ನೀವೂ ಕಾನನಕ್ಕೆ ಬರೆಯಬಹುದು
ಭೂಮಿಯ ಮೇಲಿನ ವೈವಿಧ್ಯತೆಗೆ ಬೆರಗಾಗದವರು ಯಾರು?
“ಸ್ವರ್ಗವೇ… ಭೂಮಿಯೊಳಿರದಿರೇ ನೀನು… ಮೇಲೆಲ್ಲಿಯೂ ನೀನಿಲ್ಲ ಇಲ್ಲ… ಇಲ್ಲ…” ಎಂದು ಕುವೆಂಪು ಬರೆದಿರುವುದು ಕೇವಲ ಅವರ ಕಲ್ಪನೆಯಲ್ಲ. ನೀಲಿ ಗ್ರಹ ಎಂದು ಕರೆಯಲ್ಪಡುವ ನಮ್ಮ ಭೂಮಿಗೆ 4.5 ಬಿಲಿಯನ್ ವರ್ಷಗಳ ಇತಿಹಾಸವಿದ್ದು, ಇಡೀ ಸೌರಮಂಡಲದಲ್ಲೇ ಜೀವಿಗಳು ಉಗಮಿಸಲು, ಜೀವಿಸಲು ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಹೊಂದಿರುವಂತಹ ಏಕೈಕ ಗ್ರಹವಾಗಿದೆ. ಅನೇಕ ವಿಶೇಷತೆಗಳನ್ನು ತನ್ನಲ್ಲಿ ಹುದುಗಿಸಿಕೊಂಡಿರುವ ಭೂಮಿ ತನ್ನಲ್ಲಿ ಅಡಕವಾಗಿರುವ ಪ್ರಾಕೃತಿಕ ರಹಸ್ಯಗಳನ್ನು ಅನ್ವೇಷಿಸುವ ವಿಜ್ಞಾನಿಗಳಿಗೆ ಅವರ ಕಲ್ಪನೆಗೂ ಮೀರಿದ ವಿಷಯಗಳನ್ನು ಪ್ರದರ್ಶಿಸುತ್ತಾ ಅಚ್ಚರಿ ಮೂಡಿಸುತ್ತಿದೆ.
ಭೂಮಿಯಲ್ಲಿ ಇರುವಂತೆಯೇ ಬೇರೆ ಗ್ರಹದಲ್ಲಿ ತನ್ನ ಅಸ್ತಿತ್ವ ಸಾಧಿಸಲು ಯೋಚಿಸುತ್ತಿರುವ ಮಾನವ, ತನಗೆ ತಿಳಿದೋ ತಿಳಿಯದೆಯೋ ಪರಿಸರ ವ್ಯವಸ್ಥೆಯನ್ನು ಹಾಳು ಮಾಡಿ, ಇತರ ಜೀವಿಗಳಿಗೆ ತೊಂದರೆ ಮಾಡುತ್ತಿದ್ದಾನೆ. ಭೂಮಿಯಲ್ಲಿ ಎಲ್ಲ ಜೀವಿಗಳು ಜೀವಿಸಲು ಸಮನಾದ ಹಕ್ಕನ್ನು ಹೊಂದಿವೆ. ಭೂಮಿಯ ಅನನ್ಯತೆಯನ್ನು ಅದರ ಅದ್ಭುತ ಜೀವವೈವಿಧ್ಯತೆಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಪ್ರಶಂಸಿಸಲು, ಭೂಮಿಯ ಮೇಲಿನ ನೈಸರ್ಗಿಕ ಸಂಪನ್ಮೂಲಗಳ ಸಮರ್ಪಕ ಬಳಕೆಯ ಬಗ್ಗೆ ಜಾಗೃತಿ ಮೂಡಿಸಲು ಏಪ್ರಿಲ್ 22 ರನ್ನು ಅಂತರರಾಷ್ಟ್ರೀಯ ಭೂಮಿ ದಿನವನ್ನಾಗಿ ಆಚರಿಸಲಾಗುತ್ತದೆ.
ಈ ರೀತಿಯ ಪರಿಸರದ ಬಗೆಗಿನ ಮಾಹಿತಿಯನ್ನು ಒದಗಿಸಲು ಇರುವ ಕಾನನ ಇ-ಮಾಸಿಕಕ್ಕೆ ಮುಂದಿನ ತಿಂಗಳ ಪ್ರತಿಗೆ ಲೇಖನಗಳನ್ನು ಆಹ್ವಾನಿಸಲಾಗಿದೆ. ಆಸಕ್ತರು ಪರಿಸರಕ್ಕೆ ಸಂಬಂಧಿಸಿದ ಕಥೆ, ಕವನ, ಛಾಯಾಚಿತ್ರ, ಚಿತ್ರಕಲೆ, ಪ್ರವಾಸ ಕಥನಗಳನ್ನು ಕಾನನ ಮಾಸಿಕದ ಇ-ಮೇಲ್ ವಿಳಾಸಕ್ಕೆ ಕಳುಹಿಸಬಹುದು.
ಕಾನನ ಪತ್ರಿಕೆಯ ಇ-ಮೇಲ್ ವಿಳಾಸ: [email protected]
ಅಂಚೆ ವಿಳಾಸ:
Study House,
ಕಾಳೇಶ್ವರಿ ಗ್ರಾಮ,
ಆನೇಕಲ್ ತಾಲ್ಲೂಕು,
ಬೆಂಗಳೂರು ನಗರ ಜಿಲ್ಲೆ,
ಪಿನ್ ಕೋಡ್ :560083. ಗೆ ಕಳಿಸಿಕೊಡಬಹುದು.