ನೀವೂ ಕಾನನಕ್ಕೆ ಬರೆಯಬಹುದು
©ಶ್ರೀನಿವಾಸ್ ಕೆ. ಎಸ್.
ಹುಲಿ ನಮ್ಮ ರಾಷ್ಟ್ರೀಯ ಪ್ರಾಣಿ. ಯಾವುದೇ ಎರಡು ಹುಲಿಗಳು ಒಂದೇ ರೀತಿಯ ಪಟ್ಟೆಗಳನ್ನು ಹೊಂದಿರುವುದಿಲ್ಲ. ಹುಲಿಗಳು ವಿಶ್ವದ ಅತಿದೊಡ್ಡ ಕಾಡು ಬೆಕ್ಕುಗಳಾಗಿವೆ ಮತ್ತು ಸರಿ ಸುಮಾರು 363 ಕಿಲೋ ಗ್ರಾಂ ಗಳಷ್ಟು ತೂಕವಿರುತ್ತವೆ. ಹುಲಿಗಳು ಏಕಾಂಗಿಯಾಗಿ ವಾಸಿಸುತ್ತವೆ ಮತ್ತು ತಮ್ಮ ಪ್ರತಿಸ್ಪರ್ಧಿಗಳನ್ನು ದೂರವಿಡಲು ದೊಡ್ಡ ಪ್ರದೇಶಗಳನ್ನು ಮೂತ್ರದ ಮೂಲಕ ಗುರುತಿಸುತ್ತವೆ. ಹುಲಿ ಮರಿಗಳು ಕುರುಡಾಗಿ ಜನಿಸುತ್ತವೆ ಮತ್ತು ಹುಟ್ಟಿದ 6-8 ವಾರಗಳ ನಂತರ ಸ್ಪಷ್ಟ ದೃಷ್ಟಿಯನ್ನು ಪಡೆಯುತ್ತವೆ. ಹುಲಿಯನ್ನು ಮುಂದಿನ ಪೀಳಿಗೆಯವರು ಚಿತ್ರಗಳಲ್ಲಿ ಮಾತ್ರ ನೋಡುವಂತಹ ಪರಿಸ್ಥಿತಿ ಎದುರಾಗುತ್ತಿದೆ. ದಿನದಿಂದ ದಿನಕ್ಕೆ ಹುಲಿಗಳ ಸಂತತಿ ಕಡಿಮೆಯಾಗುತ್ತಿದೆ. ಇದರ ಬಗ್ಗೆ ಅನೇಕ ಜಾಗೃತಿಯ ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ. ಹುಲಿಗಳ ಅಳಿವಿಗೆ ಪರಿಸರ ಪ್ರವಾಸೋದ್ಯಮ ಕೂಡ ಒಂದು ಕಾರಣವಾಗಿದೆ. ಕಾಡಿನಲ್ಲಿ ರೆಸಾರ್ಟ್ಗಳು, ಜಂಗಲ್ ಲಾಡ್ಜ್ ಗಳು ತಲೆ ಎತ್ತಿರುವುದರಿಂದ ಕಾಡುಪ್ರಾಣಿಗಳಿಗೆ ಓಡಾಡಲು ಜಾಗವಿಲ್ಲದಾಗಿದೆ. ಆಹಾರದ ಕೊರತೆಯಿಂದ ಕೆಲವು ಹುಲಿಗಳು ಸಾವನ್ನಪ್ಪಿದರೆ ಮತ್ತೆ ಕೆಲವು ನಾಡಿಗೆ ಬಂದು ಜನರ ಕೈಯಲ್ಲಿ ಸಾವನ್ನಪ್ಪುತ್ತಿರುವುದು ವಿಷಾದನೀಯ. ಹುಲಿಗಳ ಸಂತತಿ ಉಳಿಸುವುದು ನಮ್ಮೆಲ್ಲರ ಕರ್ತವ್ಯ. 2010 ರಲ್ಲಿ ಸಹಿ ಮಾಡಿದ ಸೇಂಟ್ ಪೀಟರ್ಸ್ಬರ್ಗ್ ಹುಲಿ ಸಂರಕ್ಷಣೆಯ ಘೋಷಣೆಯ ಪ್ರಕಾರ ಪ್ರತಿ ವರ್ಷ ಜುಲೈ 29 ರಂದು “ಅಂತರರಾಷ್ಟ್ರೀಯಹುಲಿದಿನ” ಅಥವಾ ಜಾಗತಿಕ ಹುಲಿ ದಿನವೆಂದು ಆಚರಿಸಲಾಗುತ್ತದೆ.
ಈ ರೀತಿಯ ಪರಿಸರದ ಬಗೆಗಿನ ಮಾಹಿತಿಯನ್ನು ಒದಗಿಸಲು ಇರುವ ಕಾನನ ಇ-ಮಾಸಿಕಕ್ಕೆ ಮುಂದಿನ ತಿಂಗಳ ಸಂಚಿಕೆಗೆ ಲೇಖನಗಳನ್ನು ಆಹ್ವಾನಿಸಲಾಗಿದೆ. ಆಸಕ್ತರು ಪರಿಸರಕ್ಕೆ ಸಂಬಂಧಿಸಿದ ಕಥೆ, ಕವನ, ಛಾಯಾಚಿತ್ರ, ಚಿತ್ರಕಲೆ, ಪ್ರವಾಸ ಕಥನಗಳನ್ನು ಕಾನನ ಮಾಸಿಕದ ಇ-ಮೇಲ್ ವಿಳಾಸಕ್ಕೆ ಕಳುಹಿಸಬಹುದು.
ಕಾನನ ಪತ್ರಿಕೆಯ ಇ-ಮೇಲ್ ವಿಳಾಸ: [email protected]
ಅಂಚೆ ವಿಳಾಸ:
ಅಡವಿ ಫೀಲ್ಡ್ ಸ್ಟೇಷನ್,
ಒಂಟೆಮಾರನ ದೊಡ್ಡಿ ಗ್ರಾಮ ,
ರಾಗಿಹಳ್ಳಿ ಅಂಚೆ,
ಜಿಗಣಿ ಹೋಬಳಿ,
ಆನೇಕಲ್ ತಾಲ್ಲೂಕು ,
ಬೆಂಗಳೂರು ನಗರ ಜಿಲ್ಲೆ
ಪಿನ್ ಕೋಡ್: 560083. ಗೆ ಕಳಿಸಿಕೊಡಬಹುದು.