ನೀವೂ ಕಾನನಕ್ಕೆ ಬರೆಯಬಹುದು
ಮುಂಜಾನೆ ವೇಳೆಯಲ್ಲಿ ಚಿಲಿಪಿಲಿ ಕಲರವ ಕೇಳುವುದು ಎಷ್ಟು ಇಂಪು. ಹಾರುವ ಹಕ್ಕಿಯನ್ನು ಕಂಡು ನಾನು ಕೂಡ ಗಗನದಾಚೆ ಹಾರಬೇಕು ಎಂದೆನಿಸಿದ ಸಂದರ್ಭವೂ ಉಂಟು. ಭೂಮಿ ಮೇಲೆ ಸುಮಾರು 18000 ಕ್ಕೂ ಹೆಚ್ಚು ಪಕ್ಷಿ ಪ್ರಭೇದಗಳಿವೆ. ಪಕ್ಷಿಗಳು ಪರಾಗಸ್ಪರ್ಶ ಕ್ರಿಯೆಗೆ ಸಹಾಯ ಮಾಡುತ್ತವೆ. ಅವು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಹಾರುವಾಗ ಬೀಜಗಳು ಮತ್ತು ಪೋಷಕಾಂಶಗಳನ್ನು ವರ್ಗಾಯಿಸುತ್ತವೆ. ಕೃಷಿ ಉತ್ಪಾದನೆಯಲ್ಲೂ ಇವು ಮಹತ್ವದ ಪಾತ್ರವಹಿಸುತ್ತವೆ ಬೆಳೆಗಳಿಗೆ ಉಪದ್ರವ ನೀಡುವ ಕೀಟಗಳನ್ನು ತಿಂದು ಅವುಗಳ ಸಂಖ್ಯೆಗಳನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಕಾನೂನುಬಾಹಿರ ಸಾಕುಪ್ರಾಣಿ ವ್ಯಾಪಾರ, ವಿವಿಧ ರೋಗಗಳು ಮತ್ತು ವಾಸಸ್ಥಾನಗಳ ನಾಶವಾಗುತ್ತಿರುವುದು ಅನೇಕ ಪಕ್ಷಿ ಪ್ರಭೇದಗಳನ್ನು ನಾಶದ ಅಂಚಿಗೆ ತಳ್ಳುತ್ತಿದೆ. ಪಕ್ಷಿಗಳ ಅಗತ್ಯತೆಗಳ ಬಗ್ಗೆ ಸಾರ್ವಜನಿಕ ಜಾಗೃತಿ ಮೂಡಿಸಲು ಪ್ರತಿ ಜನವರಿ 5 ರಂದು ರಾಷ್ಟ್ರೀಯ ಪಕ್ಷಿ ದಿನವೆಂದು ಆಚರಿಸಲಾಗುತ್ತದೆ.
ಈ ರೀತಿಯ ಪರಿಸರದ ಬಗೆಗಿನ ಮಾಹಿತಿಯನ್ನು ಒದಗಿಸಲು ಇರುವ ಕಾನನ ಇ-ಮಾಸಿಕಕ್ಕೆ ಮುಂದಿನ ತಿಂಗಳ ಸಂಚಿಕೆಗೆ ಲೇಖನಗಳನ್ನು ಆಹ್ವಾನಿಸಲಾಗಿದೆ. ಆಸಕ್ತರು ಪರಿಸರಕ್ಕೆ ಸಂಬಂಧಿಸಿದ ಕಥೆ, ಕವನ, ಛಾಯಾಚಿತ್ರ, ಚಿತ್ರಕಲೆ, ಪ್ರವಾಸ ಕಥನಗಳನ್ನು ಕಾನನ ಮಾಸಿಕದ ಇ-ಮೇಲ್ ವಿಳಾಸಕ್ಕೆ ಕಳುಹಿಸಬಹುದು.
ಕಾನನ ಪತ್ರಿಕೆಯ ಇ-ಮೇಲ್ ವಿಳಾಸ: kaanana.mag@gmail.com
ಅಂಚೆ ವಿಳಾಸ:
ಅಡವಿ ಫೀಲ್ಡ್ ಸ್ಟೇಷನ್,
ಒಂಟೆಮಾರನ ದೊಡ್ಡಿ ಗ್ರಾಮ ,
ರಾಗಿಹಳ್ಳಿ ಅಂಚೆ,
ಜಿಗಣಿ ಹೋಬಳಿ,
ಆನೇಕಲ್ ತಾಲ್ಲೂಕು ,
ಬೆಂಗಳೂರು ನಗರ ಜಿಲ್ಲೆ
ಪಿನ್ ಕೋಡ್: 560083. ಗೆ ಕಳಿಸಿಕೊಡಬಹುದು.
