ವನಬಂಧ-06

ವನಬಂಧ-06

ಎಡದಿಂದ ಬಲಕ್ಕೆ:

2. ಆದಿಮಾನವನು ಜೀವಿಸುತ್ತಿದ್ದ ನೈಸರ್ಗಿಕ ಹವಾನಿಯಂತ್ರಣವಿದ್ದ ಕಲ್ಲಿನ ಮನೆ- (2)

5. ಹೂಗಳು ಸ್ರವಿಸುವ ಈ ಸಿಹಿ ರಸದ ರುಚಿ ನೀರಲ್ಲಿರುವ ಮಕರಕ್ಕೇನು ಗೊತ್ತು?- (4)

7. ನನ್ನ ಚೀಲದೊಳಗಡೆ ಧಾನ್ಯಗಳನ್ನು ತುಂಬಿಸಿ ಮನೆ ಒಳಗೆ ಇಡುವರು, ಅದೇ ಚೀಲ ಹರಿದರೆ ಮನೆ ಬಾಗಿಲಿಗೆ ಕಾಲೊರಿಸಲು ಹಾಕುವರು! ಪ್ಲಾಸ್ಟಿಕ್ ನ ಪರ್ಯಾಯ, ಪರಿಸರಸ್ನೇಹಿ ನಾನ್ಯಾರು?- (3)

9. ಶರಾವತಿ ನದಿಯು 830 ಅಡಿಗಳಿಂದ ಧುಮ್ಮಿಕ್ಕಿ ‘ಗೇರುಸೊಪ್ಪ ಜಲಪಾತ’ವಾಗುವಾಗ ಸೃಷ್ಟಿಯಾಗುವ ನಾಲ್ಕು ಭಾಗಗಳಲ್ಲಿ ಒಂದಿದು!- (3)

11. ಫಕೀರ ನೋಡಿದ ಎರಡಕ್ಷರದ ಮುಂಗುಸಿ- (2)

12. ಮಣ್ಣೇ ಕಾಣದ ನಗರದ ಕಾಂಕ್ರೀಟ್ ಕಾಡುಗಳ ಮೇಲೆ ಕೊನೇಪಕ್ಷ ಈ ರೀತಿಯಾದರೂ ಹೂದೋಟವನ್ನು ಬೆಳೆಸಬಹುದು- (5)

15. ಗುಲಾಮ ಕಂಡ ಒಂಟೆ ರೀತಿಯ ಪ್ರಾಣಿ- (2)

16. ಮಂಗಳೂರಿನವರ ಹುಲಿಯು ತಿರುಗಿ ನಿಂತಾಗ ಕಂಡ ವಿವಿಧ ಭಾಷೆಯ ಅಕ್ಷರ- (2)

17. ಭೌಗೋಳಿಕ ಸೂಚಕವಿರುವ ರಸಭರಿತವಾದ ಈ ಬಾಳೆಹಣ್ಣು ನಮ್ಮದೇ ಮೈಸೂರಿನ ನಂಜನಗೂಡಿನದ್ದು- (4)

18. ಪರಾಗ ಸ್ಪರ್ಶದಲ್ಲಿ ತೊಡಗಿರುವ ಜೇನಿನ ಒಂದು ಪ್ರಭೇದ- (3).

ಮೇಲಿನಿಂದ ಕೆಳಕ್ಕೆ:

1. ಮಾನಸ ಸ್ನೇಹಿತರೆೊಂದಿಗೆ ಇತ್ತೀಚೆಗೆ ಟಿಬೆಟ್ನಲ್ಲಿ ಭೇಟಿ ನೀಡಿದ ಸಿಹಿ ನೀರಿನ ಸರೋವರ- (7)

3. ಕಣದಲ್ಲಿ ಓಡಾಡುತ್ತಿರುವ ದೊಡ್ಡ ಇಲಿ- (3)
4. ಆಳು ಗುಡ್ಡದಲ್ಲಿ ಮೇಯಿಸುತ್ತಿದ್ದ ಹಾಲು ಕೊಡುವ ಪ್ರಾಣಿ- (3)

6. ‘ಪಾತರಗಿತ್ತಿ ಪಕ್ಕ ನೋಡಿದೇನ ಅಕ್ಕ’ ಎಂದು ಹಾಡಿದವನ ತಾಯಿ ಅಂಬಿಕ- (4)

