ವನಬಂಧ-02

ಎಡದಿಂದ ಬಲಕ್ಕೆ:
1. ತುಂತುರು ಮಳೆ ಮತ್ತು ಸೂರ್ಯನ ಕಿರಣಗಳು ಸೇರಿ ಆಕಾಶದಲ್ಲಿ ಹೋಳಿಯಾಡಿದಾಗ ಮೂಡಿಬರುವ ಪ್ರಕೃತಿಯ ಚಿತ್ರಕಲೆ (5)
2. ಎಂಟು ಕಾಲುಗಳುಳ್ಳವರಿಗೆ ಹೀಗೆ ಹೇಳಬಹುದು (4)
3. ನೀರಿನ ಮೇಲೂ ನೆಲದ ಮೇಲೂ ಬದುಕಬಲ್ಲ ಕಪ್ಪೆಯಂತಹ ಜೀವಿ (5)
8. ಬಾವಲಿ ರಾತ್ರಿಹೊತ್ತು ಈ ಮರದ ಹಣ್ಣನ್ನೂ ಸಹ ಭಕ್ಷಿಸಲು ಬರುತ್ತದೆ (2)
9. ಹುಲಿ ಮತ್ತು ಸಿಂಹ ಇವೆರಡನ್ನೂ ಒಟ್ಟಿಗೆ ಸೇರಿಸಿದರೆ (3)
10. ಉಡುಪಿ ಜಿಲ್ಲೆಯ ಹೊಸಂಗಡಿ ಬಳಿಯಿರುವ ವಾರಾಹಿ ಜಲ ವಿದ್ಯುತ್ ಯೋಜನೆಯು ಈ ನದಿಯ ಮೇಲೆ ನೆಲೆಗೊಂಡಿದೆ (3)
12. ಪಿಕಳಾರ ಪಕ್ಷಿಯ ಇಂಗ್ಲೀಷ್ ಹೆಸರು, ನಟ ಅಂಬರೀಶ್ ರವರ ನಾಗರಹಾವು ಸಂಭಾಷಣೆ ರವರ “…… ಮಾತಡಕಿಲ್ವಾ?” ದಿಂದ ಎಲ್ಲರಿಗೂ ಚಿರಪರಿಚಿತ (4)
13. ಕೇರಳದಲ್ಲಿ ವಿಷ್ಣು ಹಬ್ಬದಂದು ಈ ಮರದ ಹಳದಿ ಗೊಂಚಲು ಹೂವನ್ನು ಶ್ರೀ ಕೃಷ್ಣನಿಗೆ ಅರ್ಪಿಸುವುದು ವಾಡಿಕೆ (4)
14. ಅವಳು ಧರಿಸಿದ್ದ ಸರದಲ್ಲಿರುವ ಆ ಕೆಂಪು ಮಣಿಗಳು ಸಮುದ್ರದ ಆಳದಲ್ಲಿರುವ ಪ್ರಾಣಿಯೊಂದರದಂತೆ (3)
15. ನಮ್ಮ ಮೂತ್ರಪಿಂಡ ಈ ಬೀಜದ ಆಕಾರದಲ್ಲಿದೆ (3)
17. ಶರಭ ಹಿಂದೂ ಪುರಾಣದಲ್ಲಿ ಬರುವ ಈ ಪ್ರಾಣಿಯು ಎಂಟು ಕಾಲುಗಳುಳ್ಳ ಸಿಂಹ ಮತ್ತು ಹಕ್ಕಿಯ ದೇಹ ಹೊಂದಿದೆ (3)
