ವನಬಂಧ-04
ಎಡದಿಂದ ಬಲಕ್ಕೆ:
1 ಸೀತೆಯ ಶೋಕ ಈ ಕೇಸರಿ ಹೂವಿನ ವನಕ್ಕೆ ಚೆನ್ನಾಗಿ ತಿಳಿದಿರಬಹುದು- (5)
2 ಬಡವರ ಬಾದಾಮಿ – (2)
3 ಚಿಮಿಣಿ ಉರಿಸಲೆಂದು ಬಯಲು ಸೀಮೆಯಿಂದ ತಂದ ಎಣ್ಣೆ- (4)
5 ಮಳೆಗಾಲದಲ್ಲಿ ಕಂಡುಬರುವ ಈ ಸಸ್ಯಗಳಿರುವಲ್ಲಿ ನಿಧಾನ ನಡೆಯುವುದು ಉತ್ತಮ, ಇಲ್ಲವಾದಲ್ಲಿ ಜಾರುವುದು ಖಚಿತ – (2)
7 ತೈಲವೇ ನೀರಿನಂತೆ ಸಿಗುವ ಈ ದೇಶದಲ್ಲಿ ಸೌದೆ ಇನ್ನೇಕೆ? – (2)
8 ಓ ನಾರಿ ಕೇಳಿಲ್ಲಿ! ತೆಂಗಿನಕಾಯಿಯನ್ನು ಹೀಗೂ ಎನ್ನುತ್ತಾರೆ- (4)
9 ಅಂಗಡಿಯಿಂದ ತಂದ ಈ ಹಣ್ಣಿನ ಹೆಸರಿನಲ್ಲಿ ಕಲ್ಲಿದೆ – (4)
10 ಕೊಡಗಿನ ಸುಗ್ಗಿಯ ಸಂಭ್ರಮಕ್ಕೆ ಈ ಹೆಸರು- (3)
12 ನಾಯಿ ಎಂದ ಕ್ಷಣ ನೆನಪಾಗುವ ಗುಣ – (3)
13 ಕನ್ನಡಿಗರಿರುವ ನಾಡಿನ ಆರಂಭದಲ್ಲಿ ‘ ಹಸುವಿನ ಮಗು’ವಿದೆ – (2)
14. ರುದ್ರಾಕ್ಷಿಯಲ್ಲಿ ಅಡಗಿರುವ ಗೊಂಚಲ ಹಣ್ಣು-(2)
ಮೇಲಿನಿಂದ ಕೆಳಕ್ಕೆ:
1 ಉತ್ತರಕನ್ನಡ ಜಿಲ್ಲೆಯ ದಟ್ಟ ಕಾಡುಗಳ ಪೋಷಿಣಿ! ಜಲಮೂಲ- (5)
2 ತಾಳೆ ಮತ್ತು ಬೈನೇ ಮರದಿಂದ ಬರುವ ಪಾನೀಯ- (2)
3 ಆಂಗ್ಲರು ಮತ್ತು ಕನ್ನಡಿಗರು ಸೇರಿ “ಸಮುದ್ರ ಮತ್ತು ಎಲ್ಲೆ”ಯನ್ನು ಕೂಡಿಸಿ ಹೀಗೆ ಕರೆದರೆ ಅದೊಂದು ಜಲಚರ ಪ್ರಾಣಿ- (3)
4 ದೇಶದ ಬೆನ್ನೆಲುಬು ರೈತನ ಮಿತ್ರ- (4)
‘6 ಅಪ್ಪಿಕೋ’ ಚಳುವಳಿಗೆ ಪ್ರೇರಣೆಯಾದ ಬಹುಗುಣರ ಈ ಆಂದೋಲನ- (2)
7 ಸೂರ್ಯ ಮತ್ತವನ ಒಂಬತ್ತು ಸ್ನೇಹಿತರು, ಇತರೆ ಗೆಳೆಯರ ಬಳಗ ಆಕಾಶದಲ್ಲಿದ್ದರೆ- (4)
9 ಮುಂದೆಯಿಂದ, ಹಿಂದೆಯಿಂದ ಹೇಗೆ ಓದಿದರೂ ಅಪ್ಪಟ ಚಿನ್ನವೇ! – (3)
11 ಸೀನುವಾಗ ಮುಚ್ಚಿದ ಕಣ್ಣು- (2)
ವನಬಂಧ – 03ರ ಉತ್ತರಗಳು
ಎಡದಿಂದ ಬಲಕ್ಕೆ
