‘ಅರ್ಲಿ ಬರ್ಡ್’ ನಿಂದ ಪಕ್ಷಿಗಳ ಕುರಿತಾದ ಉಚಿತ ಆನ್ಲೈನ್ ಕೋರ್ಸ್
‘ಪಕ್ಷಿಗಳ ವಿಸ್ಮಯ ಲೋಕ’ ಎಂಬುದು ಉಚಿತ, ಸ್ವಯಂ-ಗತಿಯ, ಮಲ್ಟಿಮೀಡಿಯಾವನ್ನು ಒಳಗೊಂಡಂತಹ ಕೋರ್ಸ್ ಆಗಿದ್ದು ಪಕ್ಷಿಗಳ ಆಕರ್ಷಕ ಜಗತ್ತನ್ನು ಪರಿಚಯಿಸಲು ವಿನ್ಯಾಸಗೊಳಿಸಲಾಗಿದೆ. ಅವುಗಳ ಮೂಲ, ವಿಶಿಷ್ಟ ನಡವಳಿಕೆಗಳು ಮತ್ತು ಅದ್ಭುತವಾದ ಬದುಕುಳಿಯುವ ಕೌಶಲ್ಯಗಳ ಬಗ್ಗೆ ತಿಳಿಸಿಕೊಡಲಾಗುತ್ತದೆ.
ಉತ್ತಮ ಗುಣಮಟ್ಟದ ವೀಡಿಯೊಗಳು ಮತ್ತು ಆಕರ್ಷಕವಾದ ಚಟುವಟಿಕೆಗಳಿಂದ ಕೂಡಿದ ಈ ಕೋರ್ಸ್, ಪಕ್ಷಿಗಳ ಜೀವನವನ್ನು ಜೀವಂತಗೊಳಿಸುತ್ತಾ, ಪ್ರಕೃತಿ, ಸಂಸ್ಕೃತಿ ಮತ್ತು ದೈನಂದಿನ ಜೀವನದಲ್ಲಿ ಅವುಗಳ ಮಹತ್ತರ ಪಾತ್ರವನ್ನು ತಿಳಿಯಪಡಿಸುತ್ತದೆ.
ಕೋರ್ಸ್ ವಿವರಗಳು
ಏನಿದು?
ಪಕ್ಷಿಗಳ ಸೌಂದರ್ಯ ಮತ್ತು ಮಹತ್ವದ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸುವಂತೆ ಜನರನ್ನು ಪ್ರೇರೇಪಿಸಲು ವಿನ್ಯಾಸಗೊಳಿಸಲಾದ ಮಲ್ಟಿಮೀಡಿಯಾ, ಮೊಬೈಲ್ ಸ್ನೇಹಿ, ಉಚಿತ ಆನ್ಲೈನ್ ಕೋರ್ಸ್.
ಇದನ್ನು ಯಾರು ತೆಗೆದುಕೊಳ್ಳಬಹುದು?
11 ವರ್ಷ ಮತ್ತು ಅದಕ್ಕೂ ಮೇಲ್ಪಟ್ಟ ಎಲ್ಲಾ ವಯಸ್ಸಿನ ಕುತೂಹಲವುಳ್ಳ ಪ್ರಕೃತಿ ಪ್ರಿಯರು ತೆಗೆದುಕೊಳ್ಳಬಹುದು. ಕನ್ನಡ ಭಾಷೆಯನ್ನು ಓದಲು ಮತ್ತು ಅರ್ಥ ಮಾಡಿಕೊಳ್ಳಲು ಸಾಧ್ಯವಾದಲ್ಲಿ, ಇಂಟರ್ನೆಟ್ ಇರುವ ಸ್ಮಾರ್ಟ್ ಫೋನ್ ಹೊಂದಿರುವ ಯಾರಾದರೂ ಕೋರ್ಸ್ಗೆ ದಾಖಲಾಗಬಹುದು.
ಎಷ್ಟು ಸಮಯ ತೆಗೆದುಕೊಳ್ಳುತ್ತದೆ?
ಇದು ಸ್ವಯಂ-ಗತಿಯ ಕೋರ್ಸ್. ನೋಂದಣಿ ಮಾಡಿದ ನಂತರ, ನಿಮ್ಮ ಅನುಕೂಲಕ್ಕೆ ತಕ್ಕಂತೆ ಅದನ್ನು ಪೂರ್ಣಗೊಳಿಸಬಹುದು. ಇದು ಪ್ರಾರಂಭದಿಂದ ಅಂತ್ಯಕ್ಕೆ 3 ಗಂಟೆಗಳನ್ನು ತೆಗೆದುಕೊಳ್ಳುಬಹುದೆಂದು ಅಂದಾಜಿಸಲಾಗಿದೆ.
ಇದು ಹೇಗೆ ರಚನೆಯಾಗಿದೆ?
ಇದು 4 ಅಧ್ಯಾಯಗಳನ್ನು ಒಳಗೊಂಡಿದೆ, ಅಧ್ಯಾಯಗಳನ್ನು ಮತ್ತಷ್ಟು ವಿಷಯಗಳಾಗಿ ವಿಂಗಡಿಸಲಾಗಿದೆ, ಪ್ರತಿ ವಿಷಯವೂ ಒಂದಕ್ಕೊಂದು ಸಂಬಂಧಿಸಿದೆ.
ಕೋರ್ಸ್ ಅನ್ನು ಇಲ್ಲಿ ಪಡೆಯಬಹುದು: https://early-bird.in/the-wonder-of-birds/
ಅಥವಾ QR ಕೋಡನ್ನು ಸ್ಕ್ಯಾನ್ ಮಾಡಿ

ಇದು ಏಕೆ ಮುಖ್ಯ?
ಪಕ್ಷಿಗಳು ಬಹಳ ಹಿಂದಿನಿಂದಲೂ ಮಾನವನ ಕಲ್ಪನೆಯನ್ನು ಆಕರ್ಷಿಸಿವೆ. ಸಾಹಿತ್ಯ, ಕಲೆ, ಸಂಸ್ಕೃತಿ ಮತ್ತು ಜಾನಪದವನ್ನು ಪ್ರೇರೇಪಿಸುತ್ತಿವೆ. ಅವುಗಳ ಆಕರ್ಷಕ ನಡವಳಿಕೆಗಳು ಮತ್ತು ಅದ್ಭುತ ಸಾಹಸಗಳು, ನೈಸರ್ಗಿಕ ಪ್ರಪಂಚದ ಅದ್ಭುತಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಆಚರಿಸಲು ಕೈಬೀಸಿ ಕರೆಯುತ್ತವೆ. ಭವ್ಯವಾದ ಸಾರಸ್ ಕ್ರೇನ್ನಿಂದ ಹಿಡಿದು ಶಿಳ್ಳೆ ಹೊಡೆಯುವ ಸರಳೆ ಸಿಳ್ಳಾರ ಹಕ್ಕಿಯವರೆಗೆ, ಪ್ರತಿಯೊಂದು ಪ್ರಭೇದವು ನಮ್ಮ ಜೀವನವನ್ನು ಶ್ರೀಮಂತಗೊಳಿಸುವ ವಿಶಿಷ್ಟ ಕಥೆಯನ್ನು ಹೇಳುತ್ತದೆ.
ಲೇಖನ: ಅರ್ಲಿ ಬರ್ಡ್ ತಂಡ
ಬೆಂಗಳೂರು ಜಿಲ್ಲೆ