19. ಚಾಮರಾಜನಗರ ಜಿಲ್ಲೆಯಲ್ಲಿರುವ ಬಿಆರ್ಟಿ ವನ್ಯಜೀವಿ ಅಭಯಾರಣ್ಯದ ವಿಸ್ತೃತ ರೂಪ (9)
22. ಸತೀಶ್ ಧವನ್ ಬಾಹ್ಯಾಕಾಶ ಸಂಸ್ಥೆ ಈ ರಾಜ್ಯದಲ್ಲಿದೆ (5)
23. ಕರ್ನಾಟಕ ರಾಜ್ಯ ಲಾಂಛನದಲ್ಲಿ ಕಾಣಸಿಗುವ ಎರಡು ತಲೆಯುಳ್ಳ ಪಕ್ಷಿ (5)
26. ಎಲೆಗಿಲೆ, ಹೂವು ಗೀವು ಅಂತೆಯೇ ‘ಹಳ್ಳ’ದ ಜೋಡು ಪದ (2)
28. ನೇತ್ರಾವತಿ ನದಿ ತಿರುವು ಯೋಜನೆಯು ಹೀಗೂ ಕರೆಸಿಕೊಳ್ಳುತ್ತದೆ (5)
30. ‘ಮಾವಿನ ಮರ’ದ ವೈಜ್ಞಾನಿಕ ನಾಮ/ದ್ವಿಪದನಾಮದಲ್ಲಿ ಮೊದಲನೆಯ ಹೆಸರು (4)
31. ಮಳೆಗಾಲದಲ್ಲಿ ಮಲೆನಾಡಿನ ಕಾಡುಗಳಲ್ಲಿ ಕಂಡುಬರುವ ರಕ್ತಹೀರುವ ಜೀವಿ (3)
32. ಗಣೇಶ ಚತುರ್ಥಿ ಆಚರಣೆಯಲ್ಲಿ ಇದರಿಂದ ಮಾಡಿದ ಗಣೇಶನ ಮೂರ್ತಿಗಳನ್ನು ನೀರಿಗೆ ಬಿಡುವುದು ನಿಷೇಧಿಸಲಾಗಿದೆ (3)
35. ಈ ಫಲ ಸೀತೆಗೂ, ರಾಮನಿಗೂ ಸಂಬಂಧಿಸಿದ್ದಲ್ಲ, ಹಾಗಾದರೆ…! (5)
38. ಪ್ರಶ್ನೆ 8ರ ಮರದ ಹಣ್ಣಿನ ಬೀಜಕ್ಕೆ ಆಂಗ್ಲ ಭಾಷೆಯಲ್ಲಿ ಹೀಗೆನ್ನುವರು (5)
39. ಬೇಕರಿಯಲ್ಲಿ ಬ್ರೆಡ್ಡು, ಕೇಕ್ ಮುಂತಾದವನ್ನು ತಯಾರಿಸುವಾಗ ಹಿಟ್ಟು ಮೆದುವಾಗಲೆಂದು ಈ ಶಿಲೀಂಧ್ರವನ್ನು ಉಪಯೋಗಿಸುತ್ತಾರೆ (2)
40. ಈ ಮರದಿಂದ ತೈಲವನ್ನು ತಯಾರಿಸುತ್ತಾರೆ (4).
