ವನಬಂಧ-07
ಎಡದಿಂದ ಬಲಕ್ಕೆ:
1. ಮೊದಲು ಈ ಒಗಟು ಬಿಡಿಸಿ: ಗಿಡದ ಮೇಲೆ ಹಣ್ಣು, ಹಣ್ಣಿನ ಮೇಲೆ ಗಿಡ- (4)
4. ಗಂಗಾಜಲವಂತೂ ಅಲ್ಲ, ಕೇವಲ ಒಂದು ಪ್ರಾಣಿಯ ಮೂತ್ರ ಮಾತ್ರ, ಆದರೆ ಬಹಳ ಪವಿತ್ರ – (3)
5. ಕನ್ನಡದ ಕವಿ ನಿಸಾರ್ ರವರಿಗೆ ನಿತ್ಯ ಉತ್ಸವ ಕಾಣಿಸಿದ್ದು ಈ ತರುಗಳಲ್ಲಿ- (4)
7. ಇಲಿ ಹಾವಿನ ಬಲಿಯಾಗಲಿಲ್ಲ ಏಕೆಂದರೆ ಅದು ಹೊಕ್ಕಿದ್ದು ತಿರುಗಿರುವ ಈ ಗೂಡನ್ನು- (2)
8. ರಾಮನಿಗೆ ಪತ್ನಿಯ ಅಪಹರಣದ ಬಗ್ಗೆ ತಿಳಿಸಿ, ತನ್ನಾಯುಷ್ಯ ಮುಗಿಸಿದ ಖಗಕ್ಕಿಂದು ದೇವರ …..ನಾಡಿನಲ್ಲಿ ವಿಶ್ವದ ಅತಿ ದೊಡ್ಡ ಪ್ರತಿಮೆ ಇದೆ- (3)
12. ಈ ಹಬ್ಬದಂದು ಮಿಸ್ ಆಗುವುದಿಲ್ಲ: ಚಳಿ, ರಜೆ, ಕೇಕ್, ನಕ್ಷತ್ರ, ಉಡುಗೊರೆ- (3)
13. ದಿವಂಗತರ ಪ್ರಾಣ ಪಕ್ಷಿ ಹಾರುವ ಆಕಾಶವಿದಾಗಿದ್ದರೆ – (3)
15. ಮರದಲ್ಲಿ ಹುಟ್ಟುತ್ತದೆ ಮೂರು ಕಾಯಿಯ ನಂಟು, ಅದರ ಮೈಯೆಲ್ಲಾ ಅಂಟು, ಇದನ್ನು ……ಚಿನ್ನ, ಬಟ್ಟೆ ತೊಳೆಯಲು ಬಳಸುವುದುಂಟು- (4)
ಮೇಲಿನಿಂದ ಕೆಳಕ್ಕೆ:
2. ಹೂಗಳ ರಾಜ, ಪರಿಮಳಕ್ಕಿಲ್ಲ ರಜಾ – (5)
3. ರಾಜನ ಗುಲಾಮ ಲಾಬಿ ಮಾಡಿ ಪಡೆದುಕೊಂಡದ್ದು ಈ ಮುಳ್ಳಿನ ಗಿಡದ ತೋಟ – (3)
6. ಮೇಲಿನಿಂದ ಕೆಳಗೆ, ಕೆಳಗಿನಿಂದ ಮೇಲೆ ಹೇಗೆ ಓದಿದರೂ ಇದೊಂದು, ಬೇಸಿಗೆಯಲ್ಲಿ …..ಧಗಧಗಿಸುವ ಕರುನಾಡ ಜಿಲ್ಲೆಯ ನಾಮಧೇಯ- (3)
9. ಚೈತ್ರ ಮಾಸದ ಆದಿಯಲ್ಲಿ ಸಿಹಿ- ಕಹಿ ಒಟ್ಟಾಗಿ ಬರಲಿದೆ – (3)
