ಕಾಡಂಚಿನ ಅಪರೂಪದ ಸಸ್ಯವರ್ಗ
ಡಾ. ಚಂದ್ರಪ್ಪ ಹೆಚ್
ಅರಣ್ಯ ಹುಲ್ಲಿನ ಜಾತಿಯ ಸಸ್ಯ ಸಂಕುಲದಿಂದ ಹಿಡಿದು, ಬಳ್ಳಿ-ಕಳ್ಳಿಯ ತರುಲತೆ ಹೊದ್ದು, ಚಿಕ್ಕ ಸೂಕ್ಷ್ಮ ಗಿಡ-ಗಂಟೆಗಳ ಜೊತೆ, ಮುಳ್ಳು-ಕಂಟಿ ಕುರುಚಲು ಪೊದೆ (ಮೆಳೆ), ಹಸಿರು ಪಾಚಿ, ನೀರಿನಲ್ಲಿ ಬೆಳೆವ ಸಸ್ಯ ಸಂಪತ್ತು ಹಾಗೂ ಬೃಹತ್ ಗಾತ್ರದ ಸಂಪದ್ಭರಿತ ವಿವಿಧ ರೀತಿಯ ಮರಗಿಡಗಳಿಂದ ಕಂಗೊಳಿಸುವ ಸಮತೋಲಿತ ಸ್ವಾಭಾವಿಕ ಜೈವಿಕ ಆವಾಸಸ್ಥಾನ. ಸಂಪದ್ಭರಿತ ಕಾಡುಗಳು, ಸಮತೋಲಿತ ಪರಿಸರ ಜೀವಸಂಕುಲ ಹಾಗೂ ಮಾನವನ ಸರ್ವತೋಮುಖ ಅಭಿವೃದ್ಧಿಗೆ ಅತ್ಯಂತ ಪೂರಕ. ಈ ವಾತಾವರಣದಲ್ಲಿನ ಸಣ್ಣಮಟ್ಟದ ವ್ಯತ್ಯಾಸ, ಬದುಕಿನಲ್ಲಿ ಅಗಾಧ ಪ್ರಮಾಣದ ಏರುಪೇರುಗಳನ್ನ ಸೃಷ್ಟಿಸುತ್ತದೆ. ಸ್ವಾಭಾವಿಕ ಅರಣ್ಯವೇ ನಮ್ಮೆಲ್ಲರ ಬದುಕಿನ ಮೂಲ. ಈ ಅಂಕಣದಲ್ಲಿ, ತೀರಾ ಇತ್ತೀಚೆಗೆ ಕಣ್ಮರೆಯಂಚಿನಲ್ಲಿರುವ ಗುಡ್ಡಗಾಡಿನಲ್ಲಿ ಸ್ವಾಭಾವಿಕವಾಗಿ ಬೆಳೆಯುತ್ತಿದ್ದ ಹಾಗೂ ಹಳ್ಳಿಗರ ಮನಗೆದ್ದ ಕೆಲವು ಅಪರೂಪದ ಸವಿಯಬಹುದಾದ ಸಸ್ಯ ಸಂಪತ್ತುಗಳ ಕುರಿತು ಮೆಲುಕು ಹಾಕೋಣ.ನೆ.
ಕವಳಿ ಹಣ್ಣು (Carissa carandas)

ಸಾಮಾನ್ಯವಾಗಿ ಹಳ್ಳಿಗರಿಗೆ ಹಾಗೂ ಗುಡ್ಡಗಾಡು ವಾಸಿಗಳಾದ ಬುಡಕಟ್ಟು ಜನತೆಗೆ ಹೆಚ್ಚಾಗಿ ಚಿರಪರಿಚಿತವಿರುವ ಅತ್ಯಂತ ಸೊಗಸಾದ ಮುಳ್ಳುಗಳನ್ನು ಹೊಂದಿರುವ ಪೊದೆಗಿಡವಿದು. ಸಾಧಾರಣವಾಗಿ 8–9 ಅಡಿ ಎತ್ತರಕ್ಕೆ ಸುತ್ತಲೂ ತನ್ನ ರೆಂಬೆಕೊಂಬೆಗಳನ್ನು ಹರಡಿ ಬೆಳೆಯುತ್ತದೆ. ಬೂದು ಬಣ್ಣದ ಟೊಂಗೆಗಳ ಭಾಗದಲ್ಲಿ ಸಾಮಾನ್ಯವಾಗಿ ಜೋಡಿಯಾಗಿ ಅಥವಾ Y ಆಕಾರದಲ್ಲಿ ಚೂಪಾದ ಮುಳ್ಳುಗಳನ್ನು ಹೊಂದಿದ್ದು, ತಿಳಿಹಸಿರು ಅಥವಾ ಕಡುಹಸಿರು ಚಿಕ್ಕ ಎಲೆಗಳಿಂದ ಕಂಗೊಳಿಸುವ ಸಸ್ಯ.