ಮೇಲಿನಿಂದ ಕೆಳಕ್ಕೆ:
1.ಮಣ್ಣಿನಲ್ಲಿ ಬೆರೆತುಹೋಗಿರುವ ಮಿರಮಿರ ಹೊಳೆಯುವ ಕಾಗೆಯ ಚಿನ್ನ (5)
2. ಜೀವಶಾಸ್ತ್ರದ ಪಿತಾಮಹ (4)
3. ಆಂಗ್ಲ ಭಾಷೆಯಲ್ಲಿ ಮಾನಿಟರ್ ಲಿಸರ್ಡ್ ಎಂದರೆ ಕನ್ನಡದಲ್ಲಿ? (2)
4. ಅತ್ಯಂತ ಉದ್ದದ ಹುಲ್ಲು- (3)
5. ಪರಿಸರದಲ್ಲಿ ನಡೆಯುವ ಸೋಜಿಗಗಳನ್ನು ಕೆ ಪಿ ಪೂರ್ಣಚಂದ್ರ ತೇಜಸ್ವಿ ರವರು ಅವರ ಈ ಕೃತಿಯಲ್ಲಿ ಕಥೆಯಾಗಿಸಿದ್ದಾರೆ. (9)
6. ಭಾರತದ ತಲೆಗೆ ಕಿರೀಟದಂತೆ ಇರುವ ಪರ್ವತಶ್ರೇಣಿ ತಲೆಕೆಳಗಾಗಿದೆ (4)
7. ಭಾರತದ ಈ ರಾಷ್ಟ್ರೀಯ ಉದ್ಯಾನವನ ಸಿಂಹಗಳ ಸಂರಕ್ಷಣೆಗೆ ಪ್ರಸಿದ್ಧವಾಗಿದೆ (2)
9. ಅಂತರಿಕ್ಷಯಾನ ಮಾಡಿದ ಮೊದಲ ‘ಶ್ವಾನ’ (3)
10. ಕೋತಿ, ಮಂಗ ಇವುಗಳ ಸಮಾನಾರ್ಥಕ ಪದ (3)
11. ಗ್ರಹ, ನಕ್ಷತ್ರ ಇನ್ನಿತರ ಆಕಾಶಕಾಯಗಳ ಅಧ್ಯಯನ (5)
12. ಬಸ್ಸಿನಲ್ಲಿ ಕುಳಿತು ಮಗುವೊಂದು ಹಾವಿನಂತೆ ಶಬ್ದ ಮಾಡುತ್ತಿತ್ತು (2)
15. ಇದನ್ನು ಗೆದ್ದಲು ನಿರ್ಮಿಸಿದ್ದಾದರು ಹಾವು ಮನೆಮಾಡಿಕೊಂಡಿದೆ (2)
16. ಬಿಳಿಹೂವಿಗೆ ಕಿತ್ತಳೆಗೆಂಪಿನ ನಾಳ ಹೊಂದಿರುವ ಈ ಆಕರ್ಷಕ ಹೂವು ಕ್ಷೀರ ಸಮುದ್ರದಿಂದ ಹುಟ್ಟಿದ ೫ ಕಲ್ಪವೃಕ್ಷಗಳಲ್ಲಿ ಒಂದು (4)
18. ಲಂಗ ಹಾಕಿದವಳು ಈ ಸಾಂಬಾರು ಪದಾರ್ಥವನ್ನು ತೋರಿಸಿ ಇದೊಂದು ಮರದ ಹೂವಿನ ಮೊಗ್ಗು ಎಂದಳು (3)
20. ತರಕಾರಿ ಕೊಳೆತಾಗ ಅದರ ಮೇಲೆ ಕಾಣಿಸಿಕೊಳ್ಳುವ ಬೂಸ್ಟನ್ನು ವೈಜ್ಞಾನಿಕವಾಗಿ ಹೀಗೆನ್ನುತ್ತಾರೆ (3)
21. ವಿಷ್ಣುವಿನ ವಾಹನ ಎಂದು ಕರೆಯುವ ಇದು, ಸತ್ತ ಕರುವಿನ ರುಂಡವನ್ನೇ ಸಿಗಿದು ತಿನ್ನುತ್ತದೆ (3)
25. ಕರ್ನಾಟಕದ ಅತೀ ಎತ್ತರದ ಗಿರಿಶಿಖರ, ಚಿಕ್ಕಮಗಳೂರು ಜಿಲ್ಲೆಯಲ್ಲಿದೆ (6)
