತ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾಸಿಸುತ್ತದೆ. ಮಾನವ ವಾಸಸ್ಥಳಗಳ ಹಸ್ತಕ್ಷೇಪ ಕಡಿಮೆಯಿರುವುದರಿಂದ, ಇತರೆ ದೊಡ್ಡ ಮಾಂಸಾಹಾರಿ ಪ್ರಾಣಿಗಳಿಗಿಂತ ಹಿಮಕರಡಿಗಳು ತಮ್ಮ ಮೂಲ ವ್ಯಾಪ್ತಿಯ ಹೆಚ್ಚಿನ ಭಾಗವನ್ನು ಇನ್ನೂ ಉಳಿಸಿಕೊಂಡಿವೆ. ಹಿಮಕರಡಿಗಳು ವಾಸಿಸುವ ಪ್ರದೇಶಗಳು ಮಾನವನ ವಾಸಸ್ಥಾನಗಳಿಂದ ತುಂಬಾ ದೂರವಿದ್ದು, ಮಾನವನು ಹೊಂದುಕೊಳ್ಳಲಾಗದಂತಹ ಅತಿ ಕಠಿಣ ಹವಾಮಾನ ಹೊಂದಿರುವುದರಿಂದ ಅವುಗಳ ನಿಖರ ಸಂಖ್ಯೆಯನ್ನು ಲೆಕ್ಕ ಹಾಕುವುದು ಸುಲಭವಲ್ಲ. ಆದರೆ ವಿಜ್ಞಾನಿಗಳ ಅಂದಾಜಿನ ಪ್ರಕಾರ, ವಿಶ್ವಾದ್ಯಂತ ಸುಮಾರು 20,000 ರಿಂದ 25,000 ಹಿಮಕರಡಿಗಳಿವೆ. ಜಾಗತಿಕ ತಾಪಮಾನ ಏರಿಕೆಯಿಂದಾಗಿ ಕೆಲವು ಪ್ರದೇಶಗಳಲ್ಲಿ ಹಿಮಕರಡಿಗಳ ಸಂಖ್ಯೆ ನಿಧಾನವಾಗಿ ಕಡಿಮೆಯಾಗುತ್ತಿದೆ. ಈ ಸಮಸ್ಯೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಪ್ರತಿವರ್ಷ ಫೆಬ್ರವರಿ 27ರಂದು “ಅಂತರಾಷ್ಟ್ರೀಯ ಹಿಮಕರಡಿ ದಿನ” ಎಂದು ಆಚರಿಸಲಾಗುತ್ತದೆ. ಈ ದಿನ ಸರ್ಕಾರ ಹಾಗೂ ಸರ್ಕಾರೇತರ ಸಂಸ್ಥೆಗಳು ಹಿಮಕರಡಿಗಳನ್ನು ರಕ್ಷಿಸುವುದಕ್ಕಾಗಿ ವಿವಿಧ ಕಾರ್ಯಕ್ರಮಗಳನ್ನು ಮತ್ತು ಕ್ರಮಗಳನ್ನು ಕೈಗೊಳ್ಳುತ್ತವೆ.
ಈ ರೀತಿಯ ಪರಿಸರದ ಬಗೆಗಿನ ಮಾಹಿತಿಯನ್ನು ಒದಗಿಸಲು ಇರುವ ಕಾನನ ಇ-ಮಾಸಿಕಕ್ಕೆ ಮುಂದಿನ ತಿಂಗಳ ಸಂಚಿಕೆಗೆ ಲೇಖನಗಳನ್ನು ಆಹ್ವಾನಿಸಲಾಗಿದೆ. ಆಸಕ್ತರು ಪರಿಸರಕ್ಕೆ ಸಂಬಂಧಿಸಿದ ಕಥೆ, ಕವನ, ಛಾಯಾಚಿತ್ರ, ಚಿತ್ರಕಲೆ, ಪ್ರವಾಸ ಕಥನಗಳನ್ನು ಕಾನನ ಮಾಸಿಕದ ಇ-ಮೇಲ್ ವಿಳಾಸಕ್ಕೆ ಕಳುಹಿಸಬಹುದು.
ಕಾನನ ಪತ್ರಿಕೆಯ ಇ-ಮೇಲ್ ವಿಳಾಸ: kaanana.mag@gmail.com
ಅಂಚೆ ವಿಳಾಸ:
ಅಡವಿ ಫೀಲ್ಡ್ ಸ್ಟೇಷನ್,
ಒಂಟೆಮಾರನ ದೊಡ್ಡಿ ಗ್ರಾಮ ,
ರಾಗಿಹಳ್ಳಿ ಅಂಚೆ,
ಜಿಗಣಿ ಹೋಬಳಿ,
ಆನೇಕಲ್ ತಾಲ್ಲೂಕು ,
ಬೆಂಗಳೂರು ನಗರ ಜಿಲ್ಲೆ
ಪಿನ್ ಕೋಡ್: 560083. ಗೆ ಕಳಿಸಿಕೊಡಬಹುದು.