ಗುಡ್ಡಗಾಡು ಅಥವಾ ದನಗಾಹಿ ಜನರಿಗೆ, ಹಕ್ಕಿ-ಪಕ್ಷಿಗಳಿಗೆ ನೆಚ್ಚಿನ ಹಣ್ಣಿನ ತಳಿ ಇದಾಗಿದೆ. ಜೊತೆಗೆ ಹಾಲುಭರಿತ ಹಸಿರು ಕಾಯಿ ತುಂಬಾ ಹುಳಿಯಿಂದ ಕೂಡಿದ್ದು, ತಿನ್ನಲು ಹಲ್ಲುಗಳು ಜೋಮು ಹಿಡಿದು ಊಟ ಮಾಡಲು ಸಹ ಸಹಕರಿಸದಂತಾಗಿ ಚುಟುಗುಟ್ಟುತ್ತವೆ (‘ಚುಳ್’ ಎನ್ನುವಂತಾಗುವುದು). ಸರಿಸುಮಾರು 80ರ ದಶಕದಲ್ಲಿ ಈ ಹಣ್ಣನ್ನು ಶಿರಸಿ ಭಾಗದ ಗುಡ್ಡಗಾಡು ಜನತೆ ಹಾಗೂ ಹಲವು ಜಿಲ್ಲೆಗಳಲ್ಲಿನ ಜನ ಊರ ಸಂತೆಯಲ್ಲಿ ಜೀವನೋಪಾಯಕ್ಕಾಗಿ ಮಾರಾಟ ಮಾಡುವ ಪರಿಪಾಠವಿತ್ತು.

ಕಾರೆಕಾಯಿ (ಹಣ್ಣು) ಗಿಡ (Canthium parviflorum):
ಹೆಚ್ಚಾಗಿ ಗುಡ್ಡಗಾಡು ಪ್ರದೇಶಗಳಲ್ಲೇ ದಟ್ಟವಾಗಿ ಒತ್ತೊತ್ತಾಗಿ ಕುರುಚಲು ಪೊದೆಯಂತೆ ಸುಮಾರು ಏಳೆಂಟು ಅಡಿ ಎತ್ತರಕ್ಕೆ ಬೆಳೆಯುವ ಮುಳ್ಳುಗಳನ್ನು ಹೊಂದಿರುವ ಗಿಡವಿದು. ಎಲೆಗಳ ರಚನೆ, ಆಕಾರ, ಟೊಂಗೆಗಳ ಬಣ್ಣ ಹಾಗೂ ಮುಳ್ಳುಗಳ ವಿನ್ಯಾಸ ನೋಡಲು ಕವಳಿ ಗಿಡ (Carissa carandas) ದ ಹೋಲಿಕೆಯಂತಿದ್ದರೂ, ಚಿಕ್ಕ ಗಾತ್ರದ ಎಲೆಗಳು, ಮೊನಚಾದ ಮುಳ್ಳುಗಳು ಮತ್ತು ಟೊಂಗೆಗಳು ಹಸಿರು ಮಿಶ್ರಿತ ಬೂದುಬಣ್ಣದ್ದಾಗಿರುವುದು ಇದರ ವಿಶೇಷತೆ. ಸಾಮಾನ್ಯವಾಗಿ ಕವಳಿ ಇರುವ ಪ್ರದೇಶಗಳಲ್ಲಿ ಈ ಕಾರೆ ಗಿಡಗಳೂ ಬೆಳೆದಿರುವುದು ಕಂಡುಬರುತ್ತದೆ.