27. ತನ್ನ ನಾಲಗೆಯಿಂದಲೇ ತನ್ನ ಕಿವಿಯನ್ನು ಸ್ವಚ್ಚಗೊಳಿಸಿಕೊಳ್ಳಬಲ್ಲ, ಅತೀ ಎತ್ತರದ ಪ್ರಾಣಿಯಿದು (3)
28. 6ನೇ ಪ್ರಶ್ನೆಯಲ್ಲಿ ಬರುವ ಪರ್ವತ ಶ್ರೇಣಿಯಲ್ಲಿ ಅತ್ಯಂತ ಎತ್ತರದ ಶಿಖರ (4)
29. ಬೆಳೆಯ ನಡುವೆ ಬೆಳೆಯುವ ನಿರುಪಯುಕ್ತ ಗಿಡ (2)
31. ದೇಶದ ಮೊದಲ ರಾಷ್ಟೀಯ ಉದ್ಯಾನವನ ಉತ್ತರಖಂಡದಲ್ಲಿದೆ (5)
33. ಸಾಮಾನ್ಯವಾಗಿ ಹೂದೋಟದಲ್ಲಿಕಾಣಸಿಗುವ ಸರೀಸೃಪ (4)
34. ಬಹಳ ಪ್ರಚಲಿತವಿರದಿದ್ದರೂ, “ಚೀತಾ”ಗಳಿಗೆ ಕನ್ನಡದಲ್ಲಿ ಹೀಗೆನ್ನುತ್ತಾರೆ (3)
36. ಸೂಕ್ಷ್ಮದರ್ಶಕದಲ್ಲಿ ನೋಡಬಹುದಾದ ಕಣ್ಣಿಗೆ ಕಾಣದ ಜೀವಿಯಿದು (4)
37. ಒಗಟು ಬಿಡಿಸಿ: ಗಿಡದ ಮೇಲೆ ಕಾಯಿ, ಕಾಯಿ ಮೇಲೆ ಗಿಡ (3)
ವನಬಂಧ – 01 ಉತ್ತರಗಳು:
ಎಡದಿಂದ ಬಲಕ್ಕೆ:
1.ಕಾನನ, 2. ಮಂಗಟ್ಟೆ, 3. ಪಶ್ಚಿಮಘಟ್ಟ, 4. ಚಿಟ್ಟುಗಿಳಿ, 5. ಗರುಡಪಾತಾಳ, 6. ಅಣಬೆ, 7. ಕುದುರೆಮುಖ, 8. ಕಲ್ಲುಹೂವು, 9. ಕಾಳಿನದಿ, 10. ಸಿಂಹಬಾಲದ ಕೋತಿ, 11. ಮಿಯಾವಾಕಿ, 12. ಆಲದ ಮರ, 13. ನಾಗರಹೊಳೆ, 14. ಜೂನ್
ಮೇಲಿನಿಂದ ಕೆಳಕ್ಕೆ:
- ಕಾಡುಗಳ್ಳ, 7. ಕುನೋ, 9. ಕಾಳಿಂಗಸರ್ಪ, 12. ಆಮೆ, 15. ಚಿಟ್ಟೆ, 16. ಸೀತಾಳದಂಡೆ 17. ಮರಕುಟಿಗ, 18. ಆಗುಂಬೆ, 19. ಸಾಲುಮರ ತಿಮ್ಮಕ್ಕ, 20. ಮುಳ್ಳುಹಂದಿ 21. ತಿಮಿಂಗಿಲ, 22. ಹಸಿರುಹೊನ್ನು, 23. ಶ್ರೀಗಂಧ, 24. ನವಿಲುಧಾಮ 25. ಕಸ್ತೂರಿರಂಗನ್
“ಈ ಮೇಲಿನ ವನಬಂಧವನ್ನು ಉತ್ತರಿಸಿ ನಮ್ಮ ವಿಳಾಸಕ್ಕೆ ಇದೇ ತಿಂಗಳ ದಿನಾಂಕ 20ರ ಒಳಗೆ ಕಳುಹಿಸಿ ಕೊಟ್ಟವರಿಗೆ ಪುಟ್ಟ ಬಹುಮಾನ ನೀಡಲಾಗುವುದು. (ವಿಳಾಸಕ್ಕಾಗಿ ನೀವೂ ಕಾನನಕ್ಕೆ ಬರೆಯಬಹುದು ಅಂಕಣವನ್ನು ಓದಿ)”
– ಅಕ್ಷತ ಹೆಚ್. ಕೆ.
ಚಿಕ್ಕಮಗಳೂರು ಜಿಲ್ಲೆ