ವನಬಂಧ-09

ವನಬಂಧ-09

ಎಡದಿಂದ ಬಲಕ್ಕೆ:

  1. ಶ್ಯಾಮಲ ವರ್ಣದ ಹಕ್ಕಿಯ ಹಿಂಭಾಗದಲ್ಲಿ ಬಿಳಿ ಬಣ್ಣವೂ ಇದೆ (2)
  2. ಕೆಂಪು ಕೊಕ್ಕಿನ ಈ ಹಕ್ಕಿಗೆ ಕೆರೆ ದಂಡೆಗಳ ಹುಲ್ಲು ಪೊದೆಗಳಲ್ಲಿ ಮೊಟ್ಟೆ ಇಡುವುದೇ ಸಂಭ್ರಮ (3)
  3. ಮುತ್ತುಗಳನ್ನು ಹುಡುಕಲು ಹತ್ತಿ ಹತ್ತಿ ಹೋಗಬೇಕಿರುವ ಈ ಊರು ಕಾವೇರಿ ದಡದಲ್ಲಿದೆ (3)
  4. ಗರುಡವೊಂದು ಗಹನವಾಗಿ ಗಾಳಿಯಲ್ಲಿ ತೇಲಾಡಲು ಈ ಜಾಗ ಸೂಕ್ತ (3)
  5. ಜೇಬಿನಲ್ಲೂ ಬೀಡು ಬಿಡಬಲ್ಲ ಜೀವಿ (2)
  6. ಬಿದಿರು ಹಾಗೂ ಮರದಿಂದ ಜೀವ ಪಡೆವ ಈ ವಸ್ತು ಓದಲು ಹಾಗೂ ಬರೆಯಲು ಉಪಯುಕ್ತ (3)
  7. ಅಮೇಝಾನ್, ಕಾಂಗೋ ಮುಂತಾದ ಅಗಾಧ ಜಲರಾಶಿಗಳನ್ನು ಹೀಗೂ ಕರೆಯಬಹುದು (4)
  8. ಗಜರಾಜನ ಹೆಸರಿಗೊಂದು ಕಲ್ಲು ಸುತ್ತಿಕೊಂಡಿರುವ ಈ ಊರು ಬೆಂಗಳೂರಿನ ಆಸುಪಾಸಿನಲ್ಲಿ ಬಲು ಜನಪ್ರಿಯ. (4)

ಮೇಲಿನಿಂದ ಕೆಳಕ್ಕೆ:

  1. ಇವರಿಗೆ ಮರವನ್ನು ಕುಟ್ಟುವುದೊಂದೇ ಕಾಯಕ (5)
  2. ಅಕ್ಕಿಯು ಹುಟ್ಟುವ ಮುನ್ನ ಈ ಹಂತದಲ್ಲಿ ಇರುತ್ತದೆ. (2)
  3. ಮುತ್ತಿಗೆ ಹಾಕಬಹುದೇ ಈ ಮರದ ಹೂವುಗಳು (3)
  4. ಯಾವಾಗಲೂ ಎತ್ತರದಲ್ಲೇ ಹಾರಾಡುವ ರೂಢಿ ಇರುವ ಹಕ್ಕಿ ಆದರೆ ಗಾರುಡಿಯಲ್ಲ (3)
  5. ಸದಾ ಗುಂಯ್ ಗುಡುವ ಈ ಜೀವಿಗಳ ಮನೆ ತುಂಬಾ ಸಿಹಿ ಸಿಹಿ (4)
  6. ನಮ್ಮೆಲ್ಲರ ಅಚ್ಚುಮೆಚ್ಚಿನ ಕನ್ನಡದ ಪರಿಸರ ಮಾಸಿಕ ಪತ್ರಿಕೆ (3)
  7. ಮುದ್ದಾದ ಈ ಆನೆಗೆ ಬಲು ಸೊಕ್ಕು (3)
  8. ಮೈತುಂಬಾ ಕೂದಲು ತುಂಬಿರುವ ಪ್ರಾಣಿ (3)

ವನಬಂಧ – 07ರ ಉತ್ತರಗಳು
ಎಡದಿಂದ ಬಲಕ್ಕೆ

  1. ಚಿಟ್ಟೆ 2. ರಣಹದ್ದು 3. ಒರತೆ 4. ಕಬಿನಿ 5. ಹಾತೆ 6. ರಾಮದಾಸ 7. ಮಡಿವಾಳ 8. ಗುಳುಮುಳುಕ

ಮೇಲಿನಿಂದ ಕೆಳಕ್ಕೆ

1. ಮಂಗಟ್ಟೆ 2. ಚಿರತೆ 3. ಹಕ್ಕಿ 4. ಕಳ್ಳಿಪೀರ 5. ಹಾವುರಾಣಿ 6. ದಾಸವಾಳ 7. ಮರಗುಬ್ಬಿ 8.ಕಪಿಲ

    “ಈ ಮೇಲಿನ ವನಬಂಧವನ್ನು ಉತ್ತರಿಸಿ ನಮ್ಮ ವಿಳಾಸಕ್ಕೆ ಇದೇ ತಿಂಗಳ ದಿನಾಂಕ 20ರ ಒಳಗೆ ಕಳುಹಿಸಿ ಕೊಟ್ಟವರಿಗೆ ಪುಟ್ಟ ಬಹುಮಾನ ನೀಡಲಾಗುವುದು. (ವಿಳಾಸಕ್ಕಾಗಿ ನೀವೂ ಕಾನನಕ್ಕೆ ಬರೆಯಬಹುದು ಅಂಕಣವನ್ನು ಓದಿ)”

    ಸುಬ್ಬು ಬಾದಲ್
             ಬೆಂಗಳೂರು ಜಿಲ್ಲೆ

    Spread the love

    Leave a Reply

    Your email address will not be published. Required fields are marked *

    error: Content is protected.