ವನಬಂಧ-05

ವನಬಂಧ-05

ಎಡದಿಂದ ಬಲಕ್ಕೆ:

1 ಮಧ್ಯಪ್ರದೇಶದ ಕೋಳಿ ತಳಿಯೊಂದು ಕಡಕ್ ಕಪ್ಪು ಗರಿ, ಚರ್ಮ ಮತ್ತು ಮಾಂಸಕ್ಕೆ ಹೆಸರುವಾಸಿ – (5)

4. ತ್ರಿಮೂರ್ತಿಗಳಲ್ಲಿ ಒಬ್ಬನ ಪುತ್ರ ನದಿಯಾಗಿ ಹರಿದರೆ! – (4)

7. ಬಲದಿಂದ ಎಡಕ್ಕೆ ಓದಿದರೆ ಕೋತಿ! ಎಡದಿಂದ ಬಲಕ್ಕೆ ಓದಿದರೆ ವಸಂತದೂತ ಮಧುರ ಸ್ವರವುಳ್ಳ ಹಕ್ಕಿ -(2)

8. ದ್ರಾಕ್ಷಿ ತೋಟಕ್ಕೆ ಹೋಗಿ ದ್ರಾಕ್ಷಿ ದಕ್ಕದೇ ಇದ್ದಾಗ ದ್ರಾಕ್ಷಿಯೇ ಹುಳಿ ಎಂದವನೀತ! ಬಲು ಚತುರ! – ಕಾಡಿನರಾಜ ಸಿಂಹಕ್ಕೆ ಮಂತ್ರಿ- (2)

9. ಭಾರತದಲ್ಲಿ ಸಾಮಾನ್ಯವಾಗಿ ಕಂಡುಬರುವ ಮೈನಾ ಹಕ್ಕಿ- (4)

10. ಮಂಗಳೂರಿನಲ್ಲಿ ‘ಪಿಲಿಕುಳ’, ಮೈಸೂರಿನಲ್ಲಿ ‘ ಚಾಮರಾಜೇಂದ್ರ’ ಹೆಸರಿನಲ್ಲಿರುವ ಇವೆರಡೂ ಕಾಡುಪ್ರಾಣಿಗಳ ಕೃತಕ ನಿಲಯ- (4)

12. ಇಟ್ಟರೆ ಸಗಣಿ, ತಟ್ಟಿದರೆ ಭರಣಿ, ಸುಟ್ಟರೆ? – (3)

13. ಬೆಳ್ಳಿ ಮೋಡಗಳಿರುವ ಆಕಾಶ- (3)

14. ಬಾಲ್ಯದಲ್ಲಿ ಕೆಸರಾಡಿ, ಮೀನು- ಏಡಿಗಳನ್ನು ಹಿಡಿದು, ಭತ್ತ ಬೆಳೆಯುತ್ತಿದ್ದ ಜಾಗ- (2)

15. ದಪ್ಪನೆ ಕೂದಲು, ಸುರುಳಿಯಾಕಾರದ ಕೋಡುಗಳುಳ್ಳ ಗಂಡು ಕುರಿ – (3).

ಮೇಲಿನಿಂದ ಕೆಳಕ್ಕೆ:

1. ಮಳೆಗಾಲದಲ್ಲಿ ಸ್ವಲ್ಪ ನೆಗಡಿಯಾದರೂ ಅಮ್ಮ ಹತ್ತಾರು ಗಿಡಮೂಲಿಕೆ, ಅಡುಗೆಮನೆಯ ವಿವಿಧ ಪದಾರ್ಥಗಳನ್ನು ಹಾಕಿ ಮಾಡಿಕೊಡುವ ಮನೆಮದ್ದು- (3)

2. ಹೂವಿನೊಂದಿಗೆ ಸ್ವರ್ಗ ಸೇರಿದ ಬಾಳೆಗಿಡದ ಈ ಭಾಗ – (2)
3. ಪತ್ರೆಗಳಲ್ಲಿರುವ ಹಸಿರು ವರ್ಣ- (5)