8.  ಬೋಧಿವೃಕ್ಷದ ಕೆಳಗೆ ಜ್ಞಾನೋದಯ ಪಡೆದ ಮಹಾಪುರುಷ – (2)

10. ಭರಣಿ ಮಳೆ, …! ಗಾದೆ ಪೂರ್ಣಗೊಳಿಸಿ.- (7)

11. ಕಿರೀಟದಲ್ಲಿ ಕುಳಿತಿರುವ ಸಣ್ಣ ಹುಳ- (2)

13. ಚಿಕ್ಕದಾಗಿರುವೆ, ಕೆಂಪಗಿರುವೆ, ಗೂಡಿನಲ್ಲಿ ನನ್ನವರೊಂದಿಗೆ ಬದುಕುವೆ, ಗೂಡು ಕೆಡವಲು ಬಂದರೆ ಸರಿಯಾಗಿ ಕಚ್ಚುವೆ, ನಾನ್ಯಾರು?- (5)

14. ಈ ಮರವು ನೆರಳಲ್ಲ ಧರೆಯಲ್ಲಿ ಎಂದು ಪುರಂದರ ದಾಸರು ಹೇಳಿದ್ದಾರೆ-(4)

15. ‘ವಚನ’ ಗಾರರು? ಕುಡಿಯುವ ನೀರು ತಂಪು ಮತ್ತು ಸುಗಂಧಭರಿತವಾಗಿರಲು ಕಾರಣ, ಈ ಬೇರು-(3).

ವನಬಂಧ – 05ರ ಉತ್ತರಗಳು
ಎಡದಿಂದ ಬಲಕ್ಕೆ

1. ಕಡಕ್ ನಾಥ್ 4. ಬ್ರಹ್ಮಪುತ್ರ 7. ಪಿಕ 8. ನರಿ 9. ಗೊರವಂಕ 10. ಮೃಗಾಲಯ 12. ವಿಭೂತಿ 13. ಮುಗಿಲು 14. ಗದ್ದೆ 15. ಟಗರು.


ಮೇಲಿನಿಂದ ಕೆಳಕ್ಕೆ

1. ಕಷಾಯ 2. ನಾರು 3. ಪತ್ರಹರಿತ್ತು 4. ಬ್ರಹ್ಮಕಮಲ 5. ಅಭ್ರಕ 6. ಮರಕೋತಿ ಆಟ 10. ಮೃದಂಗ 11. ಯಮುನಾ 12. ವಿಷ.

ವನಬಂಧ – 04 ಅಂಕಣಕ್ಕೆ ಸರಿಯಾದ ಉತ್ತರ ಕೊಟ್ಟ ಎಲ್ಲರಿಗೂ ಧನ್ಯವಾದಗಳು

  1. ಲಿಖಿತ್ ಜಿ. ಅರ್ (ಚಿಕ್ಕಮಗಳೂರು)
  2. ಸ್ವೀಕೃತಾ (ಶಿವಮೊಗ್ಗ ಜಿಲ್ಲೆ)
  3. ಸೌಮ್ಯ (ದಕ್ಷಿಣ ಕನ್ನಡ ಜಿಲ್ಲೆ)

“ಈ ಮೇಲಿನ ವನಬಂಧವನ್ನು ಉತ್ತರಿಸಿ ನಮ್ಮ ವಿಳಾಸಕ್ಕೆ ಇದೇ ತಿಂಗಳ ದಿನಾಂಕ 20ರ ಒಳಗೆ ಕಳುಹಿಸಿ ಕೊಟ್ಟವರಿಗೆ ಪುಟ್ಟ ಬಹುಮಾನ ನೀಡಲಾಗುವುದು. (ವಿಳಾಸಕ್ಕಾಗಿ ನೀವೂ ಕಾನನಕ್ಕೆ ಬರೆಯಬಹುದು ಅಂಕಣವನ್ನು ಓದಿ)”

ಅಕ್ಷತ ಹೆಚ್. ಕೆ.
          ಚಿಕ್ಕಮಗಳೂರು ಜಿಲ್ಲೆ

Spread the love

Leave a Reply

Your email address will not be published. Required fields are marked *

error: Content is protected.