10. ಬೆಲೆ ಏರುತ್ತಿರುವುದರಿಂದ ಜತನವಾಗಿರಿಸಲೇಬೇಕು, ರಜೆಯಲ್ಲಿ ಖರೀದಿಸಿದ ಈ ಬೆಳ್ಳಿಯನ್ನು-(3)
11. ಇದನ್ನು ಜೀವಶಾಸ್ತ್ರಜ್ಞರು ರಕ್ತದೊಂದು ಭಾಗವೆಂದರೆ, ಅದನ್ನೇ ಭೌತಜ್ಞರು ವಸ್ತುವಿನ ಒಂದು ……ಸ್ಥಿತಿ ಎನ್ನುತ್ತಾರೆ! ಹಾಗಾದರೆ ನೀವೇನೆನ್ನುವಿರಿ? – (2)
12. ಇದು ಕಿರಿಕಿರಿ ಮಾಡುವ ಕೀಟವೆಂದರೂ ಕರೆಕ್ಟ್! ಹಿರಿಹಿರಿದಾಡುವ ಚೆಂಡುದಾಂಡಿನ ……ಆಟವೆಂದರೂ ಕರೆಕ್ಟ್- (3)
14. ಕದನದ ಅಂತ್ಯದಲ್ಲಿ ಬಿದ್ದಿದ್ದ ಗಂಧ ಸೂಸುವ ಇದೊಂದು ಹಳದಿ ಲೋಹ- (3).
ವನಬಂಧ – 06ರ ಉತ್ತರಗಳು
ಎಡದಿಂದ ಬಲಕ್ಕೆ
2. ಗುಹೆ 5. ಮಕರಂದ 7. ಸೆಣಬು 9. ರೋರರ್ 11. ಕೀರ 12. ತಾರಸಿ ತೋಟ 15. ಲಾಮ 16. ಲಿಪಿ 17. ರಸಬಾಳೆ 18. ತುಡುವೆ.
ಮೇಲಿನಿಂದ ಕೆಳಕ್ಕೆ
1. ಮಾನಸ ಸರೋವರ 3. ಹೆಗ್ಗಣ 4. ಆಕಳು 6. ಧನ್ವಂತರಿ 8. ಬುದ್ಧ 10. ಧರಣಿಯೆಲ್ಲ ಬೆಳೆ 11. ಕೀಟ 13. ಬೆಂಕಿ ಇರುವೆ 14. ಜಾಲಿ ಮರ 15. ಲಾಸೋನ್.
ವನಬಂಧ – 06 ಅಂಕಣಕ್ಕೆ ಸರಿಯಾದ ಉತ್ತರ ಕೊಟ್ಟ ಎಲ್ಲರಿಗೂ ಧನ್ಯವಾದಗಳು
- ಸ್ವೀಕೃತಾ ಹೆಚ್ ಕೆ(ಶಿವಮೊಗ್ಗ ಜಿಲ್ಲೆ)
- ಸೌಮ್ಯ (ದಕ್ಷಿಣ ಕನ್ನಡ ಜಿಲ್ಲೆ)
“ಈ ಮೇಲಿನ ವನಬಂಧವನ್ನು ಉತ್ತರಿಸಿ ನಮ್ಮ ವಿಳಾಸಕ್ಕೆ ಇದೇ ತಿಂಗಳ ದಿನಾಂಕ 20ರ ಒಳಗೆ ಕಳುಹಿಸಿ ಕೊಟ್ಟವರಿಗೆ ಪುಟ್ಟ ಬಹುಮಾನ ನೀಡಲಾಗುವುದು. (ವಿಳಾಸಕ್ಕಾಗಿ ನೀವೂ ಕಾನನಕ್ಕೆ ಬರೆಯಬಹುದು ಅಂಕಣವನ್ನು ಓದಿ)”
– ಅಕ್ಷತ ಹೆಚ್. ಕೆ.
ಚಿಕ್ಕಮಗಳೂರು ಜಿಲ್ಲೆ