4. ಕೆಸರಲ್ಲಿ ಹುಟ್ಟಲಿಲ್ಲ ಹೆಸರಲ್ಲಿ ಕಮಲವಿದೆ! ವರುಷಕೊಮ್ಮೆ ಬರುವೆ, ರಾತ್ರಿಯಲ್ಲಿ ಅರಳುವೆ, ಶ್ವೇತ ವರ್ಣದ ಚೆಲುವೆ, ನಾನು ಯಾರು? – (5)

5. ಜಾದೂಗಾರನೊಬ್ಬನ ‘ ಅಬ್ರಕಚುಬ್ರಕ…’ ಜಾದು ಮಂತ್ರದಲ್ಲಿ ಕಾಣುತ್ತಿರುವ ಕಾಗೆ ಬಂಗಾರ – (3)

6. ಬಾಲ್ಯದಲ್ಲಿ ಮರ ಹತ್ತಿ ಆಡಿದ ಆಟ- (6)

10. ಎಮ್ಮೆ ಅಥವಾ ಇತರೆ ಮೃಗದ ಚರ್ಮದಿಂದ ಮಾಡುವ ವಾದ್ಯ- (3)

11. ಯಮುನೋತ್ರಿ ಹಿಮನದಿಯಿಂದ ಹುಟ್ಟಿಕೊಂಡ ಇದು ಭಾರತದ ಅತಿ ಉದ್ದದ ಉಪನದಿ – (3)

12. ಸರ್ಪದ ಕೋರೆ ಹಲ್ಲಿನಿಂದ ಸ್ರವಿಸುವ ರಸ – (2)

ವನಬಂಧ – 04ರ ಉತ್ತರಗಳು
ಎಡದಿಂದ ಬಲಕ್ಕೆ

1. ಅಶೋಕವನ 2. ಶೇಂಗಾ 3. ಸೀಮೆಎಣ್ಣೆ 5.  ಪಾಚಿ 7. ಸೌದಿ 8. ನಾರಿಕೇಳ.

9. ಕಲ್ಲಂಗಡಿ.   10. ಹುತ್ತರಿ.12. ನಿಯತ್ತು 13. ಕರು 14. ದ್ರಾಕ್ಷಿ 

ಮೇಲಿನಿಂದ ಕೆಳಕ್ಕೆ

1. ಅಘನಾಶಿನಿ 2. ಶೇಂದಿ 3. ಸೀಗಡಿ 4. ಎರೆಹುಳು 6. ಚಿಪ್ಕೋ 7. ಸೌರವ್ಯೂಹ

9. ಕನಕ 11. ಅಕ್ಷಿ 

ವನಬಂಧ – 04 ಅಂಕಣಕ್ಕೆ ಸರಿಯಾದ ಉತ್ತರ ಕೊಟ್ಟ ಎಲ್ಲರಿಗೂ ಧನ್ಯವಾದಗಳು

  1. ಅರ್ಜುನ್ ಗೌಡ (ಹಾಸನ ಜಿಲ್ಲೆ)
  2. ಸ್ವೀಕೃತಾ (ಶಿವಮೊಗ್ಗ ಜಿಲ್ಲೆ)
  3. ಸೌಮ್ಯ (ದಕ್ಷಿಣ ಕನ್ನಡ ಜಿಲ್ಲೆ)

“ಈ ಮೇಲಿನ ವನಬಂಧವನ್ನು ಉತ್ತರಿಸಿ ನಮ್ಮ ವಿಳಾಸಕ್ಕೆ ಇದೇ ತಿಂಗಳ ದಿನಾಂಕ 20ರ ಒಳಗೆ ಕಳುಹಿಸಿ ಕೊಟ್ಟವರಿಗೆ ಪುಟ್ಟ ಬಹುಮಾನ ನೀಡಲಾಗುವುದು. (ವಿಳಾಸಕ್ಕಾಗಿ ನೀವೂ ಕಾನನಕ್ಕೆ ಬರೆಯಬಹುದು ಅಂಕಣವನ್ನು ಓದಿ)”

ಅಕ್ಷತ ಹೆಚ್. ಕೆ.
          ಚಿಕ್ಕಮಗಳೂರು ಜಿಲ್ಲೆ

Spread the love
error: Content is protected.