ಕಾರೆ ಗಿಡದ ಹಸಿರು ಕಾಯಿಗಳು ಗಟ್ಟಿಯಾಗಿದ್ದು, ಮುಳ್ಳುಗಳ ಸಮೀಪ ಒಂದೊಂದು ಅಥವಾ ಸಣ್ಣ ಗುಂಪು ಮೈದಳೆದು ಬೆಳೆಯುತ್ತವೆ. ಈ ಗಿಡದಲ್ಲಿ ಯಾವುದೇ ಅಂಟಿನಂಶದ ಹಾಲು (latex) ಕಾಣಿಸುವುದಿಲ್ಲ. ಕಾಯಿಗಳು ತಿಳಿಹಸಿರು ಬಣ್ಣ ಹೊಂದಿದ್ದು, ಒಳಗಿನ ತಿರುಳು ರುಚಿಯಾಗಿದ್ದು ಬೀಜ ದೊಡ್ಡದಾಗಿರುತ್ತದೆ. ಕಾಯಿವಸಂತ ಕಾಲದಲ್ಲಿ ಸುಗಂಧಯುಕ್ತ ಬಿಳಿ ಹೂಗಳು ಅರಳಿ, ನಂತರ ಹಾಲಿನಂತಿರುವ ಅಂಟಿನಂಶ (latex) ಹೊಂದಿರುವ ಹಸಿರು ಕಾಯಿಗಳು ಕಟ್ಟುತ್ತವೆ. ಕ್ರಮೇಣ ಅವು ಗುಲಾಬಿ ಅಥವಾ ಕೆಂಪು ಬಣ್ಣಕ್ಕೆ ತಿರುಗಿ, ಪಕ್ವವಾದಾಗ ನೇರಳೆ ಅಥವಾ ಕಪ್ಪು ಬಣ್ಣವನ್ನು ಆವರಿಸಿಕೊಳ್ಳುತ್ತವೆ. ಜೊತೆಗೆ ಸಿಹಿ-ಹುಳಿ ರುಚಿಯನ್ನು ಹೊಂದಿರುತ್ತವೆ. ಸಾಮಾನ್ಯವಾಗಿ ಒಂದು ಹಣ್ಣಿನಲ್ಲಿ 2–8 ಸಣ್ಣ ಬೀಜಗಳು ಇರುತ್ತವೆ.
ಕ್ರಮೇಣ ಹಳದಿ ಮಿಶ್ರಿತ ಹಸಿರು ಅಥವಾ ಹಳದಿ ಬಣ್ಣಕ್ಕೆ ತಿರುಗಿ, ನಂತರ ಕೆಂಪು ಅಥವಾ ಗಾಢ ಕಪ್ಪು ಬಣ್ಣಕ್ಕೆ ಪಕ್ವವಾಗುತ್ತದೆ ಮತ್ತು ಸವಿಯಲು ರುಚಿಯಾಗಿರುತ್ತದೆ. ಬೀಜ ತಿನ್ನಲು ಒಗರಾಗಿರುತ್ತದೆ.
ಅಳಿಲು ಹಾಗೂ ಹಲವು ಪಕ್ಷಿಗಳಿಗೆ ಇದು ಅತ್ಯಂತ ನೆಚ್ಚಿನ ಹಣ್ಣಾಗಿದ್ದು, ಹಿಂದೆ ವಿಶೇಷವಾಗಿ 90ರ ದಶಕದಲ್ಲಿ ಈ ಹಣ್ಣಿನ ಮಾರಾಟ ಗ್ರಾಮೀಣ ಸಂತೆಗಳಲ್ಲಿ ಕಾಣಿಸುವುದು ಸಾಮಾನ್ಯವಾಗಿತ್ತು.

ಸಕ್ಕರೆ ಗಿಡ / ಕಾಶಿ ಗಿಡ (Solanum nigrum):
ರಸ್ತೆ ಬದಿ, ಕುರುಚಲು ಪೊದೆಗಳು, ಬೇಲಿ ಅಥವಾ ಹೊಲಗದ್ದೆಗಳ ಬದುಗಳಲ್ಲಿ ಯಥೇಚ್ಛವಾಗಿ ಬೆಳೆಯುವ ಅಂದಾಜು ಎರಡು ಅಥವಾ ಮೂರು ಅಡಿ ಎತ್ತರದ ಚಿಕ್ಕ ಸಸ್ಯ. ಎಲೆಗಳು ಸಾಧಾರಣ ಹಸಿರಿನಿಂದ ಕಡು ಹಸಿರು ಬಣ್ಣದ್ದಾಗಿದ್ದು, ಕಾಂಡವು ಮೃದುವಾಗಿದ್ದು ಕೆಲವೊಮ್ಮೆ ನೇರಳೆ ಮಿಶ್ರಿತ ಹಸಿರು ಬಣ್ಣದ ಛಾಯೆ ಹೊಂದಿರುತ್ತದೆ.