1 ಹಸುರಿನಗಿರಿಗಳಸಾಲು 6. ಓರೆಯಾಗಿದೆ 7. ಪೇಟಾ 9. ಅಂಗಾಂಶ 11. ಸೀವಿರಾಮನ್ 12. ಕೆಂಪು 13. ಗಂಗಾ 14. ಜೋಗ 16. ಮರುಭೂಮಿ 17. ಲಾಮ 19. ಕ್ಯೂರಿ 20. ಬುಲೆಟ್ ರೈಲು 21. ಅಕೇಶಿಯಾ 23. ವನಮಹೋತ್ಸವ 26. ಉಗುರು 27. ಕಾಜೀರಂಗ 29. ಅಮೆಜಾನ್ 32. ರೆಕ್ಕೆಗಳು 33. ಸವಕಳಿ 34. ಡೈಕ್ಲೋಫಿನಾಕ್ 36. ಜಲ್ಲಿಕಟ್ಟು 37. ಮಲ್ಲಿಕಾ 38. ಗುಡುಗು 41. ದೇವರು 43. ಕರಕರ 45. ಎಲಿಯಂಸೆಪಾ 46. ಸಯನೈಡ್ 47. ಪರಂಗಿ 48. ಲಂಗೂರ್ 49. ಹುಕಡಿಕಹಕ್ಕಿ 51. ಜೇಸಿ ಬೋಸ್ 52. ನೇರಳೆಗುಲಾಬಿ 55. ಸ್ವಾಮಿನಾಥನ್ 56. ದ್ಯುತಿಸಂಶ್ಲೇಷಣೆ 58. ಗುಬ್ಬಚ್ಚಿ 59. ಆಕರ್ಷಣೆ 60. ಮೊಲ 62. ತೆವಳುತ್ತಾ 64. ಸುಂದರಲಾಲ್ ಬಹುಗುಣ 67. ಕಾಂಗರೂ 68. ಸಿಟ್ರಿಕ್ 69. ಹತ್ತಿ
ಮೇಲಿನಿಂದ ಕೆಳಕ್ಕೆ
1 ಹಸಿರುಮನೆ ಅನಿಲ 2. ಗಿಳಿ 3. ಗಳಗಂಡ 4. ಲುಸೀಫರ್ 5. ಪರಾಗಸ್ಪರ್ಶ 6. ಓನ್ ಜೋ 8. ಟಾರಂಟುಲಾ 9. ಅಂಜೂರ 10. ಶತಾವರಿ 12. ಕೆಂಜಳಿಲು 15. ಸಿವೆಟ್ ಕಾಫಿ 18. ಮದರಂಗಿ 19. ಕ್ಯೂಬಾ 20. ಬುರುಡೆ 22. ಶಿಕಾರಿ 23. ವಸುಂಧರೆ 24. ಹೋರಿ 25. ವಜ್ರ 26. ಉಣ್ಣೆಮಾಂಸ 27. ಕಾರ್ಬನ್ ಡೈ ಆಕ್ಸೈಡ್ 28. ಪ್ಲಾಸ್ಟಿಕ್ 29. ಅಳಿಲು 30. ಕಲ್ಲಿದ್ದಲು 31. ಮಟ್ಟುಗುಳ್ಳ 33. ಸರೋವರ 35. ನಾಗರ 39. ಗುರುತ್ವಾಕರ್ಷಣೆ 40. ಕಾಡುಪಾಪ 42. ಓಯಸಿಸ್ 44. ರಬ್ಬರ್ 45. ಏಲಕ್ಕಿ 48. ಲಂಟಾನ 50. ಸಂರಕ್ಷಣೆ 51. ಜೇಡ 53. ಗುಲ್ ಮೊಹರ್ 54. ಡುಬ್ಬ 57. ಸಂತಾನೋತ್ಪತ್ತಿ 59. ಆಸ್ಟ್ರಿಚ್ 61. ಮಿಡತೆ 63. ವಲಸಿಗ 65. ಕಣಜ 66. ಬಕ 67. ಕಾಂಡ್ಲಾ
“ಈ ಮೇಲಿನ ವನಬಂಧವನ್ನು ಉತ್ತರಿಸಿ ನಮ್ಮ ವಿಳಾಸಕ್ಕೆ ಇದೇ ತಿಂಗಳ ದಿನಾಂಕ 20ರ ಒಳಗೆ ಕಳುಹಿಸಿ ಕೊಟ್ಟವರಿಗೆ ಪುಟ್ಟ ಬಹುಮಾನ ನೀಡಲಾಗುವುದು. (ವಿಳಾಸಕ್ಕಾಗಿ ನೀವೂ ಕಾನನಕ್ಕೆ ಬರೆಯಬಹುದು ಅಂಕಣವನ್ನು ಓದಿ)”
– ಅಕ್ಷತ ಹೆಚ್. ಕೆ.
ಚಿಕ್ಕಮಗಳೂರು ಜಿಲ್ಲೆ