ವನಬಂಧ-08

ವನಬಂಧ-08

ಎಡದಿಂದ ಬಲಕ್ಕೆ:

  1. ಕಟ್ಟೆಯ ಮೇಲೊಂದು ಪಾತರಗಿತ್ತಿ (2)
  2. ರಣಬಿಸಿಲಿನಲ್ಲಿ ಕಳೇಬರಗಳನ್ನು ಸೇವಿಸಿ ಬದುಕುವ ಪಕ್ಷಿ (4)
  3. ಓರೆಕೋರೆಯಾಗಿದ್ದರೂ ಸಿಹಿನೀರು ಒದಗಿಸುವ ನೈಸರ್ಗಿಕ ವ್ಯವಸ್ಥೆ (3)
  4. ಕರ್ನಾಟಕದಲ್ಲಿ ಹುಲಿಗಳಿಗೆ ಹೆಸರುವಾಸಿಯಾದ ಅತಿ ಜನಪ್ರಿಯ ವನ್ಯಜೀವಿಧಾಮ (3)
  5. ಹಾರುವ ಕತೆಯನ್ನು ಬಣ್ಣಿಸುವ ತವಕ ಈ ಕೀಟಕ್ಕೆ (2)
  6. ರಾಮನಾಮ ಧ್ಯಾನಿಸುವ ಈ ಬಿಳಿ ಮೈಯ ಬೇಟೆಗಾರ ಹಕ್ಕಿಗೆ ಬಲು ಚಂದದ ಕಣ್ಣುಗಳಿವೆ (4)
  7. ಕಪ್ಪು ಬಿಳುಪು ಮೈ ಬಣ್ಣದ ಈ ಪಕ್ಷಿಗೆ ಅಗಸನ ಹೆಸರಿನ ಹಂಗು ಯಾಕೋ ತಿಳಿಯದು (4)
  8. ಮುಳುಗಿ ಏಳುವ ಕಾಯಕವೆಂದರೆ ಈ ಹಕ್ಕಿಗೆ ಬಲು ಖುಷಿ (5)

ಮೇಲಿನಿಂದ ಕೆಳಕ್ಕೆ:

  1. ಮಂಗನಂತೂ ಖಂಡಿತಾ ಅಲ್ಲ ಆದರೆ ಬಲು ಚಂದದ ಹಾಗೂ ದೊಡ್ಡ ಗಾತ್ರದ ಹಕ್ಕಿ (3)
  2. ಚಿತ್ತಾರದಿಂದ ಕೂಡಿರುವ ಈ ಬೇಟೆಗಾರ ಪ್ರಾಣಿಯ ಅಂದಕ್ಕೇನೂ ಕೊರತೆ ಇಲ್ಲ. (3)
  3. ಪಕ್ಷಿಗಳಿಗಿರುವ ಹಲವಾರು ಹೆಸರುಗಳಲ್ಲಿ ಇದೂ ಒಂದು (2)
  4. ಕಳ್ಳತನವರಿಯದ ಸುಂದರವಾದ ಈ ಹಕ್ಕಿಗೆ ನೊಣಗಳು ಸಹ ಇಷ್ಟ (4)
  5. ಉರಗ ಕುಲದಲ್ಲೊಬ್ಬಳು ರಾಣಿ (4)
  6. ಕೈತೋಟದಲ್ಲಿ ಬೆಳೆಯುವ ಈ ಹೂವು ದಾಸರಿಗೆಲ್ಲ ಬಲು ಪ್ರೀತಿ (4)
  7. ನಗರದಿಂದ ಕಣ್ಮರೆಯಾದ ಈ ಪುಟಾಣಿ ಹಕ್ಕಿ ಈಗ ಮರದಲ್ಲಿ ವಾಸಿಸುತ್ತಿದೆ (4)
  8. ಕಪಿಯನ್ನು ತನ್ನ ಹೆಸರಿನಲ್ಲಿ ಅಡಗಿಸಿಕೊಂಡ ಈ ನದಿ ಕನ್ನಡ ನಾಡಿನಲ್ಲಿ ಹಲವು ಜೀವಗಳನ್ನು ಪೋಷಿಸುತ್ತಿದೆ (3)

ವನಬಂಧ – 07ರ ಉತ್ತರಗಳು
ಎಡದಿಂದ ಬಲಕ್ಕೆ

1. ಅನಾನಸು 4. ಗಂಜಲ 5. ತೇಗಗಂಧ 7. ಲಬಿ 8. ಜಟಾಯು 12. ಕ್ರಿಸ್ಮಸ್ 13. ದಿಗಂತ 15. ಅಂಟ್ ವಾಳ

ಮೇಲಿನಿಂದ ಕೆಳಕ್ಕೆ

2. ಸುಗಂಧರಾಜ 3. ಗುಲಾಬಿ 6. ಗದಗ 9. ಯುಗಾದಿ 10. ರಜತ 11. ಪ್ಲಾಸ್ಮ 12. ಕ್ರಿಕೆಟ್ 14. ಗಂಧಕ.

ವನಬಂಧ – 07 ಅಂಕಣಕ್ಕೆ ಸರಿಯಾದ ಉತ್ತರ ಕೊಟ್ಟ ಎಲ್ಲರಿಗೂ ಧನ್ಯವಾದಗಳು

  1. ಸ್ವೀಕೃತಾ ಹೆಚ್ ಕೆ(ಶಿವಮೊಗ್ಗ ಜಿಲ್ಲೆ)
  2. ಸೌಮ್ಯ (ದಕ್ಷಿಣ ಕನ್ನಡ ಜಿಲ್ಲೆ)

“ಈ ಮೇಲಿನ ವನಬಂಧವನ್ನು ಉತ್ತರಿಸಿ ನಮ್ಮ ವಿಳಾಸಕ್ಕೆ ಇದೇ ತಿಂಗಳ ದಿನಾಂಕ 20ರ ಒಳಗೆ ಕಳುಹಿಸಿ ಕೊಟ್ಟವರಿಗೆ ಪುಟ್ಟ ಬಹುಮಾನ ನೀಡಲಾಗುವುದು. (ವಿಳಾಸಕ್ಕಾಗಿ ನೀವೂ ಕಾನನಕ್ಕೆ ಬರೆಯಬಹುದು ಅಂಕಣವನ್ನು ಓದಿ)”

ಸುಬ್ಬು ಬಾದಲ್
         ಬೆಂಗಳೂರು ಜಿಲ್ಲೆ

Spread the love
error: Content is protected.