ಟೊಂಗೆಗಳಲ್ಲಿ ಅಲ್ಲಲ್ಲಿ ಗೊಂಚಲು ರೀತಿ ಚಿಕ್ಕ ಚಿಕ್ಕ ಗೋಲಾಕಾರದ ಕಾಯಿಗಳು ಬೆಳೆಯುತ್ತವೆ. ಮೊದಲು ತಿಳಿಹಸಿರು ಬಣ್ಣದಲ್ಲಿರುವ ಈ ಕಾಯಿಗಳು ಕ್ರಮೇಣ ಗಾಢ ನೇರಳೆ ಅಥವಾ ಕಪ್ಪು ಬಣ್ಣಕ್ಕೆ ತಿರುಗಿ ಹಣ್ಣಾಗುತ್ತವೆ. ಹಣ್ಣುಗಳು ರಸಯುಕ್ತವಾಗಿದ್ದು ಸ್ವಲ್ಪ ಸಿಹಿ ರುಚಿಯನ್ನು ಹೊಂದಿರುತ್ತವೆ. ಒಂದು ಹಣ್ಣಿನಲ್ಲಿ ಹಲವಾರು ಸಣ್ಣ ಬೀಜಗಳು ಕಂಡುಬರುತ್ತವೆ.
ಸಾಮಾನ್ಯವಾಗಿ ಎಲ್ಲೆಡೆ ಕಂಡುಬರುವ ಈ ಸಸ್ಯದ ಹಣ್ಣುಗಳನ್ನು ಅಳಿಲುಗಳು ಮತ್ತು ಹಲವಾರು ಪಕ್ಷಿಗಳು ಆಹಾರವಾಗಿ ಬಳಸುತ್ತವೆ.

ಸೌತೆ, ಕಲ್ಲಂಗಡಿ ಹಾಗೂ ಕುಂಬಳಕಾಯಿ ಜಾತಿಯ ಬಳ್ಳಿ ಸಂಕುಲಕ್ಕೆ ಸೇರಿದ ಒಂದು ಕಾಡುಬಳ್ಳಿಯೇ ಈ ಮೆಕ್ಕೆಕಾಯಿ ಬಳ್ಳಿ. ಬೀಳುಬಿಟ್ಟ ಹೊಲಗದ್ದೆಗಳಲ್ಲಿ ಅಥವಾ ಮೇರೆಗಳಲ್ಲಿ ಎಲ್ಲೆಡೆ ನೆಲದಲ್ಲಿಯೇ ಹರಡಿ ಬೆಳೆಯುವ ಸಸ್ಯ. ಬಳ್ಳಿಯ ತಂತುಗಳು ಎಲ್ಲೆಡೆ ಪಸರಿಸಿ ಬೆಳೆಯುತ್ತವೆ. ಇದರ ಎಲೆಗಳು ಚಿಕ್ಕದಾಗಿದ್ದು ಇದರ ಎಲೆಗಳು ಚಿಕ್ಕದಾಗಿದ್ದು ಅಂಚುಗಳಲ್ಲಿ ಒಳಕ್ಕೆ ವಿಭಜಿತವಾದ ರೂಪವನ್ನು ಹೊಂದಿರುತ್ತವೆ. ಬಳ್ಳಿಯಲ್ಲಿ ಸಾಮಾನ್ಯವಾಗಿ ಗೋಳಾಕಾರದ ಹಸಿರು ಬಣ್ಣದ ಕಾಯಿ ಬೆಳೆಯುತ್ತದೆ. ಹಣ್ಣು ಬಲಿತಾಗ ಹಳದಿ ಬಣ್ಣ ಪಡೆಯುತ್ತದೆ. ಈ ಕಾಯಿಯ ತಿರುಳು ತೀವ್ರ ಕಹಿ ರುಚಿಯನ್ನು ಹೊಂದಿದ್ದು ಸಾಮಾನ್ಯವಾಗಿ ತಿನ್ನಲು ಯೋಗ್ಯವಲ್ಲ. ಆದರೆ ಕೆಲವು ಸ್ಥಳಗಳಲ್ಲಿ ಇದರ ಹಣ್ಣು ಮತ್ತು ಬೀಜಗಳನ್ನು ಸಾಂಪ್ರದಾಯಿಕ ಔಷಧೀಯ ಬಳಕೆಗಳಿಗೆ ಬಳಸಲಾಗುತ್ತದೆ.

