ವನಬಂಧ-10

ವನಬಂಧ-10

ಎಡದಿಂದ ಬಲಕ್ಕೆ:

  1. ಇಲ್ಲೊಂದು ಹಿರಿದಾದ ಹಾವು ಮಲಗಿದೆ (3)
  2. ಹಕ್ಕಿಗಳು ಹಾಡುವ ಈ ನಾದ ಮುಂಜಾನೆಯಲ್ಲಿ ಕಿವಿಗಿಂಪು (4)
  3. ತಕರಾರು ಇಲ್ಲದೇ ಬೆಳೆದ ಆಹಾರ ಪದಾರ್ಥ (4)
  4. ಪರಿವಾರದೊಂದಿಗೆ ನಗರವನ್ನು ಆಳುವ ಬೂದು ಬಣ್ಣದ ಪಕ್ಷಿ (4)
  5. ಎರಡು ದಳಗಳನ್ನು ಹೀಗೂ ಕರೆಯಬಹುದು (3)
  6. ಗೊರವರಿಗೂ ಈ ಹಕ್ಕಿಗೂ ಸಂಬಂಧವಿಲ್ಲ, ಆದರೂ ಬಲು ಬಿಂಕ (4)
  7. ಜೇನು ಹುಳಗಳು ಹೂವಿನಲ್ಲಿ ಅರಸುವ ಸಿಹಿ (4)
  8. ಶ್ರೀ ತೇಜಸ್ವಿ ಅವರ ಅನುವಾದದ ಕಾಡಿನ ಕಥೆಗಳು ಸರಣಿಯ ಪ್ರಮುಖ ಪಾತ್ರಧಾರಿ (5)

ಮೇಲಿನಿಂದ ಕೆಳಕ್ಕೆ:

  1. ತಬ್ಬಲಿಯಲ್ಲ ಆದರೆ ಭಯಾನಕವಾಗಿದೆ ಈ ವ್ಯಾಘ್ರ (3)
  2. ಸಾಕಾನೆಯ ವಾರಸುದಾರ ಮಾವು ತರಲು ಹೋಗಿದ್ದಾನೆ. (3)
  3. ಈ ನಗರಿಯಲ್ಲಿ ಹಕ್ಕಿಗಳ ಪುಕ್ಕವೊಂದು ಅವಿತು ಕುಳಿತಿದೆ (2)
  4. ಗಾಜು ಮೂಲಭೂತವಾಗಿ ಈ ಗುಣ ಹೊಂದಿರುತ್ತದೆ (5)
  5. ಸುವಾಸನೆ ಇಲ್ಲಿ ತಲೆಕೆಳಗಾಗಿದೆ (4)
  6. ದನದ ಕೊಟ್ಟಿಗೆಯಿಂದ ಬೇಸಾಯದ ಭೂಮಿಗೆ ಈ ವಸ್ತುವನ್ನು ಸಾಗಿಸಲು ಅಬ್ಬರವೇಕೆ (3)
  7. ಮನೆಯ ಕದ ಮುಚ್ಚಿದ್ದರೂ ಯುದ್ದ ನಡೆಯುತ್ತಲೇ ಇದೆ (3)
  8. ಕಪ್ಪು ಬಣ್ಣದ ವಟಗುಟ್ಟುವ ಮಂಡೂಕ (2)

ವನಬಂಧ – 09ರ ಉತ್ತರಗಳು
ಎಡದಿಂದ ಬಲಕ್ಕೆ

1.ಶಾಮ 2. ಟಿಟ್ಟಿಭ 3. ಮುತ್ತತ್ತಿ 4. ಗಗನ

    5. ಜೇಡ 6. ಕಾಗದ 7. ಮಹಾನದಿ 8. ಆನೆಕಲ್ಲು

      ಮೇಲಿನಿಂದ ಕೆಳಕ್ಕೆ

      1. ಮರಕುಟಿಗ         2. ಭತ್ತ           3. ಮುತ್ತುಗ           4. ಗರುಡ

                5. ಜೇನುಗೂಡು        6. ಕಾನನ        7. ಮದ್ದಾನೆ        8. ಕರಡಿ

      “ಈ ಮೇಲಿನ ವನಬಂಧವನ್ನು ಉತ್ತರಿಸಿ ನಮ್ಮ ವಿಳಾಸಕ್ಕೆ ಇದೇ ತಿಂಗಳ ದಿನಾಂಕ 30ರ ಒಳಗೆ ಕಳುಹಿಸಿ ಕೊಟ್ಟವರಿಗೆ ಪುಟ್ಟ ಬಹುಮಾನ ನೀಡಲಾಗುವುದು. (ವಿಳಾಸಕ್ಕಾಗಿ ನೀವೂ ಕಾನನಕ್ಕೆ ಬರೆಯಬಹುದು ಅಂಕಣವನ್ನು ಓದಿ)”

      ಸುಬ್ಬು ಬಾದಲ್
               ಬೆಂಗಳೂರು ಜಿಲ್ಲೆ

      Spread the love
      error: Content is protected.