ಸಿಂಬಳೆ (ಚಳ್ಳೆ/ಅಂಟು) ಹಣ್ಣಿನ ಗಿಡ (Cordia dichotoma):
ಪ್ರಕೃತಿಯಲ್ಲಿ ಸಹಜವಾಗಿಯೇ ಬೆಳೆಯುವ ಗಿಡಗಳಲ್ಲಿ ಇದೂ ಸಹ ಒಂದು. ತುಂಬಾ ದೊಡ್ಡದಾಗಿ ಅಲ್ಲದಿದ್ದರೂ ಸುಮಾರು 20 ರಿಂದ 25 ಅಡಿ ಎತ್ತರದವರೆಗೆ ಬೆಳೆಯುವ ಮಧ್ಯಮ ಗಾತ್ರದ ಮರ. ಎಲ್ಲೆಡೆ ಕಂಡುಬರುವ ಹಸಿರು ಸಸ್ಯವರ್ಗಗಳಲ್ಲಿ ಇದೂ ಒಂದು. ಇದರ ಹಸಿರು ಕಾಯಿಗಳು ಗೋಲಿ ಆಕಾರ ಹಾಗೂ ಗಾತ್ರ ಹೊಂದಿದ್ದು, ಒಳಗೆ ಗಟ್ಟಿ ಬೀಜದ ಜೊತೆ ಅಂಟಿನಂಶದ ಅಥವಾ ಲೋಳೆಯಂತಹ ತಿರುಳು ಒಳಗೊಂಡಿರುತ್ತದೆ. ಆ ತಿರುಳನ್ನು ಸವಿದು, ತುಸು ಗಾತ್ರದಲ್ಲಿ ದೊಡ್ಡದಾಗಿರುವ ಗಟ್ಟಿ ಬೀಜವನ್ನು ಹೊರಗೆ ಎಸೆಯಲಾಗುತ್ತದೆ. ಹಣ್ಣಾದ ಕಾಯಿ ತಿಳಿ ಹಳದಿ ಅಥವಾ ಬಾದಾಮಿ ಬಣ್ಣವನ್ನು ಪಡೆಯುತ್ತದೆ ಹಾಗೂ ಒಳಗಿನ ತಿರುಳು ಹೆಚ್ಚಿನ ರುಚಿಯನ್ನು ಹೊಂದಿರುತ್ತದೆ. ಚಿಕ್ಕ ಮಕ್ಕಳು ಸಹಿತ ಎಲ್ಲರೂ ಈ ಹಣ್ಣನ್ನು ಸವಿಯುತ್ತಾರೆ.
ದ್ವಾರ ಹುಣಸೆ ಮರ (Pithecellobium dulce)

ವಸಂತ ಕಾಲದಲ್ಲಿ ಸುಗಂಧಯುಕ್ತ ಬಿಳಿ ಹೂಗಳು ಅರಳಿ, ನಂತರ ಹಾಲಿನಂತಿರುವ ಅಂಟಿನಂಶ (latex) ಹೊಂದಿರುವ ಹಸಿರು ಕಾಯಿಗಳು ಕಟ್ಟುತ್ತವೆ. ಕ್ರಮೇಣ ಅವು ಗುಲಾಬಿ ಅಥವಾ ಕೆಂಪು ಬಣ್ಣಕ್ಕೆ ತಿರುಗಿ, ಪಕ್ವವಾದಾಗ ನೇರಳೆ ಅಥವಾ ಕಪ್ಪು ಬಣ್ಣವನ್ನು ಆವರಿಸಿಕೊಳ್ಳುತ್ತವೆ. ಜೊತೆಗೆ ಸಿಹಿ-ಹುಳಿ ರುಚಿಯನ್ನು ಹೊಂದಿರುತ್ತವೆ. ಸಾಮಾನ್ಯವಾಗಿ ಒಂದು ಹಣ್ಣಿನಲ್ಲಿ 2–8 ಸಣ್ಣ ಬೀಜಗಳು ಇರುತ್ತವೆ.
ಹಕ್ಕಿ-ಪಕ್ಷಿಗಳ ಪ್ರಿಯವಾದ ಹಣ್ಣಿನ ವಿಧವನ್ನು ಕೊಡುವ ದೊಡ್ಡ ಮರಗಳಲ್ಲಿ ದ್ವಾರ ಹುಣಸೆ ಪ್ರಮುಖವಾದುದು. ಇದು ಸಾಮಾನ್ಯವಾಗಿ ಸುಮಾರು ಮೂವತ್ತರಿಂದ ನಲವತ್ತು ಅಡಿ ಅಥವಾ ಅದಕ್ಕಿಂತ ಹೆಚ್ಚು ಎತ್ತರಕ್ಕೆ ಬೆಳೆಯುವ ಮರ. ಗಿಡದ ಟೊಂಗೆಗಳಲ್ಲಿ ಸಾಮಾನ್ಯವಾಗಿ ಜೋಡಿಯಾಗಿ ತೀಕ್ಷ್ಣ ಮುಳ್ಳುಗಳು ಕಂಡುಬರುತ್ತವೆ. ಎಲೆಗಳು ಸಣ್ಣಸಣ್ಣ ಜೋಡಿಗಳಾಗಿ ಇರುವ ಸಂಯುಕ್ತ ಎಲೆಗಳಾಗಿದ್ದು, ಮರಕ್ಕೆ ಸೊಂಪಾದ ಹಸಿರು ರೂಪ ನೀಡುತ್ತವೆ.
ವಸಂತಕಾಲದಲ್ಲಿ ಸಣ್ಣ ಬಿಳಿ-ಹಸಿರು ಹೂಗಳು ಮೂಡಿ ನಂತರ ಹಣ್ಣುಗಳು ಕಟ್ಟುತ್ತವೆ. ಹಣ್ಣುಗಳು ಶೇಂಗಾ ಕಾಯಿಯಂತಿರುವ ಸುರುಳಿಯಾದ ಕೊಂಬು (pod) ರೂಪದಲ್ಲಿ ಬೆಳೆಯುತ್ತವೆ. ಪಕ್ವವಾಗುವ ವೇಳೆ ಹೊರಗಿನ ಹಸಿರು ತೊಗಟೆ ಕ್ರಮೇಣ ಗುಲಾಬಿ ಅಥವಾ ಕೆಂಪು ಮಿಶ್ರಿತ ಬಣ್ಣ ಪಡೆದು ಬಿರುಕು ಬಿಟ್ಟು ತೆರೆದುಕೊಳ್ಳುತ್ತದೆ. ಒಳಭಾಗದಲ್ಲಿ ಕಪ್ಪು ಬಣ್ಣದ ಗಟ್ಟಿ ಬೀಜಗಳನ್ನು ಸುತ್ತುವಂತೆ ಬಿಳಿ ಅಥವಾ ಗುಲಾಬಿ ಮಿಶ್ರಿತ ಸಿಹಿ ತಿರುಳು ಕಾಣುತ್ತದೆ. ಈ ತಿರುಳನ್ನು ಪಕ್ಷಿಗಳು ಮತ್ತು ಮಕ್ಕಳು ತಿನ್ನುವುದನ್ನು ಸಾಮಾನ್ಯವಾಗಿ ನೋಡಬಹುದು.
80–90ರ ದಶಕದಲ್ಲಿ ಬೆಳೆದ ಹಲವಾರು ಜನರಿಗೆ ಈ ಹಣ್ಣುಗಳು ಅವರ ಬಾಲ್ಯದ ನೆನಪುಗಳನ್ನು ಜಾಗೃತಿಗೊಳಿಸುವ ಪರಿಚಿತವಾದ ಕಾಡುಹಣ್ಣುಗಳಲ್ಲಿ ಒಂದಾಗಿದೆ. ಈ ಮೇಲಿನ ಸಸ್ಯವರ್ಗದ ಹೆಸರು ಪ್ರಾದೇಶಿಕ ಭಾಷೆಯ ಆಧಾರದ ಮೇಲೆ ಜನತೆಯ ಆಡುಭಾಷೆಯಲ್ಲಿ ವಿಭಿನ್ನವಾಗಿರುತ್ತದೆ. ಆದರೆ, ಅವುಗಳ ಬಳಕೆ, ಉಪಯೋಗ ಮತ್ತು ಇತರೆ ಔಷಧೋಪಚಾರದ ಮಾಹಿತಿ ಹೆಚ್ಚಾಗಿ ಕಾಡಿನಲ್ಲಿ ವಾಸಿಸುವ ಜನತೆಗೆ ಅತ್ಯಂತ ಕರಾರುವಕ್ಕಾಗಿರುತ್ತದೆ.
ಈ ಕಲಿಕೆಯ ಜೊತೆಗೆ, ಅಳಿವಿನಂಚಿನಲ್ಲಿರುವ ಇಂತಹ ಸಸ್ಯ ಸಂಪತ್ತಿನ ಸಂರಕ್ಷಣೆ ಹಾಗೂ ಹೆಚ್ಚೆಚ್ಚು ಬೆಳೆಸಲು ಕ್ರಮವಹಿಸಬೇಕು. ಹಾಗೆಯೇ, ಸೂಕ್ತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವುದರ ಮೂಲಕ ಬೆಳೆಯುವ ರೈತರಿಗೆ, ಯುವ ಉತ್ಸಾಹಿ ಕೃಷಿಕರಿಗೆ ವಿಶೇಷ ಪ್ರೋತ್ಸಾಹ ನೀಡಿ ಚೈತನ್ಯ ತುಂಬುವ ಕೆಲಸ ಅರಣ್ಯ ಇಲಾಖೆ ಹಾಗೂ ಸಂಬಂಧಿತ ಅಧಿಕಾರಿಗಳು ಮುತುವರ್ಜಿವಹಿಸಿ ಗಮನಹರಿಸಿವುದು ಬಹುಮುಖ್ಯ. ನಮ್ಮೆಲ್ಲರ ಆಶಯವೂ ಪೂರಕ ಸಹಕಾರದೊಂದಿಗೆ ಬರುವ ದಿನಗಳಲ್ಲಿ ಈಡೇರುವಂತಾಗಲಿ.
ಪರಿಸರವೇ ಸಕಲ ಜೀವ-ಸಂಕುಲಕ್ಕೆ ಬದುಕು; ಹೊಚ್ಚ ಹೊಸ ಹಸಿರು ಪರಿಸರವನ್ನ ಮತ್ತೆ ಒಕ್ಕೊರಲಿನಿಂದ ಅತ್ಯಂತ ತುರ್ತಾಗಿ ಕಟ್ಟಬೇಕಾಗಿರುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ.

ವಸಂತ ಕಾಲದಲ್ಲಿ ಸುಗಂಧಯುಕ್ತ ಬಿಳಿ ಹೂಗಳು ಅರಳಿ, ನಂತರ ಹಾಲಿನಂತಿರುವ ಅಂಟಿನಂಶ (latex) ಹೊಂದಿರುವ ಹಸಿರು ಕಾಯಿಗಳು ಕಟ್ಟುತ್ತವೆ. ಕ್ರಮೇಣ ಅವು ಗುಲಾಬಿ ಅಥವಾ ಕೆಂಪು ಬಣ್ಣಕ್ಕೆ ತಿರುಗಿ, ಪಕ್ವವಾದಾಗ ನೇರಳೆ ಅಥವಾ ಕಪ್ಪು ಬಣ್ಣವನ್ನು ಆವರಿಸಿಕೊಳ್ಳುತ್ತವೆ. ಜೊತೆಗೆ ಸಿಹಿ-ಹುಳಿ ರುಚಿಯನ್ನು ಹೊಂದಿರುತ್ತವೆ. ಸಾಮಾನ್ಯವಾಗಿ ಒಂದು ಹಣ್ಣಿನಲ್ಲಿ 2–8 ಸಣ್ಣ ಬೀಜಗಳು ಇರುತ್ತವೆ.
